ದೆಹಲಿಯಲ್ಲಿ ಆರು ಮಂದಿಯ ತಂಡವೊಂದು ಯುವಕನೊಬ್ಬನನ್ನು ಕಡಿದು ಹತ್ಯೆ ಮಾಡಿದೆ. ವಾಹನ ನಿಲುಗಡೆ ವಿಚಾರವಾಗಿ ನಡೆದ ವಿವಾದ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ಹಾಗೂ ಮಗನ ಎದುರೇ ಭೀಕರ ಹತ್ಯೆ ನಡೆದಿದೆ. ಘಟನೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ.
ನಿನ್ನೆ ರಾತ್ರಿ 9.30ರ ಸುಮಾರಿಗೆ ಆಗ್ನೇಯ ದೆಹಲಿಯ ಸರಿತಾ ವಿಹಾರ್ ನಲ್ಲಿ ಈ ಘಟನೆ ನಡೆದಿದೆ. ಅರವಿಂದ್ ಮಂಡಲ್ ಕೊಲೆಯಾದ. ಶಾಲೆಯಿಂದ ಮಗ ಆಕಾಶ್ ನನ್ನು ಕರೆದು ವಾಪಸ್ ಬರುತ್ತಿದ್ದಾಗ ಅರವಿಂದ್ ಮಂಡಲ್, ಮನೋಜ್ ಹಲ್ದರ್ ಜತೆ ವಾಗ್ವಾದಕ್ಕೆ ಇಳಿದಿದ್ದಾನೆ. ಬೈಕ್ ಪಾರ್ಕಿಂಗ್ ಗೆ ಸಂಬಂಧಿಸಿದಂತೆ ವಿವಾದ ಉಂಟಾಗಿತ್ತು.
ಆದರೆ ರಾತ್ರಿ 9:30ರ ಸುಮಾರಿಗೆ ಮೂರು ಬೈಕ್ ಗಳಲ್ಲಿ ಬಂದ ದುಷ್ಕರ್ಮಿಗಳ ತಂಡ ಮನೆಗೆ ನುಗ್ಗಿ ಚಾಕುವಿನಿಂದ ಇರಿದಿದ್ದಾರೆ. ಅರವಿಂದ್ ಅವರನ್ನು ರಕ್ಷಿಸಲು ಯತ್ನಿಸಿದಾಗ ಅವರ ಪತ್ನಿ ರೇಖಾ ಕೂಡ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡ ಅರವಿಂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನು ಶೀಘ್ರವೇ ಬಂಧಿಸಲಾಗುವುದು ಮತ್ತು ಎಲ್ಲರೂ ಸರಿತಾ ವಿಹಾರ್ ನ ಪ್ರಿಯಾಂಕಾ ಕ್ಯಾಂಪ್ ನ ನಿವಾಸಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


