ತುರುವೇಕೆರೆ: ಭೀಕರ ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟ ದಾರುಣ ಘಟನೆ 150 ಎ ರಾಷ್ಟ್ರೀಯ ಹೆದ್ದಾರಿಯಲ್ಲಿಯಲ್ಲಿ ಬೆಳಗ್ಗೆ ಸುಮಾರು 10 ಗಂಟೆಗೆ ನಡೆದಿದೆ.
ಸಂಗ್ಲಾಪುರ ಗೇಟ್ ಬಳಿ ಇರುವ ಉಣ್ಣೆಬಸವೇಶ್ವರ ದೇವಸ್ಥಾನದ ಸ್ವಲ್ಪ ದೂರದಲ್ಲಿ ಹಾದು ಹೋಗಿರುವ 150 ಎ ರಾಷ್ಟ್ರೀಯ ಹೆದ್ದಾರಿಯಲ್ಲಿ, ಮಾಯಸಂದ್ರ ಕಡೆಯಿಂದ ಬರುತ್ತಿದ್ದ ಮಹೇಂದ್ರ ಜೀತೋ ಎಂಬ ನಾಲ್ಕು ಚಕ್ರದ ವಾಹನ ಅತಿ ವೇಗವಾಗಿ ಬಂದು, ತುರುವೇಕೆರೆ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ರಭಸವಾಗಿ ಗುದ್ದಿದ್ದರಿಂದ, ಸ್ಥಳದಲ್ಲಿ ದ್ವಿಚಕ್ರವಾಹನ ಸವಾರ ಮೃತಪಟ್ಟಿದ್ದಾನೆ.
ತುರುವೇಕೆರೆ ತಾಲೂಕಿನ ದಬ್ಬೇಗಟ್ಟ ಗ್ರಾಮದ ಸುರೇಶ್ ಮತ್ತು ಭಾಗ್ಯಮ್ಮ ಎಂಬುವರ ಒಬ್ಬನೇ ಮಗ ತಿಲಕ್ (22 ವರ್ಷ) ಮೃತಪಟ್ಟ ಯುವಕನಾಗಿದ್ದಾನೆ. ನಾಲ್ಕು ಚಕ್ರದ ವಾಹನದ ಹಿಂದೆ ಬರುತ್ತಿದ್ದ ಇನ್ನೊಂದು ದ್ವಿಚಕ್ರ ವಾಹನದಲ್ಲಿ ಇಬ್ಬರು ವಾಹನ ಸವಾರರಿದ್ದು ಅದರಲ್ಲಿ ಒಬ್ಬ ಯುವಕನಿಗೆ ಗಂಭೀರವಾದ ಗಾಯವಾಗಿದ್ದು, ಆತನನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಸರಣಿ ಅಪಘಾತದಲ್ಲಿ ದ್ವಿಚಕ್ರ ವಾಹನಗಳು ಪೂರ್ತಿ ಜಖಂಗೊಂಡಿವೆ, ಈ ಅಪಘಾತ ನಡೆದ ಸ್ಥಳದಿಂದ ಚಾಲಕ ನಾಪತ್ತೆಯಾಗಿದ್ದು, ಸ್ಥಳಕ್ಕೆ ಧಾವಿಸಿದ ಆರಕ್ಷಕ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತ ನಡೆದ 150 ಎ ರಾಷ್ಟ್ರೀಯ ಹೆದ್ದಾರಿ ತುಂಬಾ ಕಿರಿದಾಗಿದ್ದು ಇಲ್ಲಿಯವರೆಗೂ ಸುಮಾರು ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಮತ್ತೋರ್ವ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA