ಹರಿಯಾಣದಲ್ಲಿ ನಿರುದ್ಯೋಗ ಸೃಷ್ಟಿಗೆ ಬಿಜೆಪಿಯೇ ಕಾರಣ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ. ಹರಿಯಾಣದಲ್ಲಿ ನಿರುದ್ಯೋಗ, ಭ್ರಷ್ಟಾಚಾರ ಮತ್ತು ಹಣದುಬ್ಬರಕ್ಕೆ ಬಿಜೆಪಿ ಸರ್ಕಾರವೇ ಕಾರಣ, ಹರಿಯಾಣದಲ್ಲಿ ಕಾಂಗ್ರೆಸ್ ನ ದೊಡ್ಡ ಅಲೆ ಇದೆ. ಇಡೀ ದೇಶದಲ್ಲಿ ಹರಿಯಾಣದಲ್ಲಿ ಅತಿ ಹೆಚ್ಚು ನಿರುದ್ಯೋಗವಿದೆ. ಅದಕ್ಕೆ ಇಲ್ಲಿನ ಯುವಕರು ಬೆಲೆ ತೆರುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡಲೇಬೇಕಾದ ಅನಿವಾರ್ಯತೆ ಇದೆ ಅದಕ್ಕೆ ಈ ಚುನಾವಣೆ ದೊಡ್ಡ ಅಸ್ತ್ರವಾಗಲಿದೆ ಎಂದರು.
ಬಿಜೆಪಿಯ ಅತಿರೇಕದ ಹಣದುಬ್ಬರ, ಭ್ರಷ್ಟಾಚಾರ ಮತ್ತು ಅಸ್ಥಿರತೆಯಿಂದ ಜನರು ಬೇಸರಗೊಂಡಿದ್ದಾರೆ. ಇಲ್ಲಿನ ಜನರು ದೊಡ್ಡ ಬದಲಾವಣೆಯನ್ನು ತರಲಿದ್ದಾರೆ” ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಹರಿಯಾಣ ರಾಜ್ಯದ ಎಲ್ಲಾ ಸ್ಥಾನಗಳನ್ನು ಕಾಂಗ್ರೆಸ್ ಭಾರೀ ಅಂತರದಿಂದ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹರಿಯಾಣದಲ್ಲಿ ಮೇ 25ಕ್ಕೆ ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಮಾರಿ ಸೆಲ್ಜಾಗೆ ಬೆಂಬಲವನ್ನು ಪಡೆಯಲು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಇಂದು ರೋಡ್‌ಶೋ ನಡೆಸಿದರು. ಅವರು ಸುಮಾರು 1 ಗಂಟೆಗಳ ಕಾಲ ನಡೆದ ರೋಡ್ ಶೋನಲ್ಲಿ ಜನರ ಕಡೆಗೆ ಕೈ ಬೀಸಿದರು. ಹರಿಯಾಣದಲ್ಲಿ ಇದು ಅವರ ಮೊದಲ ಚುನಾವಣಾ ಪ್ರವಾಸವಾಗಿತ್ತು. ಈ ವೇಳೆ ಕಾಂಗ್ರೆಸ್ ಪಕ್ಷದ ಧ್ವಜಗಳನ್ನು ಹಿಡಿದುಕೊಂಡು ಕಾಂಗ್ರೆಸ್ ಕಾರ್ಯಕರ್ತರು ‘ಕಾಂಗ್ರೆಸ್ ಪಕ್ಷ ಜಿಂದಾಬಾದ್’ ಎಂದು ಘೋಷಣೆಗಳನ್ನು ಕೂಗಿದರು ಮತ್ತು ಪ್ರಿಯಾಂಕಾ ಅವರ ಮೇಲೆ ಹೂವಿನ ಎಸಳುಗಳನ್ನು ಸುರಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA