ಬಿಹಾರದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿದೆ. ಭಾಗಲ್ಪುರದ ಅಗುವಾನಿ-ಸುಲ್ತಂಗಂಜ್ ಸೇತುವೆ ಇಂದು ಸಂಜೆ ಗಂಗಾನದಿಯಲ್ಲಿ ಕುಸಿದಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ ಎಂಬುದು ಪ್ರಾಥಮಿಕ ತೀರ್ಮಾನ.
1700 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿದಿದೆ. ಸೇತುವೆಯ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 2015 ರಲ್ಲಿ ಹಾಕಿದರು. ಎಂಟು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.
ಸೇತುವೆ ಕುಸಿದಿರುವುದು ಇದು ಎರಡನೇ ಬಾರಿ. 2022ರಲ್ಲಿ ಸೇತುವೆಯ ಒಂದು ಭಾಗ ಕುಸಿದು ನದಿಗೆ ಬಿದ್ದಿತ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


