nammatumakuru

    Subscribe to Updates

    Get the latest creative news from FooBar about art, design and business.

    What's Hot

    ಒಳಮೀಸಲಾತಿ ಜಾರಿಗೆ ಆಗ್ರಹ: ತುರುವೇಕೆರೆಯಲ್ಲಿ ಮಾದಿಗ ಸಮುದಾಯದಿಂದ ಬೃಹತ್ ಪ್ರತಿಭಟನೆ

    March 11, 2026

    ಶಿರಾ: ಹುಣಸೆಕಟ್ಟೆ ಗ್ರಾಮದಲ್ಲಿ ಚಿರತೆ ಮತ್ತು ಮರಿಗಳ ಪ್ರತ್ಯಕ್ಷ; ಕುರಿಗಳ ಮೇಲೆ ದಾಳಿ

    March 11, 2026

    ವಿಕಲಚೇತನ ಮಕ್ಕಳನ್ನು ಕೂಡಿ ಹಾಕಿದರೆ ಕಠಿಣ ಶಿಕ್ಷೆ: ನ್ಯಾಯಾಧೀಶೆ ನೂರುನ್ನೀಸಾ ಎಚ್ಚರಿಕೆ

    March 11, 2026
    Facebook Twitter Instagram
    ಟ್ರೆಂಡಿಂಗ್
    • ಒಳಮೀಸಲಾತಿ ಜಾರಿಗೆ ಆಗ್ರಹ: ತುರುವೇಕೆರೆಯಲ್ಲಿ ಮಾದಿಗ ಸಮುದಾಯದಿಂದ ಬೃಹತ್ ಪ್ರತಿಭಟನೆ
    • ಶಿರಾ: ಹುಣಸೆಕಟ್ಟೆ ಗ್ರಾಮದಲ್ಲಿ ಚಿರತೆ ಮತ್ತು ಮರಿಗಳ ಪ್ರತ್ಯಕ್ಷ; ಕುರಿಗಳ ಮೇಲೆ ದಾಳಿ
    • ವಿಕಲಚೇತನ ಮಕ್ಕಳನ್ನು ಕೂಡಿ ಹಾಕಿದರೆ ಕಠಿಣ ಶಿಕ್ಷೆ: ನ್ಯಾಯಾಧೀಶೆ ನೂರುನ್ನೀಸಾ ಎಚ್ಚರಿಕೆ
    • ಕುಣಿಗಲ್: ಒಂಟಿ ವೃದ್ಧೆಯ ಉಸಿರುಗಟ್ಟಿಸಿ ಕೊಲೆ ಮಾಡಿ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು
    • ಕೊಡಚಾದ್ರಿ ಚೀಟ್ಸ್ ಪ್ರೈವೇಟ್ ಲಿಮಿಟೆಡ್‌ : ಸಾಲ ಪಡೆದ ವ್ಯಕ್ತಿಗೆ ಅವಮಾನ
    • ಅರ್ಹತೆ ಮಾನದಂಡಗಳಡಿ ಸಾಲ–ಸೌಲಭ್ಯ ವಿತರಿಸಿ: ಬ್ಯಾಂಕರ್ಸ್ ಕಾರ್ಯಾಗಾರದಲ್ಲಿ ಡಿಸಿ ನಾಗೇಂದ್ರ ಪ್ರಸಾದ್ ಕೆ.
    • ಮಾ.18 ರಿಂದ ಏ.2ರವರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ:  ವ್ಯವಸ್ಥಿತ, ಸುಸೂತ್ರ, ಪಾರದರ್ಶಕ  ಪರೀಕ್ಷೆಗೆ ಜಿಲ್ಲಾಧಿಕಾರಿ ಡಾ.‌ಆನಂದ‌ ಕೆ. ಸೂಚನೆ
    • ಸಾಮಾಜಿಕ ಜಾಲತಾಣಗಳಿಂದ ನಿಜವಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬ ನಾಗರಿಕನಿಗೂ ಲಭಿಸಿದೆ: ಡಾ.ಎ.ಎಸ್. ಬಾಲಸುಬ್ರಮಣ್ಯ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಿಜೆಪಿ ಸೋಲಿಸಿ, ಕಾಂಗ್ರೆಸ್ ಗೆಲ್ಲಿಸಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
    ಜಿಲ್ಲಾ ಸುದ್ದಿ March 6, 2023

    ಬಿಜೆಪಿ ಸೋಲಿಸಿ, ಕಾಂಗ್ರೆಸ್ ಗೆಲ್ಲಿಸಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

    By adminMarch 6, 2023No Comments2 Mins Read
    sathish jarakihole

    ಬೆಳಗಾವಿ: ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನಿಯಂತ್ರಣ ಹೇರಲು ಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ, ಕಾಂಗ್ರೆಸ್‌ನ್ನು ಗೆಲ್ಲಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

    ಬೆಳಗಾವಿ ದಕ್ಷಿಣ ಕ್ಷೇತ್ರದ ವಡಗಾವಿಯಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಬೇಸತ್ತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳುತ್ತಲೇ ಇದ್ದಾರೆ. ಅಡುಗೆ ಅನಿಲ ಬೆಲೆ ಏರಿಕೆಯಾಗುತ್ತಲೇ ಇದೆ. ನಮ್ಮ ಸರ್ಕಾರದ ಅವಧಿಯಲ್ಲಿ ಸಿಲಿಂಡರ್‌ಗೆ ₹ ೪೦೦ ಇತ್ತು. ಈಗ ₹ ೧೧೦೦ ಆಗಿದೆ. ಎಲ್ಲ ವಸ್ತುಗಳ ಬೆಲೆ ಶೇ. ೧೮ ರಷ್ಟು ತೆರಿಗೆ ಕೊಡಬೇಕು. ಅದು ನಮಗೆ ಗೊತ್ತಿಲ್ಲದೇ ಮೋದಿ ಅಕೌಂಟ್‌ಗೆ ಹೋಗುತ್ತಿದೆ. ದಕ್ಷಿಣ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರು ಇದ್ದಾರೆ. ಬೆಲೆ ಏರಿಕೆಯಿಂದಾಗಿ ನೇಕಾರರು ಕೂಡ ಸಂಕಷ್ಟದಲ್ಲಿದ್ದಾರೆ. ನಮ್ಮ ತೆರಿಗೆ ಹಣ ನಮಗೆ ಸಿಗುವಂತೆ ಮಾಡಬೇಕಿದೆ ಎಂದರು.


    Provided by
    Provided by

    ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಗೆಲುವಿಗೆ ಎಲ್ಲರೂ ಕೂಡಿ ಶ್ರಮಿಸಬೇಕು. ಈ ಮೊದಲು ದಕ್ಷಿಣ ಕ್ಷೇತ್ರದಲ್ಲಿ ನಮ್ಮ ಪಕ್ಷದ ಸಂಘಟನೆ ಕಡಿಮೆ ಇದೆ ಎಂಬ ಭಾವನೆ ಇತ್ತು. ಆದರೆ, ಈಗ ಇಲ್ಲಿಯೂ ಪಕ್ಷದ ಸಂಘಟನೆ ಪ್ರಬಲವಾಗಿದೆ. ಹಾಗಾಗಿ, ಚುನಾವಣೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸುತ್ತೇವೆ ಎಂಬ ಶಕ್ತಿ ಬಂದಿದೆ. ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡಿರುವುದರಿಂದ ಪಕ್ಷದ ಸಂಘಟನೆ ಪ್ರಬಲವಾಗಿದೆ ಎಂದರು.

    ವಿಶೇಷವಾಗಿ ನಮ್ಮ ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡುತ್ತಿರುವುದರಿಂದ ಪಕ್ಷದ ಕಾರ್ಯಚಟುವಟಿಕೆಗಳಿಗೆ ಕಚೇರಿ ಬೇಕಿತ್ತು. ಇದು ಚುನಾವಣೆಯೊಳಗೆ, ನಂತರವೂ ನಿರಂತರವಾಗಿ ಪಕ್ಷದ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗಲಿದೆ . ೭೦ ವರ್ಷಗಳ ಇತಿಹಾಸದಲ್ಲಿ ಖಾನಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದ ಇತಿಹಾಸ ಇರಲಿಲ್ಲ. ಅದನ್ನು ಅಂಜಲಿ ನಿಂಬಾಳ್ಕರ ಅವರು ಸುಳ್ಳು ಮಾಡಿ ತೋರಿಸಿದ್ದಾರೆ.ಅಲ್ಲಿ ಸಂಘಟನೆ ಮಾಡಿದ್ದಾರೆ. ಖಾನಾಪುರ ಮಾದರಿಯಲ್ಲೇ ಬೆಳಗಾವಿ ದಕ್ಷಿಣದಲ್ಲಿ ಪಕ್ಷದ ಸಂಘಟನೆ ಮಾಡಿ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು.

    ಈ ಸಂದರ್ಭದಲ್ಲಿ ಕಾಂಗ್ರೆಸ್ ನಗರ ಜಿಲ್ಲಾಧ್ಯಕ್ಷ ರಾಜು ಸೇಠ್, ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ರಮೇಶ ಸೊಂಟಕ್ಕಿ, ಪ್ರದೀಪ ಎಂ.ಜೆ. ಎಸ್ ಎಂ ಬೆಳವಟ್ಕರ್ ರಮೇಶ ಗೋರಲ್ ಮೊದಲಾದವರು ಉಪಸ್ಥಿತರಿದ್ದರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL

    ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ಮಾ.18 ರಿಂದ ಏ.2ರವರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ:  ವ್ಯವಸ್ಥಿತ, ಸುಸೂತ್ರ, ಪಾರದರ್ಶಕ  ಪರೀಕ್ಷೆಗೆ ಜಿಲ್ಲಾಧಿಕಾರಿ ಡಾ.‌ಆನಂದ‌ ಕೆ. ಸೂಚನೆ

    March 11, 2026

    ಸಾಮಾಜಿಕ ಜಾಲತಾಣಗಳಿಂದ ನಿಜವಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬ ನಾಗರಿಕನಿಗೂ ಲಭಿಸಿದೆ: ಡಾ.ಎ.ಎಸ್. ಬಾಲಸುಬ್ರಮಣ್ಯ

    March 11, 2026

    ಪತ್ರಕರ್ತರು ಪಾರದರ್ಶಕವಾಗಿ ಸುದ್ದಿಗಳನ್ನು ಪ್ರಕಟಿಸಲಿ: ಕವಿವಿ ಕುಲಸಚಿವ ಡಾ.ಶಂಕರೆಪ್ಪ ವಣಿಕ್ಯಾಳ

    March 11, 2026

    Comments are closed.

    Our Picks

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss

    ಒಳಮೀಸಲಾತಿ ಜಾರಿಗೆ ಆಗ್ರಹ: ತುರುವೇಕೆರೆಯಲ್ಲಿ ಮಾದಿಗ ಸಮುದಾಯದಿಂದ ಬೃಹತ್ ಪ್ರತಿಭಟನೆ

    March 11, 2026

    ತುರುವೇಕೆರೆ: ಒಳಮೀಸಲಾತಿಯನ್ನು ಜಾರಿಗೆ ತರದೆ ರಾಜ್ಯ ಸರ್ಕಾರವು ಏಕಾಏಕಿ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಮುಂದಾಗಿರುವುದನ್ನು ಖಂಡಿಸಿ, ಮಾದಿಗ ಸಮುದಾಯದ ಮುಖಂಡರು…

    ಶಿರಾ: ಹುಣಸೆಕಟ್ಟೆ ಗ್ರಾಮದಲ್ಲಿ ಚಿರತೆ ಮತ್ತು ಮರಿಗಳ ಪ್ರತ್ಯಕ್ಷ; ಕುರಿಗಳ ಮೇಲೆ ದಾಳಿ

    March 11, 2026

    ವಿಕಲಚೇತನ ಮಕ್ಕಳನ್ನು ಕೂಡಿ ಹಾಕಿದರೆ ಕಠಿಣ ಶಿಕ್ಷೆ: ನ್ಯಾಯಾಧೀಶೆ ನೂರುನ್ನೀಸಾ ಎಚ್ಚರಿಕೆ

    March 11, 2026

    ಕುಣಿಗಲ್: ಒಂಟಿ ವೃದ್ಧೆಯ ಉಸಿರುಗಟ್ಟಿಸಿ ಕೊಲೆ ಮಾಡಿ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು

    March 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.