ಕಾಂಗ್ರೆಸ್ ಸರ್ಕಾರ ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುತ್ತಿದ್ದು, ಅದಕ್ಕಾಗಿ ನಮ್ಮ ಕಾರ್ಯಕರ್ತರಿಗಾಗಿ ಹೆಲ್ತ್ ಲೈನ್ ಆರಂಭಿಸುತ್ತಿದ್ದೇವೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಇಂದು ಬಿಜೆಪಿ ಕಚೇರಿಯಲ್ಲಿ ಕಾನೂನು ಪ್ರಕೋಷ್ಠದ ಸಭೆ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರದ ಕಾನೂನಾತ್ಮಕ ದೌರ್ಜನ್ಯಗಳನ್ನು ಎದುರಿಸಲು ಹೆಲ್ಸ್ ಲೈನ್ ಸಂಖ್ಯೆಯನ್ನು ರಾಜ್ಯದಲ್ಲಿ ಘೋಷಣೆ ಮಾಡುತ್ತೇವೆ.
ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ ನಾಯಕರು ಮಾಡುತ್ತಾ ಇರುವ ಆರೋಪ, ನಮ್ಮಕಾರ್ಯಕರ್ತರ ಮೇಲೆ ಕೇಸ್ ಹಾಕಿಸ್ತಾ ಇರೋದು, ಸರ್ಕಾರದ ಬೇರೆ ಬೇರೆ ಮಂತ್ರಿಗಳು, ಮುಖಂಡರು ನಮ್ಮ ಕಾರ್ಯಕರ್ತರ ವಿರುದ್ಧ ಹೇಳಿಕೆ ಕೊಡುತ್ತಿರುವುದು, ಟಾರ್ಗೆಟ್ ಮಾಡುತ್ತಿರುವುದು ಎಲ್ಲವೂ ಗಮನಕ್ಕೆ ಬಂದಿದೆ. ಎಂದರು.
ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ಹೀಗೆ ಮಾಡಿದ್ರು. ನಮ್ಮ ಕಾರ್ಯಕರ್ತರ ಮೇಲೆ ಕೇಸ್ ಹಾಕಿಸೋದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕೋರ ಮೇಲೆ ಕೇಸ್ ಹಾಕೋದು.ಇಂದಿನ ನಮ್ಮಸಭೆಯಲ್ಲಿ ಈ ಎಲ್ಲಾ ವಿಚಾರದ ಬಗ್ಗೆ ಚರ್ಚೆ ಮಾಡಿದ್ದೇವೆ.
ಕಾಂಗ್ರೆಸ್ ಸರ್ಕಾರ ಮಾಡುವ ಈ ರೀತಿಯ ಚಟುವಟಿಕೆಗಳಿಗೆ ಹಾಕುವ ಕಾನೂನು ಕೇಸ್ ಬಗ್ಗೆ ಎದಿರಿಸೋಕೆ ನಾವು ಸಿದ್ಧರಾಗಿದ್ದೇವೆ. ನಾವು ನಮ್ಮಕಾರ್ಯಕರ್ತರಿಗಾಗಿ ಹೆಲ್ತ್ ಲೈನ್ ನಂಬರ್ ನೀಡುತ್ತೇವೆ. ಆ ಹೆಲ್ತ್ ಲೈನ್ 24 ಗಂಟೆ ಕೆಲಸ ಮಾಡಲಿದೆ. ಯಾವುದೇ ಪೊಲೀಸ್ ಸ್ಟೇಷನ್, ಯಾವುದೇ ಕೋರ್ಟ್‌ನಲ್ಲಿ ಆಗುವ ಕೇಸ್ ಹಾಕಿಸುವ ಕೆಲಸ ಆದರೆ, ನಮ್ಮ ಕಾರ್ಯಕರ್ತರ ರಕ್ಷಣೆಗೆ ನಮ್ಮ ಕಾನೂನು ಪ್ರಕೋಷ್ಠ ತಂಡ ಇದೆ.ಬೆಂಗಳೂರು, ಕಲಬುರಗಿ, ಹುಬ್ಬಳ್ಳಿಯಲ್ಲಿ ನಮ್ಮತಂಡ ಕೆಲಸ ಮಾಡಲಿದೆ ಎಂದು ತಿಳಿಸಿದರು.ಕಾನೂನು ಪ್ರಕೋಷ್ಠದ ಮೂಲಕ ನಾವು ನಮ್ಮಕಾರ್ಯಕರ್ತರ ರಕ್ಷಣೆ ಮಾಡ್ತವೆ. ಹೆಗಲಿಗೆ ಹೆಗಲು ನೀಡಿ ಅವರ ಜೊತೆ ಇರುತ್ತೇವೆ.ನ್ಯಾಯದ ಪರ ಹೋರಾಟ ಮಾಡುವವರ ಜೊತೆ ನಾವು ಇರುತ್ತೇವೆ.ನಮ್ಮವಿಚಾರಧಾರೆಗೆ ಹೋರಾಟ ಮಾಡುವವರ ಜೊತೆ ನಾವು ನಮ್ಮತಂಡ ಇರಲಿದೆ ಎಂದು ವಿವರಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


