ಬೀದರ್ : ಬಾವಿಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮುಚಳಂಬ್ ಗ್ರಾಮದ ನಿವಾಸಿ ಅವಿನಾಶ್ ಮಚಕುರೆ (16),ಕೋಟಗೆರಾ ಗ್ರಾಮದ ನಿವಾಸಿ ನಾಗೇಶ್ ಮಾನೆ (16) ಎಂದು ಗುರುತಿಸಲಾಗಿದೆ.
ಮೃತ ಬಾಲಕರಿಬ್ಬರು ಸಂಬಂಧಿಕರಾಗಿದ್ದು, ಇತ್ತೀಚಿಗೆ ನಡೆದ ಹತ್ತನೇ ಪರೀಕ್ಷೆ ಬರೆದಿದ್ದರು. ಶಾಲೆ ರಜೆ ಇರುವ ಕಾರಣದಿಂದ ಭಾಗೇಶ್ ಎಂಬಾತ ಅವಿನಾಶ್ ಎಂಬುವವನ ಊರಾದ ಮುಚಳಂಬಕ್ಕೆ ಹೋಗಿದ್ದನು. ಇಂದು ಮದ್ಯಾಹ್ನ ಗೆಳೆಯರ ಜೊತೆಗೂಡಿ ಈಜಲು ಬಾವಿಗೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಬಸವಕಲ್ಯಾಣ ಗ್ರಾಮೀಣ ಪೊಲೀಸರು, ಸ್ಥಳೀಯರ ಸಹಾಯದೊಂದಿಗೆ ಮೃತದೇಹಗಳನ್ನು ಬಾವಿಯಿಂದ ಹೊರತೆಗೆದು, ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW