ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ಮಣ್ಣಿಕೆರೆ ಮೇಲಿನ ಪೊಲೀಸರ ಹಲ್ಲೆ ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಶಾಸಕ ಡಿ. ಎಸ್. ಅರುಣ್ ಅವರು ಒತ್ತಾಯಿಸಿದರು. ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ: ಡಿ. ಎಸ್. ಅರುಣ್ ಅವರು, ವಿಷಯ ಪ್ರಸ್ತಾಪಿಸಿ, ರಾಜ್ಯ ಸರ್ಕಾರ ಹಿಂದುಗಳ ವಿರೋಧಿಯಾಗಿ ಅಡಳಿತ ನಡೆಸುತ್ತಿದ್ದು ಪೊಲೀಸರು ಕೂಡ ಕಾಂಗ್ರೆಸ್ ಕೈಗೊಂಬೆಯಾಗಿ ಮಾಡುತ್ತಿದ್ದಾರೆ.
ಅದಕ್ಕೆಪೂರಕವಾಗಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರ ಮೇಲೆ ನಡೆದಿರುವ ಹಲ್ಲೆಯೇ ಸಾಕ್ಷಿಯಾಗಿದೆ. ಈ ಕುರಿತು ಹಿಂದುತ್ವ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಪ್ರಕರಣ ರಾಜ್ಯ ಸರ್ಕಾರ ಹಿಂದುಗಳ ವಿರೋಧಿ ಧೋರಣೆಗೆ ಮುನ್ನುಡಿ ಹಾಕಿದಂತಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಪ್ರಕರಣಗಳು ಮರುಕಳಿಸುವ೦ತಹ ಸ೦ದರ್ಭಗಳು ಹೆಚ್ಚಾಗಿದೆ. ಪ್ರೋತ್ಸಾಹ ಉದ್ದೇಶಪೂರ್ವಕವಾಗಿ ಇಂತಹ ದಾಖಲಿಸುವ ಪ್ರಕರಣಗಳನ್ನು ಮೂಲಕ ರಾಜ್ಯದ ಜನರ ದಿಕ್ಕನ್ನು ತಪ್ಪಿಸುವ ಕೆಲಸಕ್ಕೆ ಕೈ ಹಾಕಬಾರದು. ಜಾತ್ಯಾತೀತವಾಗಿ ಧರ್ಮತೀತವಾಗಿ ಸರ್ಕಾರ ಕೆಲಸ ನಿರ್ವಹಿಸುವಂತಾಗಬೇಕು ಎಂದು ಆಗ್ರಹಿಸಿದರು.
ಈ ವೇಳೆ ಧ್ವನಿಗೂಡಿಸಿದ ಬಿಜೆಪಿಯ ಹಿರಿಯಸದಸ್ಯ ಕೋಟಶ್ರೀನಿವಾಸಪೂಜಾರಿ ಅವರಿಗೆ ಪ್ರಕರಣದ ಬಗ್ಗೆ ಅರ್ಜಿ ಸಲ್ಲಿಸಿದರೆ ನಿಯಮ 72ರ ಅಡಿಯಲ್ಲಿ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಪತಿಯವರು ಭರವಸೆ ನೀಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


