ಭಾರತ ಮತ್ತ ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ನಿಗದಿತ ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಆಸಿಸ್ ಪಡೆ ಕೇವಲ 154 ರನ್ ಗಳಿಸಿ ಭಾರತದ ಎದುರು ಸೋಲು ಒಪ್ಪಿಕೊಂಡಿದೆ. ಅಲ್ಲದೇ 3-1 ಅಂತರದಿಂದ ಸರಣಿಯನ್ನು ಗೆಲ್ಲುವ ಮೂಲಕ ವಿಶ್ವಕಪ್ ಫೈನಲ್ ಪಂದ್ಯದ ಸೋಲಿಗೆ ಟೀಂ ಇಂಡಿಯಾ ಭರ್ಜರಿ ಸೇಡು ತೀರಿಸಿಕೊಂಡಿದೆ.
ಆಸಿಸ್ ಪರ ಟ್ರಾವಿಸ್ ಹೆಡ್ 31, ಟಿಮ್ ಡೇವಿಡ್ 19, ಬೆನ್ ಮೆಕ್‌ಡೆರ್ಮೋಟ್ 19, ಮ್ಯಾಥ್ ಶಾರ್ಟ್ 22 ಮತ್ತು ಮ್ಯಾಥ್ಯ ವೇಡ್ 36 ರನ್ ಗಳಿಸಿದರು. ಭಾರತದ ಪರ ಅಕ್ಷರ್ ಪಟೇಲ್ 3, ಚಹರ್ 2, ಬಿಫ್ಲೋಯ್ ಮತ್ತು ಆವೇಶ್ ತಲಾ 1 ವಿಕೆಟ್ ಪಡೆದರು.


