ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಕಳೆದ ಇಪ್ಪತ್ತಮೂರು ವರ್ಷಗಳ ನಂತರ ಭಾನುವಾರ ಆಲಿಕಲ್ಲು ಮಳೆ ಸುರಿದಿದ್ದು, ಆರ್ಭಟ ಹಿರಿಯೂರು ನಗರದಲ್ಲಿ ಜೋರಾಗಿಯೇ ಇತ್ತು.
ಬಿರುಗಾಳಿ ಸಹಿತ ಮಳೆಯ ಪರಿಣಾಮ ಮನೆ ಶೀಟುಗಳು , ಹೆಂಚುಗಳು ಹಾನಿಗೊಳಗಾಗಿವೆ. ಇನ್ನೊಂದೆಡೆ ಆಲಿಕಲ್ಲು ಮಳೆಗೆ ಟೊಮೆಟೋ ಸೇರಿದಂತೆ ಹಲವು ತರಕಾರಿ ಬೆಳೆಗಳಿಗೆ ಹಾನಿಯಾಗಿವೆ. ಬೃಹತ್ ಮರಗಿಡಗಳು ಧರೆಗುರುಳಿದ್ದು, ಮಳೆಗೆ ಜನರ ಜೀವನ ಅಸ್ತವ್ಯಸ್ತವಾಗಿದೆ.
ಹಿರಿಯೂರು ನಗರ ಪ್ರದೇಶದ ಸೇರಿದಂತೆ ಬಹುತೇಕ ರಸ್ತೆಗಳು ನೀರಿನಿಂದ ಜಲವೃತವಾಗಿದ್ದು, ಇದರಿಂದಾಗಿ ಜನರು ಪರದಾಡುವಂತಾಗಿತ್ತು. ಇನ್ನು ಬಿರುಗಾಳಿಯ ರಭಸಕ್ಕೆ ಅಂಗಡಿ ಮುಂಗಟ್ಟುಗಳಲ್ಲಿ ಹಾಕಿದ್ದ ಶೀಟುಗಳು ಗಾಳಿಗೆ ಹಾರಿಹೋಗಿವೆ.
ಹಿರಿಯೂರು ನಗರದಲ್ಲಿ ಮಳೆಯೇ ಇಲ್ಲದ ಬರಡು ಭೂಮಿಯಾಗಿದ್ದು, ಇಂದು ಸುರಿದ ಆಲಿಕಲ್ಲು ಮಳೆಯಿಂದ ಹಾನಿಯಾಗಿದ್ದರೂ ಜನರ ಮುಖದಲ್ಲಿ ಹರುಷ ತುಂಬಿತ್ತು.
ವರದಿ: ಮುರುಳಿಧರನ್ ಆರ್., ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


