ಬಿಜೆಪಿ ನಾಯಕರು ನನ್ನ ಮೇಲೆ ನಂಬಿಕೆ, ಗೌರವ, ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ. ಹೀಗಾಗಿಯೇ, ನಾನು ದೆಹಲಿಗೆ ಹೋದಾಗ ನನ್ನನ್ನು ಬಂದು ಭೇಟಿಯಾಗಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಮಾತುಕತೆ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ತಿಳಿಸಿದ್ದಾರೆ.
ಕಾರ್ಯಕರ್ತರ ಸಭೆಯಲ್ಲಿ ಮೈತ್ರಿಯ ಬಗ್ಗೆ ಮಾತುಕತೆ ಆಡಿರುವ ಅವರು, ಬಿಜೆಪಿ ಹೈಕಮಾಂಡ್ ನಾಯಕರು ನನಗೆ ಗೌರವ ಕೊಟ್ಟಿದ್ದಾರೆ. ಅದನ್ನು ನಾನು ಉಳಿಸಿಕೊಳ್ಳಬೇಕು. ಹೀಗಾಗಿ, ಮೈತ್ರಿ ಎಂದಿದ್ದಾರೆ.
2024ರ ಲೋಕಸಭಾ ಚುನಾವಣೆಗೆ ನಾನೇ ಟೊಂಕ ಕಟ್ಟಿ ನಿಲ್ಲುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನನಗೆ ಎದ್ದು ನಿಂತು ನಿಲ್ಲಲು ಆಗದೇ ಹೋದ್ರೂ ವೀಲ್ ಚೇರ್ ನಲ್ಲಿ ಕುಳಿತು ಪ್ರಚಾರ ಮಾಡುತ್ತೇನೆ. ನನ್ನ ಪಕ್ಷವನ್ನು ಉಳಿಸಿಕೊಳ್ಳುತ್ತೇನೆ.
ನನ್ನನ್ನು ನಂಬಿರುವ ಕಾರ್ಯಕರ್ತರನ್ನು ನಾನು ಕೈ ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ಹೇಳಿದ್ದಾರೆ. ಕಾರ್ಯಕರ್ತರ ಸಭೆಯಲ್ಲಿ ದೇವೇಗೌಡ, ಪಕ್ಷದ ಕಾರ್ಯಕರ್ತರಿಗೆ ಈ ಮಾತನ್ನು ಹೇಳಿದ್ದಾರೆ.