ಬೆಂಗಳೂರು: ಬಿಜೆಪಿಯವರು ಚುನಾವಣೆ ಹಿನ್ನೆಲೆ ಹಿಜಾಬ್ ಅನ್ನು ಅಸ್ತ್ರವನ್ನಾಗಿ ಪ್ರಯೋಗಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆರೋಪಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದಕ್ಕೂ ಮುಂಚೆ ಹಿಜಾಬ್ ಹಾಕಿಕೊಂಡು ಬರೋರನ್ನು ಯಾರು ಕೇಳುತ್ತಿದ್ದರು. ಬಿಜೆಪಿಯವರೇ ಅದನ್ನ ಕ್ರಿಯೇಟ್ ಮಾಡಿದ್ದು ಅಲ್ಲವೇ, ಈಗ ಅವರು ಮತ್ತದೇ ಹಿಜಾಬ್ ವಿಚಾರವನ್ನು ದೊಡ್ಡ ವಿಷಯ ಮಾಡಲು ಹೊರಟಿದ್ದಾರೆ ಎಂದು ಡಾ. ಜಿ ಪರಮೇಶ್ವರ್ ಕಿಡಿ ಕಾರಿದರು.
ಹಿಜಾಬ್ ವಿಚಾರವನ್ನೇ ಬಿಜೆಪಿಯವರು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಆರೋಪಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಅದನ್ನೇ ಮೂಲವಾಗಿಟ್ಟುಕೊಂಡು ದೊಡ್ಡ ಪ್ರಮಾಣದಲ್ಲಿ ಬಿಂಬಿಸುತ್ತಿದ್ದಾರೆ. ಅದರ ಅವಶ್ಯಕತೆ ಇಲ್ಲ ಎಂಬುದು ನನ್ನ ಭಾವನೆ ಎಂದರು.
ಕಾನೂನನ್ನು ಪರಿಶೀಲನೆ ಮಾಡಿಯೇ ಮಾಡುತ್ತೇವೆ. ಕಾನೂನುನನ್ನ ಬಿಟ್ಟು ಮಾಡೋದಕ್ಕೆ ಹೋಗುವುದಿಲ್ಲ. ಕಾನೂನು ಸುವ್ಯವಸ್ಥೆಯನ್ನು ಹ್ಯಾಂಡಲ್ ಮಾಡೋದಕ್ಕೆ ಸಮರ್ಥವಾಗಿದೆ ಎಂದರು.


