ಬೈಲಹೊಂಗಲ : ಬೈಲಹೊಂಗಲ ತಾಲೂಕಿನ ಗದ್ದಿಕೊರವಿನಕೊಪ್ಪ ಗ್ರಾಮದ ರೈತರ ಹೊಲವೊಂದರಲ್ಲಿ ಬೃಹತ್ ಗಾತ್ರದ ಬಿಳಿ ಬಣ್ಣ ದ ಬಲೂನ್ ಒಂದು ಪತ್ತೆಯಾಗಿದ್ದು ಸ್ಥಳದಲ್ಲಿ ಆತಂಕ ಸೃಷ್ಟಿಸಿದೆ.
ಪತ್ತೆಯಾದ ವಿಚಿತ್ರ ಬಲೂನ್ ಹವಾಮಾನ ಇಲಾಖೆಗೆ ಸಂಭಂದಿಸಿದ ಬೃಹತ್ ಗಾತ್ರದ ಬಲೂನಾಗಿದ್ದು ರೈತರ ಹೊಲದಲ್ಲಿ ಹಾರಿಬಂದು ಬಿದ್ದಿದೆ.
ಇದು ಕಂಡುಬರುತ್ತಿದ್ದಂತೆ ರೈತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಈಗಾಗಲೇ ಬಲೂನ್ ಕುರಿತು ಮಾಹಿತಿ ಪಡೆಯಲಾಗಿದ್ದು ಅವುಗಳಲ್ಲಿ ಬಳಸಲಾದ ಇಲೆಕ್ಟ್ರಾನಿಕ್ ವಸ್ತುಗಳು ಹವಾಮಾನ ಇಲಾಖೆಯಲ್ಲಿ ಬಳಸುವ ಸಾಧನಗಳಾಗಿವೆ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ಈ ವಸ್ತುಗಳನ್ನು, ಎತ್ತರದ ತಾಪಮಾನದ ಆರ್ದ್ರತೆ, ಗಾಳಿಯ ವೇಗ, ಗಾಳಿಯ ಒತ್ತಡ ಇತ್ಯಾದಿಗಳನ್ನು ಮೇಲ್ವಿಚಾರಣೆ ಮಾಡಲು ಬಳಸುವ ಏಕೈಕ ಸಾಧನವಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA