ಯಡಿಯೂರಪ್ಪರಿಗೆ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಮಾತನ್ನು ಆಡದಂತೆ ಬಿಜೆಪಿ ಹೈಕಮಾಂಡ್ ನಾಯಕರು ಖಡಕ್ ಸೂಚನೆ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಯನ್ನು ನಾವೇ ನಿಗಾವಹಿಸಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮೈತ್ರಿಯ ಬಗ್ಗೆ ತುಟಿ ಬಿಚ್ಚಬೇಡಿ ಎಂದಿದ್ದಾರೆ.
ಮೈತ್ರಿ ಬಗ್ಗೆ ನಾವೇ ತಿಳಿಸುತ್ತೇವೆ. ರಾಜ್ಯದಲ್ಲಿ ಮೈತ್ರಿ ನಿಶ್ಚಿತ. ಆದ್ರೆ, ಅದನ್ನು ನಿರ್ಧರಿಸುವುದು ನಾವೇ. ನೀವು ಮೈತ್ರಿ ಬಗ್ಗೆ ಮಾತನ್ನಾಡಬೇಡಿ ಎಂದು ಖಡಕ್ ಸೂಚನೆಯನ್ನು ಬಿಜೆಪಿ ಹೈಕಮಾಂಡ್ ನಾಯಕರು ರವಾನೆ ಮಾಡಿದ್ದಾರೆ.


