ಬೆಳಗಾವಿ: ಬಿಜೆಪಿಯ ವಾಟ್ಸಪ್ ಯುನಿವರ್ಸಿಟಿ ಹೊಸ ಇತಿಹಾಸ ಬರೆಯಲು ಯತ್ನಿಸುತ್ತಿದೆ. ಮಹನೀಯರ ಜೀವನ ಚರಿತ್ರೆ ಬಗ್ಗೆ ಸುಳ್ಳು ಹೇಳಲು ಹೊರಟಿದೆ. ಕಾಲ್ಪನಿಕ ಕಥೆಗಳ ಮೂಲಕ ತಪ್ಪು ಸಂದೇಶವನ್ನು ರವಾನಿಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ನಗರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಶ್ವಥ್ ನಾರಾಯಣ್ ಹಾಗೂ ಶೋಭಾ ಕರಂದ್ಲಾಜೆ ಟಿಪ್ಪು ಬಗ್ಗೆ ತಪ್ಪು ಮಾಹಿತಿ ನೀಡಲು ಹೊರಟಿದ್ದಾರೆ. ಟಿಪ್ಪು ಸಾಧನೆ ಬಗ್ಗೆ ಇತಿಹಾಸವೇ ಇದೆ. ಇದರ ಕುರಿತು ಸಾಕಷ್ಟು ಗ್ರಂಥಗಳಿವೆ. ಈಗ ಉರಿಗೌಡ, ನಂಜೇಗೌಡ ಬಗ್ಗೆ ಚಿತ್ರ ಮಾಡುತ್ತಿದ್ದಾರೆ. ಒಕ್ಕಲಿಗರ ಮತ ಸೆಳೆಯಲು ಮತ್ತು ಅವರ ಭಾವನೆಗಳಿಗೆ ಧಕ್ಕೆ ತರಲು ಬಿಜೆಪಿಯವರು ಮುಂದಾಗಿದ್ದಾರೆ. ನಿರ್ಮಲಾನಂದ ಸ್ವಾಮೀಜಿ ಇದರ ಬಗ್ಗೆ ಹೋರಾಟ ಮಾಡಬೇಕು. ಸಾಹಿತಿಗಳು, ಹೋರಾಟಗಾರರು ಹಾಗೂ ಎಲ್ಲಾ ಸಮಾಜಗಳ ಮಠಾಧೀಶರು ಇದಕ್ಕೆ ಕೈಜೋಡಿಸಬೇಕು ಎಂದರು.
ಹೆಸರುಗಳನ್ನು ಬದಲಾವಣೆ ಮಾಡಲು ಸಾಧ್ಯವೇ? ಬಿಜೆಪಿಯ ವಾಟ್ಸಪ್ ಯುನಿವರ್ಸಿಟಿ ಹೊಸ ಇತಿಹಾಸ ಬರೆಯಲು ಯತ್ನಿಸುತ್ತಿದೆ. ಇದನ್ನು ಖಂಡಿಸಲು ನಿರ್ಮಲಾನಂದ ಸ್ವಾಮೀಜಿ ಸಭೆ ನಡೆಸಬೇಕು. ಯಾವ ನಿರ್ದೇಶಕ ಬೇಕಾದರೂ ಬರಲಿ, ಅವರನ್ನು ಎದುರಿಸಲು, ಉತ್ತರ ಕೊಡಲು ನಾವು ಸಿದ್ಧರಾಗಿದ್ದೇವೆ. ಒಕ್ಕಲಿಗ ಸಮಾಜಕ್ಕೆ ಅಗೌರವ ಕೊಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದಕ್ಕೆ ನಾವು ಹೋರಾಟ ಮಾಡುತ್ತೇವೆ, ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


