ಬೆಂಗಳೂರಿನಲ್ಲಿ ಮತ್ತೆ ಬೈಕ್, ಟ್ಯಾಕ್ಸಿ ಸೇವೆ ಪುನರಾರಂಭವಾಗಿದೆ. ಟಿಟ್ಟರ್ ಖಾತೆಯಲ್ಲಿ ಬೈಕ್ ಸೇವೆ ಆರಂಭದ ಬಗ್ಗೆ ಓಲಾ ಸಿಇಒ ಭವಿಶ್ ಅಗರ್ವಾಲ್ ಮಾಹಿತಿ ಹಂಚಿಕೊಂಡಿದ್ದಾರೆ.
5 ಕಿಲೋಮೀಟರ್ ಗೆ 25 ರೂ, 10 ಕಿಲೋಮೀಟರ್ ಗೆ 50 ರೂ ನಿಗದಿ ಮಾಡಲಾಗಿದೆ. ರಾಜಧಾನಿಯಲ್ಲಿ ಬೈಕ್ ಟ್ಯಾಕ್ಸಿಗಳ ನಿಷೇಧ ಜಾರಿಗೊಳಿಸುವಂತೆ ಕ್ಯಾಬ್ ಮತ್ತು ಆಟೋ ಸಂಘಟನೆಗಳು ಒತ್ತಾಯಿಸಿರುವ ಮಧ್ಯೆ ಓಲಾ ಬೈಕ್ ಟ್ಯಾಕ್ಸಿ ಸೇವೆ ಘೋಷಿಸಿದೆ.


