nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು:  ಜ.17: ಸಂಕ್ರಾಂತಿ ಸುಗ್ಗಿ–ಸಂಭ್ರಮ

    January 14, 2026

    6ನೇ ತರಗತಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ

    January 14, 2026

    ಜೀವಿಗಳಿಗೆ ಒಳ್ಳೆಯ ಮತ್ತು ಕೆಟ್ಟ ಗುಣ ಹೇಗೆ ಬಂದಿರಬಹುದು?

    January 14, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು:  ಜ.17: ಸಂಕ್ರಾಂತಿ ಸುಗ್ಗಿ–ಸಂಭ್ರಮ
    • 6ನೇ ತರಗತಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ
    • ಜೀವಿಗಳಿಗೆ ಒಳ್ಳೆಯ ಮತ್ತು ಕೆಟ್ಟ ಗುಣ ಹೇಗೆ ಬಂದಿರಬಹುದು?
    • ಸಂಕ್ರಾಂತಿ: ಶ್ರಮಕ್ಕೆ ಗೌರವ, ಸಮೃದ್ಧಿಗೆ ಸಂಕೇತ
    • ಹೊಸ ವರ್ಷ –2026,   ಸಂಕ್ರಾಂತಿ…!
    • ಡಾ.ಜಿ.ಪರಮೇಶ್ವರ ಒಳಾಂಗಣ ಕ್ರೀಡಾ ಸಂಕೀರ್ಣ ಲೋಕಾರ್ಪಣೆ: ಬಿಜೆಪಿ ವಿರುದ್ಧ ವೇದಿಕೆಯಲ್ಲಿ ಪರಂ ಗರಂ
    • ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ ದರ್ಶನ: ಅಯ್ಯಪ್ಪನ ಕಣ್ತುಂಬಿಕೊಳ್ಳಲು ಭಕ್ತರ ಸಾಗರ, ಕ್ಷಣಗಣನೆ ಆರಂಭ
    • ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರಿಗೆ ಶಿಕ್ಷೆಯಾಗಲಿ: ಹಂದಿಜೋಗಿಸ್ ಸಂಘ ಒತ್ತಾಯ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಾಂಗ್ರೆಸ್ ಜಾರಿಗೊಳಿಸಿದ ಯೋಜನೆ ಕಡಿತಗೊಳಿಸಿ ಬಿಜೆಪಿಯಿಂದ ಜನ ವಿರೋಧಿ ಆಡಳಿತ: ಸಿದ್ದರಾಮಯ್ಯ
    ಜಿಲ್ಲಾ ಸುದ್ದಿ April 9, 2022

    ಕಾಂಗ್ರೆಸ್ ಜಾರಿಗೊಳಿಸಿದ ಯೋಜನೆ ಕಡಿತಗೊಳಿಸಿ ಬಿಜೆಪಿಯಿಂದ ಜನ ವಿರೋಧಿ ಆಡಳಿತ: ಸಿದ್ದರಾಮಯ್ಯ

    By adminApril 9, 2022No Comments3 Mins Read
    siddaramaiha

    ಸರಗೂರು: ತಾಲೂಕಿನ ಮೊಳೆಯೂರು ಗ್ರಾಮದಲ್ಲಿ ಕುರುಬ ಸಮಾಜದಿಂದ ಶುಕ್ರವಾರ ನಡೆದ ಶ್ರೀ ಬಿಲ್ ಕುಮಾರಸ್ವಾಮಿ, ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕನಕ ಭವನವನ್ನು ಮಾಜಿ ಸಿಎಂ ಸಿದ್ದರಾಮಯ್ಯನವರು ಉದ್ಘಾಟಿಸಿದರು.

    ಈ ಸಂದರ್ಭ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೊಳಿಸಿದ ಜನಪರ ಯೋಜನೆಗಳನ್ನು ಆಡಳಿತರೂಢ ಬಿಜೆಪಿ ಸರಕಾರ ಮೊಟುಕುಗೊಳಿಸಿದ್ದು, ಜನ ವಿರೋಧಿ ಆಡಳಿತ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.


    Provided by
    Provided by

    ನಾನು ಮುಖ್ಯಮಂತ್ರಿಯಾಗಿದ್ದಾಗ 165 ಭರವಸೆಗಳನ್ನು ಈಡೇರಿಸಿದ್ದೇನೆ. ಶ್ರೀ ಸಾಮಾನ್ಯನ ಅನುಕೂಲಕ್ಕಾಗಿ ಕಾಂಗ್ರೆಸ್ ಜಾರಿಗೊಳಿಸಿದ ಇಂದಿರಾ ಕ್ಯಾಂಟಿನ್, ಪಶು ಭಾಗ್ಯ, ಶೋ ಭಾಗ್ಯ ಸೇರಿದಂತೆ ಇನ್ನಿತರ ಯೋಜನೆಗಳನ್ನು ನಿಷೇಧಿಸಿ, ಇನ್ನು ಕೆಲವು ಯೋಜನೆಗಳನ್ನು ಕಡಿತಗೊಳಿಸುವ ಮೂಲಕ ಬಿಜೆಪಿ ಜನ ವಿರೋಧಿ ಆಡಳಿತ ನೀಡುತ್ತಿದೆ. ಎಸ್‍ ಸಿ, ಎಸ್ಟಿ ಅನುದಾನ ಕಡಿತಗೊಳಿಸಿ, ಮೋಸ ಮಾಡುತ್ತಿದ್ದಾರೆ.  ರೈತರಿಗೆ ಕನಿಷ್ಠ ಬೆಂಬಲ ನೀಡುವಲ್ಲಿ ವಿಫಲವಾಗಿದ್ದಾರೆ. ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಪ್ರಧಾನಿ ನರೇಂದ್ರ ಮೋದಿ ರೈತರ ಮನೆ ಹಾಳು ಮಾಡಿದ್ದಾರೆ ಎಂದು ಅವರು ಟೀಕಿಸಿದರು.

    ತಾಲೂಕು ಅಭಿವೃದ್ಧಿಗೆ  ಕಡೆಗಣೆನೆ:

    ಮುಖ್ಯಮಂತ್ರಿಯಾಗಿದ್ದಾಗ ಕೊನೆಯ ಅವಧಿಯಲ್ಲಿ 53 ಹೊಸ ತಾಲೂಕು ಘೋಷಣೆ ಮಾಡಿದೆ. ಅವುಗಳಿಗೆ ಜೆಡಿಎಸ್‍ನ ಎಚ್.ಡಿ.ಕುಮಾರಸ್ವಾಮಿಯಾಗಲೀ, ಬಿಜೆಪಿಯ ಯಡಿಯೂರಪ್ಪ ಹಾಗೂ ಬಸವರಾಜು ಬೊಮ್ಮಾಯಿಯಾಗಲೀ ತಮ್ಮ ಆಡಳಿತದ ಅವಧಿಯಲ್ಲಿ ಹೊಸ ತಾಲೂಕುಗಳಿಗೆ  ಮೂಲ ಸೌಲಭ್ಯ ಒದಗಿಸುವಲ್ಲಿ ಮೀನಾಮೇಷ ಎಣಿಸುತ್ತಿದ್ದು, ಅಭಿವೃದ್ಧಿ ಮಾಡುವಲ್ಲಿ ಕಣಗಣಿಸುತ್ತಿದ್ದಾರೆ ಎಂದರು.

    2023ಕ್ಕೆ ಕಾಂಗ್ರೆಸ್ ಅಧಿಕಾರ ಕ್ಕೆ ಬರಲಿದೆ. ಆಗ ನೂತನ ತಾಲೂಕುಗಳಿಗೆ ಮೂಲ ಸೌಲಭ್ಯ ಒದಗಿಸುವ ಮೂಲಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

     ಬಿಜೆಪಿ ಕೆಟ್ಟ ಸರಕಾರ:

    ರಾಜ್ಯದ ಇತಿಹಾಸದಲ್ಲೇ ಬಿಜೆಪಿಯಂಥ ಕೆಟ್ಟ ಸರಕಾರವನ್ನು ಕಂಡಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಅಭಿವೃದ್ಧಿಗಾಗಿ 165 ಭರವಸೆಗಳನ್ನು ಈಡೇರಿಸಿದ್ದೆ. ಆದರೆ, ಬಿಜೆಪಿ ಸರಕಾರ ಅಭಿವೃದ್ಧಿಗೆ ಹೊತ್ತು ನೀಡುತ್ತಿಲ್ಲ ಎಂದರು.

    ಬದಲಿಗೆ ಕೋಮು ಗಲಭೆ ಸೃಷ್ಟಿಸುತ್ತಿದೆ. ಸಂಪ್ರದಾಯದ ಹೆಸರಿನಲ್ಲಿ ಜಾತಿ ಹೊಡೆಯ ಕೆಲಸವಾಗಬಾರದು. ಬಿಜೆಪಿ ಎಲ್ಲವನ್ನೂ ಮೀರಿದೆ. ಹೀಗಾಗಿ ಪೀಕ್ ಪ್ಯಾಕೇಟ್ ಮಾಡುವ ಬಿಜೆಪಿಗೆ ಮತದಾನ ಮಾಡಬಾರದು ಎಂದು ಸಲಹೆ ನೀಡಿದರು.

    ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್.ಧ್ರುವನಾರಾಯಣ ಅವರು ಮಾತನಾಡಿ, ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಜನರ ಕಲ್ಯಾಣಕ್ಕಾಗಿ 20 ಅಂಶಗಳನ್ನು ತಂದರು. ಅವರನ್ನು ಬಿಟ್ಟರೆ ಮುಖ್ಯಮಂತ್ರಿಯಾಗಿ 5 ವರ್ಷ ಅವಧಿ ಪೂರೈಸಿದ ಸಿದ್ದರಾಮ್ಮಯ್ಯ ಅವರು ಒಂದು ಕಪ್ಪು ಚುಕ್ಕಿಯೂ ಇಲ್ಲದೆ ಜನಪರವಾಗಿ ಬಿಗಿಯಾದ ಆಡಳಿತ ನಡೆಸಿ, ಹಲವು ಯೋಜನೆಗಳ ಜಾರಿಗೆ ತಂದು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.

    ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಮ್ಮ ಕೀರ್ತನೆಗಳ ಮೂಲಕ ತಿದ್ದಿದ ಸಮಾಜ ಸುಧಾರಕ ಕನಕದಾಸರ ಹೆಸರಿನಲ್ಲಿ ಭವನ ನಿರ್ಮಿಸಿರುವುದು ಸಂತಸದ ವಿಚಾರ. ಆದರೆ, ಬಿಜೆಪಿ ಸರಕಾರ ರಾಜ್ಯದಲ್ಲಿ ಜಾತಿ-ಜಾತಿಗಳ ನಡುವಿನ ಸಂಘರ್ಷ ಕೋಮು ಗಲಭೆಗೆ ಅವಕಾಶ ಮಾಡಿಕೊಡುತ್ತಿದೆ. ಸರಗೂರು ತಾಲೂಕು ಕೇಂದ್ರವನ್ನಾಗಿ ಮಾಡಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದರು.

    ಇದೇ ಸಂದರ್ಭ ನಿವೇಶನ ದಾನಿಗಳಾದ ಎಂ.ಎನ್.ಅನಂತಕೃಷ್ಣಮೂರ್ತಿ, ಎಂ.ಎಸ್.ಕೃಷ್ಣಪ್ಪ, ತಿಮ್ಮೇಗೌಡ, ಪುಟ್ಟಸ್ವಾಮೇಗೌಡ ಅವರನ್ನು ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು.

    ಖ್ಯಾತ ಜಾನಪದ ಗಾಯಕ ಅಮ್ಮ ರಾಮಚಂದ್ರ ಮತ್ತು ಮರಿಸ್ವಾಮಿ ಹಂಸ ಅವರ ತಂಡದಿಂದ ಜಾನಪದ ಗಾಯನ, ಪನ್ನಗ ವಿಜಯಕುಮಾರ್ ಮತ್ತು ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು.

    ಶಾಸಕ ಅನಿಲ್ ಚಿಕ್ಕಮಾದು, ಯತೀಂದ್ರ ಸಿದ್ದರಾಮಯ್ಯ, ಸಂಡೂರು ತುಕರಾಮ್,  ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿದರು. ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಎಂ.ಕೆ.ಸೋಮಶೇಖರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಬಿ.ಸುಬ್ರಹ್ಮಣ್ಯ, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮೈಮುಲ್ ನಿರ್ದೇಶಕ ಕೆ.ಈರೇಗೌಡ, ಬಿ.ಮಟಕೆರೆ ಗ್ರಾಪಂ ಅಧ್ಯಕ್ಷೆ ರೂಪಬಾಯಿ, ಉಪಾಧ್ಯಕ್ಷ ದೇವದಾಸ್, ಜಿ.ಪಂ. ಮಾಜಿ ಅಧ್ಯಕ್ಷರಾದ ಎಂ.ಪಿ.ನಾಗರಾಜು, ಕೆ.ಮರೀಗೌಡ, ಪಿ.ರವಿ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಶಿವಪ್ಪಕೋಟೆ, ತಾಲೂಕು ಅಧ್ಯಕ್ಷ ಎಂ.ಬಿ.ಆನಂದ್, ಎಂ.ಎನ್.ಅನಂತಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡರಾದ ಎಂ.ಎನ್.ಅಣ್ಣಯ್ಯಸ್ವಾಮಿ, ಜಿ.ಕೃಷ್ಣ, ಎಂ.ಕೆ.ಹರಿದಾಸ್, ಗುಣಪಾಲ್, ಕೆಎಸ್‍ ಆರ್‍ ಟಿಸಿ ಬಿ.ಜವರೇಗೌಡ, ಸತೀಶ್‍ಗೌಡ, ಶಂಭುಲಿಂಗನಾಯಕ, ಎಸ್.ಎಸ್.ಪ್ರಭುಸ್ವಾಮಿ, ಎಂ.ಸಿ.ದೊಡ್ಡನಾಯಕ, ಎಂ.ಎಸ್.ದೇವರಾಜು, ಸಂತೋಷ್, ಎಂ.ಕೆ.ಕೃಷ್ಣಪ್ಪ, ಗುಡಿಗೌಡ ಎಂ.ಎನ್.ಕುಮಾರ್, ದೇವರಾಜು, ಶೇಖರಪ್ಪ, ಎಂ.ಸಿ.ಬೀರೇಗೌಡ, ಶಿವಮೂರ್ತಿ, ಎಂ.ಆರ್.ಆನಂದ್, ಕರಿಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.

    ವರದಿ: ಚಂದ್ರ ಹಾದನೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ಸೋತರೂ, ಗೆದ್ದರೂ ಕ್ರೀಡಾಪಟುಗಳು ಒಂದೇ ಮನಸ್ಥಿತಿ ಹೊಂದಿರಬೇಕು: ಶಾಸಕ ಅನಿಲ್ ಚಿಕ್ಕಮಾದು

    January 12, 2026

    ಪಟ್ಟಣ ಪಂಚಾಯಿತಿ ಕಟ್ಟಡ ಕೆಡವಿ, ನೂತನವಾಗಿ ನಿರ್ಮಿಸಿ:  ಶಾಸಕ ಅನಿಲ್ ಚಿಕ್ಕಮಾದು ಸೂಚನೆ

    January 12, 2026

    ಅರಕಲಗೂಡು: ಕಾಂಗ್ರೆಸ್ ಮುಖಂಡ ಸಿ.ಡಿ.ದಿವಾಕರ್ ಗೌಡ ಅವರ ಹುಟ್ಟುಹಬ್ಬದ ಸಂಭ್ರಮ

    January 12, 2026

    Leave A Reply Cancel Reply

    Our Picks

    ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ ದರ್ಶನ: ಅಯ್ಯಪ್ಪನ ಕಣ್ತುಂಬಿಕೊಳ್ಳಲು ಭಕ್ತರ ಸಾಗರ, ಕ್ಷಣಗಣನೆ ಆರಂಭ

    January 14, 2026

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು:  ಜ.17: ಸಂಕ್ರಾಂತಿ ಸುಗ್ಗಿ–ಸಂಭ್ರಮ

    January 14, 2026

    ತುಮಕೂರು: ನಗರದ ಕುಂಚ ಶ್ರೀ ಮಹಿಳಾ ಬಳಗದ ವತಿಯಿಂದ ಜ.17ರಂದು ಶನಿವಾರ ಬಟವಾಡಿಯಲ್ಲಿರುವ ಶ್ರೀ ರಂಗ ವಿದ್ಯಾ ಮಂದಿರದ ಆವರಣದಲ್ಲಿ…

    6ನೇ ತರಗತಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ

    January 14, 2026

    ಜೀವಿಗಳಿಗೆ ಒಳ್ಳೆಯ ಮತ್ತು ಕೆಟ್ಟ ಗುಣ ಹೇಗೆ ಬಂದಿರಬಹುದು?

    January 14, 2026

    ಸಂಕ್ರಾಂತಿ: ಶ್ರಮಕ್ಕೆ ಗೌರವ, ಸಮೃದ್ಧಿಗೆ ಸಂಕೇತ

    January 14, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.