nammatumakuru

    Subscribe to Updates

    Get the latest creative news from FooBar about art, design and business.

    What's Hot

    ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರ: ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು

    April 1, 2026

    ತುಮಕೂರು: ಅಣ್ಣನಿಂದಲೇ ತಮ್ಮನ ಕೊಲೆ; ಸುಳ್ಳು ಕಥೆ ಕಟ್ಟಿ ಸಿಕ್ಕಿಬಿದ್ದ ತಂದೆ–ಮಗ!

    April 1, 2026

    ಗುಣಮಟ್ಟದ ಹಾಲು ಶೇಖರಣೆ: ತುಮಕೂರು ಜಿಲ್ಲೆ ರಾಜ್ಯದಲ್ಲೇ ಪ್ರಥಮ: ಶಾಸಕ ಎಚ್.ವಿ.ವೆಂಕಟೇಶ್

    April 1, 2026
    Facebook Twitter Instagram
    ಟ್ರೆಂಡಿಂಗ್
    • ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರ: ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು
    • ತುಮಕೂರು: ಅಣ್ಣನಿಂದಲೇ ತಮ್ಮನ ಕೊಲೆ; ಸುಳ್ಳು ಕಥೆ ಕಟ್ಟಿ ಸಿಕ್ಕಿಬಿದ್ದ ತಂದೆ–ಮಗ!
    • ಗುಣಮಟ್ಟದ ಹಾಲು ಶೇಖರಣೆ: ತುಮಕೂರು ಜಿಲ್ಲೆ ರಾಜ್ಯದಲ್ಲೇ ಪ್ರಥಮ: ಶಾಸಕ ಎಚ್.ವಿ.ವೆಂಕಟೇಶ್
    • ಸಿದ್ದಗಂಗಾ ಮಠವು ಕರುಣಾ ಗಂಗೆಯಾಗಿ ಹರಿಯುತ್ತಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು
    • ತುಮಕೂರು: ಅಂತರಸನಹಳ್ಳಿ ಸೇತುವೆ ಬಳಿ ರಸ್ತೆಯಲ್ಲೇ ಹರಿಯುತ್ತಿದೆ ಕೊಳಚೆ ನೀರು; ವಾಹನ ಸವಾರರ ಪರದಾಟ
    • ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
    • ನಡೆಯುವ ದೇವರು, ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು
    • ಇಂದು ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ 119ನೇ ಜನ್ಮದಿನೋತ್ಸವ ಸಂಭ್ರಮ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಿಜೆಪಿ ಎಂಪಿಗಳು ಕೂಳಿಗೆ ದಂಡ ಭೂಮಿಗೆ ಭಾರ ಇವರು ಗಂಡು ಅಲ್ಲ ಹೆಣ್ಣು : ಸಿಎಂ ಇಬ್ರಾಹಿಂ ವ್ಯಂಗ್ಯ
    ಮಧುಗಿರಿ March 14, 2023

    ಬಿಜೆಪಿ ಎಂಪಿಗಳು ಕೂಳಿಗೆ ದಂಡ ಭೂಮಿಗೆ ಭಾರ ಇವರು ಗಂಡು ಅಲ್ಲ ಹೆಣ್ಣು : ಸಿಎಂ ಇಬ್ರಾಹಿಂ ವ್ಯಂಗ್ಯ

    By adminMarch 14, 2023No Comments4 Mins Read
    madugiri

    ಮಧುಗಿರಿ : ಕರ್ನಾಟಕ ರಾಜ್ಯ ಜೆಡಿಎಸ್ ಪಕ್ಷ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ ಮಧುಗಿರಿಯ ಪಾವಗಡ ಸರ್ಕಲ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಜೆಡಿಎಸ್ ನ ಹಾಲಿ ಶಾಸಕರಾದ ಎಂ.ವಿ.ವೀರಭದ್ರಯ್ಯ ರವರು ಪಟ್ಟಣದ ಮೊದಲನೆಯ ವಾರ್ಡ್ ಆಶುಖಾನದಲ್ಲಿ ಆಯೋಜಿಸಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಭಾಗವಹಿಸಿದರು.

    ಈ ವೇಳೆ ಮಾತನಾಡಿದ ಸಿಎಂ ಇಬ್ರಾಹಿಂ ಕನ್ನಡ ನಾಡು ಕನ್ನಡ ನಾಡಿನ ಜನ ಎರಡು ಹೊತ್ತು ಹೊಟ್ಟೆತುಂಭಾ ಊಟ ಮಾಡಿ ಸುಖವಾಗಿ ಜೀವಿಸಬೇಕು, ಹಿಂದೂ ಮುಸಲ್ಮಾನರು ಒಂದು ತಾಯಿಯ ಮಕ್ಕಳಂತೆ ಬಾಳಬೇಕು ಅದನ್ನ ನಾವು ಕಣ್ಣಾರೆ ನೋಡಬೇಕು, ಹಳ್ಳಿಗಾಡಲಿ ಜಾತಿ ಭೇದವಿಲ್ಲ, ಇವತ್ತು ಕೂಡ ಜನ ಹಳ್ಳಿಗಳಲ್ಲಿ ಅನ್ಯೂನತೆಯಿಂದ ಬಾಳುತ್ತಿದ್ದಾರೆ, ಆದರೆ ದುರ್ದೈವ ರಾಜಕಾರಣಿಗಳು ಮತಗಳಿಗೋಸ್ಕರ ಸಮಾಜಗಳನ್ನು ಹೊಡೆಯುತ್ತಿದ್ದಾರೆ ಎಂದು ಅವರು ಹೇಳಿದರು.


    Provided by
    Provided by

    ಹಿಂದೂ ಧರ್ಮದಲ್ಲೂ ಸಹ ಸರ್ವಧರ್ಮ ಸಮನ್ವಯ ಸರ್ವೇ ಜನಾ ಸುಖಿನೋ ಭವಂತು ಎಂಬ ಒಳ್ಳೆಯ ಸಂದೇಶವಿದೆ ಇದರ ಅರ್ಥವನ್ನು ಎಲ್ಲಾ ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕು, ಕರ್ನಾಟಕ ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ರವರ ಬಗ್ಗೆ ವಿರೋಧವಾಗಿ ಬಿಜೆಪಿಯವರು ಮಾತನಾಡುವ ಮುಂಚೆ ನಂಜರಾಜ ಅರಸರು ಬರೆದಿರುವ ಚರಿತ್ರೆಯನ್ನು ಓದಲಿ, ಮರಾಠ ಪೇಶ್ವೇಗಳು ಮಹಾರಾಷ್ಟ್ರದಿಂದ ಬಂದು ಶೃಂಗೇರಿ ಮಠ ಲೂಟಿ ಮಾ,ಡಿ ಶಾರದಾ ಪೀಠ ಧ್ವಂಸ ಮಾಡಿದಾಗ ಆಗ ಪರಮಪೂಜ್ಯ ಶೃಂಗೇರಿ ಸ್ವಾಮೀಜಿಗಳು ಕಾರ್ಕಳಕ್ಕೆ ಹೋಗುತ್ತಾರೆ ಪ್ರಾಣ ಉಳಿಸಿಕೊಳ್ಳಲು, ಅಲ್ಲಿಂದ ಟಿಪ್ಪು ಸುಲ್ತಾನರಿಗೆ ಒಂದು ಪತ್ರ ಬರೆಯುತ್ತಾರೆ, ನೀವು ನಮ್ಮ ರಾಜ್ಯದ ಸುಲ್ತಾನರು ಶಾರದಾ ಪೀಠಕ್ಕೆ ಆಪತ್ತು ಬಂದಿದೆ ಎಂದು ಆಗ ಟಿಪ್ಪು ಸುಲ್ತಾನರು ತಮ್ಮ ಸೈನ್ಯವನ್ನು ಕಳಿಸಿ ಪೇಶ್ವೇಗಳನ್ನು ಶೃಂಗೇರಿ ಮಠದಿಂದ ಹೊಡೆದು ಓಡಿಸುತ್ತಾರೆ ಮತ್ತು ತಮ್ಮ ತೆಕ್ಕಸಲೆಯಿಂದ 60 ಲಕ್ಷ ರೂಪಾಯಿ ಕೊಟ್ಟು ಸುಲ್ತಾನರು ಮರು ಶರದಾಮಾತೆಯನ್ನು ಪ್ರತಿಷ್ಠಾಪಿಸುತ್ತಾರೆ. ಬಿಜೆಪಿಯವರು ಇದರ ಬಗ್ಗೆ ಸವಾಲಿಗೆ ತಯಾರಿದರೆ ಬರಲಿ ಎಂದು ಸಮಾವೇಶದಲ್ಲಿ ನೇರವಾಗಿ ಸವಾಲ್ ಹಾಕಿದರು.

    ದೇವೇಗೌಡರು ಪ್ರಧಾನಮಂತ್ರಿ ಆಗಿದ್ದಾಗ ದಾದಾಸಾಹೇಬ್ ಫಾಲ್ಕೆ ವಾರ ಅವಾರ್ಡ್ ಡಾಕ್ಟರ್ ರಾಜಕುಮಾರ್ ಅವರಿಗೆ ನೀಡಿದ್ದ ಪಕ್ಷ ಅಂದರೆ ಅದು ನಮ್ಮ ಜಾತ್ಯತೀತ ಜನತಾದಳ ಪಕ್ಷ, ಅನ್ಯ ಪಕ್ಷಗಳು ನಂತರ ದಿಲ್ಲಿಗೆ ಕಳಿಸಿ ಇಲ್ಲಿಯವರೆಗೂ ಯಾವ ಕರ್ನಾಟಕದ ವ್ಯಕ್ತಿಗೂ ಗೌರವಿಸಿಲ್ಲ ಇಲ್ಲಿಯವರೆಗೂ ಒಬ್ಬ ಕನ್ನಡಿಗನಿಗೆ ಒಂದು ಅವಾರ್ಡ್ ಕೊಟ್ಟಿಲ್ಲ 24 ಜನ ಎಂಪಿಗಳು ಕೂಳಿಗೆ ದಂಡ ಭೂಮಿಗೆ ಭಾರ ಇವರು ಗಂಡು ಅಲ್ಲ ಹೆಣ್ಣು ಅಲ್ಲ ಎಂದು ವ್ಯಂಗ್ಯವಾಡಿದರು.

    ನಂತರ ಕ್ಷೇತ್ರದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕುರಿತು ಮಾತನಾಡಿ ನಿಮ್ಮ ರಾಜಕೀಯ ಪ್ರಾರಂಭವಾದದ್ದು ಜನತಾ ದಳದಿಂದ ಅದು ಎಂಎಲ್ ಎ ಆಗಿ ಅದನ್ನು ನೀವು ಮರೆಯಬಾರದು, ಒಬ್ಬ ಮಾಜಿ ಪ್ರಧಾನಿಗೆ ಸಾವು ಬಯಸಿದ್ದು ಸರಿಯಲ್ಲ ಎಂದರು, ಕಾಂಗ್ರೆಸ್ ನ ರಾಹುಲ್ ಗಾಂಧಿಭಾ ಜೋಡು ಯಾತ್ರೆ ಮಾಡಿದರು, ಆದರೆ ಸರಿಯಾಗಿ ಅವರಿಗೆ ಗೊತ್ತಿಲ್ಲ ಮೊದಲು ಯಾವ ಜೋಡು ಯಾತ್ರೆ ಮಾಡಬೇಕು ಅಂತ, ಮೊದಲು ಶಿವಕುಮಾರ್ ಸಿದ್ದರಾಮಯ್ಯ ಜೋಡೊ ಮಾಡಲಿ, ಒಂದು ತಿಂಗಳ ಅಂತರದಲ್ಲಿ ಎಲೆಕ್ಷನ್ ಇದೆ ಇಲ್ಲಿಯವರೆಗೂ ಕಾಂಗ್ರೆಸ್ ಒಂದು ಕ್ಷೇತ್ರದ ಅಭ್ಯರ್ಥಿಯ ಹೆಸರು ಬಹಿರಂಗಪಡಿಸಿಲ್ಲ , ಗಂಡು ಮಕ್ಕಳ ಪಕ್ಷ ಜನತಾದಳ 93 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ನಮ್ಮ ಪಕ್ಷದ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ನಾವು ರಾಜಾರೋಷವಾಗಿ ಹೇಳುತ್ತೇವೆ ಎಲ್ಲಿ ಕಾಂಗ್ರೆಸ್ನವರು ಹೇಳಲಿ ನೋಡೋಣ ಕ್ಷೇತ್ರದ ಮಾಜಿ ಶಾಸಕ ರಾಜಣ್ಣ ಈ ಸವಾಲಿಗೆ ಉತ್ತರ ಕೊಡಲಿ ಎಂದು ಸವಾಲ್ ಹಾಕಿದರು.

    ಶಾಸಕರಾದ ಎಂ.ವಿ. ವೀರಭದ್ರಯ್ಯ ಮಾತನಾಡಿ, 2018ರಲ್ಲಿ ಪ್ರಕೃತಿ ಕೈ ಕೊಡ್ತು ಭೀಕರವಾದ ಬರಗಾಲ ಕುಡಿಯೋ ನೀರಿಗೂ ಆಹಾಕಾರ ದನ ಕರುಗಳ ಮೇವುಗೂ ಸಹ ಆಹಾಕಾರ ಸೃಷ್ಟಿಯಾಗಿತ್ತು. ಆ ಸಂದರ್ಭದಲ್ಲಿ ಕುಮಾರಸ್ವಾಮಿಯವರಿಂದ 6 ಕೋಟಿ 80 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿಸಿ, ಆಂಧ್ರಪ್ರದೇಶದಿಂದ ದನ ಕರುಗಳಿಗೆ ಮೇವುತರಿಸಿ ದನ ಕರುಗಳಿಗೆ ಹಂಚಿರುವುದು ಇತಿಹಾಸ, ಯಾವುದಾದರೂ ಕ್ಷೇತ್ರದಲ್ಲಿ ನಾಲ್ಕು ತಿಂಗಳ ಅವಧಿಯಲ್ಲಿ 300 ಬೋರ್ವೆಲ್ ಕೊರೆಸಿ ನೀರಿಗೆ ಅನುಕೂಲ ಮಾಡಿದ್ದು ಅಂದರೆ ಅದು ಮಧುಗಿರಿ ಕ್ಷೇತ್ರ ಎಂದು ಸಂತೋಷದಿಂದ ಹೇಳಬಹುದು ಎಂದರು.

    ಈಗಿರುವ ಬಿಜೆಪಿ ಸರ್ಕಾರದಲ್ಲಿ ಕ್ಷೇತ್ರಕ್ಕೆ ಅನುದಾನ ಕೊಡಲು ತಾರತಮ್ಯ ಮಾಡಿದರು, ಆದರೂ ಸಹ ಹಿಂಜರಿಯದೆ ನಾನು ಕ್ಷೇತ್ರಕ್ಕೆ 1,143 ಕೋಟಿ ಅನುದಾನವನ್ನು ತಂದು ಹತ್ತು ಹಲವು ಕಾರ್ಯಗಳನ್ನು ಮಾಡಿದ್ದು ನೀವು ನೋಡಬಹುದಾಗಿದೆ, ನನ್ನ ಅವಧಿಯಲ್ಲಿ ಅಲ್ಪಸಂಖ್ಯಾತರಿಗೆ ಕೊಡುಗೆಯಾಗಿ ಎರಡು ಅಲ್ಪಸಂಖ್ಯಾತರ ವಸತಿ ಶಾಲೆಯನ್ನು ನಿರ್ಮಿಸಿದ್ದು ಕಾಣಬಹುದು ಸುಮಾರು 37 ಕೋಟಿ ಅನುದಾನವನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕೊಟ್ಟಿದ್ದೇನೆ ಮುಂದೆಯೂ ಸಹ ಇದೇ ರೀತಿ ಹೆಚ್ಚಿನ ಅನುದಾನವನ್ನು ಅಲ್ಪಸಂಖ್ಯಾತರಿಗೆ ನೀಡುವುದಾಗಿ ಭರವಸೆ ನೀಡಿ ಈ ಬಾರಿಯೂ ಸಹ ಹಿಂದಿನಂತೆ ಇನ್ನೂ ಹೆಚ್ಚಿನ ಮತಗಳನ್ನು ನೀಡಿ ಜಯಶೀಲನ್ನಾಗಿ ಮಾಡಿ ಆಶೀರ್ವಾದಿಸಿ ಎಂದು ತಿಳಿಸಿದರು.

    ಜೆಡಿಎಸ್ ನ ರಾಜ್ಯ ಪ್ರಚಾರ ಸಮಿತಿ ಕಾರ್ಯದರ್ಶಿ ಹಾಗೂ ಪ್ರಮುಖ ಭಾಷಣಕಾರರಾದ ಡಾ. ನಜ್ಮಾ ನಜೀರ್ ಮಾತನಾಡಿ, ರಾಜ್ಯ ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಉಳಿವಿಕೆಗಾಗಿ ನೆಮ್ಮದಿಯ ನಾಳೆಯ ಬದುಕನ್ನು ಕಾಣಬೇಕಾದರೆ ರಾಜ್ಯದಲ್ಲಿ ಜನತಾದಳ ಸರ್ಕಾರ ಬಂದರೆ ಮಾತ್ರ ನೆಮ್ಮೆದೆಯಿಂದ ಬಾಳಲು ಸಾಧ್ಯ, ಕಾಂಗ್ರೆಸ್ ಬಿಜೆಪಿ ಆಳ್ವಿಕೆ ಸರ್ಕಾರದಲ್ಲಿ ಎಲ್ಲಿ ನೋಡಿದರೂ ಕೋಮುಗಲಭೆ ನಡೆಯುತ್ತಲೇ ಬಂದಿವೆ. ನೀವೇ ಹೇಳಿ ಎಲ್ಲಿದೆ ನೆಮ್ಮದಿ ಎಂದು ಸಮಾವೇಶದಲ್ಲಿ ಭಾಗಿಯಾಗಿದ್ದ ಜನರನ್ನು ಪ್ರಶ್ನಿಸಿದರು.

    ಹಾಲಿ ಜೆಡಿಎಸ್ ನ ಶಾಸಕರಾದ ಎಂ ವಿ ವೀರಭದ್ರಯ್ಯನವರು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 37 ಕೋಟಿ ಅನುದಾನ ನೀಡಿದ್ದಾರೆ. ಇಂತಹ ಸರಳ ಸಜ್ಜನ ಹಾಗೂ ಐಎಎಸ್ ಅಧಿಕಾರಿಗೆ ನಿಮ್ಮ ಮತ ನೀಡಿ ಅಭಿವೃದ್ಧಿಯತ್ತ ಸಾಗಿರಿ, ನಮ್ಮ ಹಿರಿಯ ದಿಗ್ಗಜರು ಹಾಗೂ ಭಾರತದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಾಹೇಬರ ಸೋಲಿಗೆ ಕಾರಣ ನಾನೇ ಎಂದು ಬೀಗುತ್ತಿರುವ ಕ್ಷೇತ್ರದ ಮಾಜಿ ಶಾಸಕರನ್ನು ಕ್ಷೇತ್ರದ ಜನರು ಮರೆಯದಿರಿ, ಸತ್ಯ ವಾಕ್ಯಕ್ಕೆ ತಪ್ಪಿ ನಡೆದರೆ ಮೆಚ್ಚಿನ ಪರಮಾತ್ಮನು , ದೇಶದ ಹಿರಿಯ ಪ್ರಧಾನಿಯ ಸಾವು ಬಯಸಿದ ವ್ಯಕ್ತಿ ಕ್ಷೇತ್ರದ ಜನರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರಾ ಎಂದು ಸಭೆಯಲ್ಲಿ ಸಾರ್ವಜನಿಕವಾಗಿ ಪ್ರಶ್ನೆ ಹಾಕಿದರು.

    ಕ್ಷೇತ್ರದ ಎಲ್ಲಾ ವರ್ಗದ ಅಭಿವೃದ್ಧಿಗಾಗಿ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಜಾತ್ಯಾತೀತ ಜನತಾ ದಳ ಪಕ್ಷದ ಅಭ್ಯರ್ಥಿಯನ್ನು ಈ ಬಾರಿಯೂ ಸಹ ಜಯಗಳಿಸಿ ಕ್ಷೇತ್ರದ ಜಯದಿಂದ ನಮ್ಮ ಅಣ್ಣ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿ ಆಗಲು ಯಾರಿಂದಲೂ ತಡೆಯೋಕೆ ಆಗೋಲ್ಲ ರಾಜ್ಯದ ಅಭಿವೃದ್ಧಿಗೆ ರಹದಾರಿಯೇ ನಮ್ಮ ಜಾತ್ಯತೀತ ಜನತಾದಳ ಪಕ್ಷ ಎಂದು ತಿಳಿಸಿದರು.

    ಸಮಾವೇಶದಲ್ಲಿ ಹಲವಾರು ಕಾಂಗ್ರೆಸ್ ನ ಮುಖಂಡರು ಪಕ್ಷ ತೊರೆದು ಕರ್ನಾಟಕ ರಾಜ್ಯ ಜೆಡಿಎಸ್ ಅಧ್ಯಕ್ಷರಾದ ಸಿಎಂ ಇಬ್ರಾಹಿಂ ಹಾಗೂ ಹಾಲಿ ಕ್ಷೇತ್ರದ ಶಾಸಕರಾದ ಎಂ.ವಿ.ವೀರಭದ್ರಯ್ಯ ಸಮೂಹದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

    ಈ ಸಂದರ್ಭದಲ್ಲಿ ಬಿಹಾರದ ಜೆಡಿಎಸ್ ನ ಮಾಜಿ ಎಂ ಪಿ ಉಬೆದುಲ್ಲಾ ಖಾನ್ ರಿಜನಿ, ಜೆಡಿಎಸ್ ಅಲ್ಪಸಂಖ್ಯಾತರ ರಾಜ್ಯ ಅಧ್ಯಕ್ಷರಾದ ಸಂಶೂಲ ಖಾನ್, ಕಾರ್ಪೊರೇಟರ್ ಇಮ್ರಾನ್, ಜೆಡಿಎಸ್ ತುಮಕೂರು ಜಿಲ್ಲಾ ಅಧ್ಯಕ್ಷರು ಆರ್ ಸಿ ಅಂಜಿನಪ್ಪ, ಉಪಾಧ್ಯಕ್ಷರು ಗಂಗಮ್ಮ, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷರಾದ ತನ್ವೀರ್ ಅಹಮದ್, ಪುರಸಭೆ ಅಧ್ಯಕ್ಷರಾದ ತಿಮ್ಮರಾಯಪ್ಪ, ಸದಸ್ಯರಾದ ಎಮ್ ಆರ್ ಜಗನ್ನಾಥ್, ಶಾಜು ಆಸಿಯ, ಮಾಜಿ ಸದಸ್ಯೆ ಸಲೀಮುನ್ನಿಸ, ಮಧುಗಿರಿ ಅಲ್ಪಸಂಖ್ಯಾತರ ಜೆಡಿಎಸ್ ಅಧ್ಯಕ್ಷರಾದ ಶಾಫೀಕ್, ಜೆಡಿಎಸ್ ಮುಖಂಡರಾದ ಸಲ್ಮಾನ್ ಬೇಗ್, ಅರಿಫ್, ಸರ್ದಾರ್, ನವಾಬ್, ಕೊಡಿಗೆನಹಳ್ಳಿ ಜಬಿವುಲ್ಲಾ ಹಾಗೂ ಎಲ್ಲಾ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

    ವರದಿ: ಆಬಿದ್, ಮಧುಗಿರಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL

    ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

     

    admin
    • Website

    Related Posts

    ಪವಿತ್ರ ರಂಜಾನ್ ಹಬ್ಬ ಸಹೋದರತೆಯ ಸಂಕೇತ: ಶಾಸಕ ಕೆ.ಎನ್.ರಾಜಣ್ಣ

    March 22, 2026

    ಮಧುಗಿರಿ: ಒಳ ಮೀಸಲಾತಿ ಅನ್ವಯ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ

    March 12, 2026

    ಮಧುಗಿರಿ: ಅಪ್ರಾಪ್ತೆಯ ಮದುವೆಗೆ ಬ್ರೇಕ್: ಪೊಲೀಸರು ಬರುವಷ್ಟರಲ್ಲಿ ವಧು-ವರ ಎಸ್ಕೇಪ್!

    March 10, 2026

    Comments are closed.

    Our Picks

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರ: ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು

    April 1, 2026

    ದಾವಣಗೆರೆ: ಕರ್ನಾಟಕದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದ್ದು, ಜಿಎಸ್‌ಟಿ ಸಂಗ್ರಹ ಮತ್ತು ಹೂಡಿಕೆಯಲ್ಲಿ ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ…

    ತುಮಕೂರು: ಅಣ್ಣನಿಂದಲೇ ತಮ್ಮನ ಕೊಲೆ; ಸುಳ್ಳು ಕಥೆ ಕಟ್ಟಿ ಸಿಕ್ಕಿಬಿದ್ದ ತಂದೆ–ಮಗ!

    April 1, 2026

    ಗುಣಮಟ್ಟದ ಹಾಲು ಶೇಖರಣೆ: ತುಮಕೂರು ಜಿಲ್ಲೆ ರಾಜ್ಯದಲ್ಲೇ ಪ್ರಥಮ: ಶಾಸಕ ಎಚ್.ವಿ.ವೆಂಕಟೇಶ್

    April 1, 2026

    ಸಿದ್ದಗಂಗಾ ಮಠವು ಕರುಣಾ ಗಂಗೆಯಾಗಿ ಹರಿಯುತ್ತಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

    April 1, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.