ಬೆಳಗಾವಿ: ಚುನಾವಣೆ ಘೋಷಣೆಯಾದ ನಂತರ ಬೆಳಗಾವಿ ರಾಜಕಾರಣ ಪ್ರತಿ ಕ್ಷೇತ್ರಗಳಲ್ಲಿ ಹೊಸ ಹೊಸ ಬೆಳವಣಿಗೆಗಳು ಆಗುತ್ತಿವೆ .ಪ್ರಬಲ ಆಕಾಂಕ್ಷಿಗಳು ಟಿಕೆಟ್ ಪಡೆಯಲು ಜನರ ಹಾಗೂ ನಾಯಕರ ಮೇಲೆ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ.
ಆದರೆ ಕ್ಷೇತ್ರದ ಮತದಾರರ ಲೆಕ್ಕಾಚಾರವೇ ಬೇರೆಯಾಗಿದೆ ಇದರಿಂದಾಗಿ ಪಕ್ಷಕ್ಕೆ ತಲೆನೋವು ತರುವುದು ಮಾತ್ರ ಶತಸಿದ್ಧ. ಬೆಳಗಾವಿ ದಕ್ಷಿಣ ಕ್ಷೇತ್ರವು ಮರಾಠಾ ಸಮುದಾಯದ ಪ್ರಬಲವಾದ ಬಲ ಇರುವ ಕ್ಷೇತ್ರ. ದಕ್ಷಿಣ ಕ್ಷೇತ್ರ ಇಲ್ಲಿ ಮತದಾರರ ಸ್ಪಷ್ಟವಾದ ನಿಲವು ಬಹು ಸಂಖ್ಯೆಯ ಹೊಂದಿರುವ ಮರಾಠ ಸಮುದಾಯದ ಅಭ್ಯರ್ಥಿಯೆ ನಮ್ಮ ಆಯ್ಕೆ ಎಂದು ಸ್ಪಷ್ಟವಾಗಿ ಪ್ರಚಾರಕ್ಕೆ ತೆರಳಿದಂತಹ ನಾಯಕರುಗಳಿಗೆ ಹಾಗೂ ಕಾರ್ಯಕರ್ತರಿಗೆ ಹೇಳುತ್ತಿದ್ದಾರೆ.
ಆದರೆ ರಾಜಕೀಯ ಲೆಕ್ಕಾಚಾರಗಳನ್ನು ಹೊರತುಪಡಿಸಿ ಅಭ್ಯರ್ಥಿಗಳು ತಮ್ಮದೇ ಆದಂತ ನಿಲುವುಗಳನ್ನು ತಾಳಿ ಸ್ವಯಂ ಘೋಷಿತ ಅಭ್ಯರ್ಥಿಯೆಂದು ಘೋಷಣೆ ಮಾಡುತ್ತಾ ಇದ್ದಾರೆ. ಇದರಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಪ್ರಚನ್ನಗೊಳ್ಳುತ್ತಾ ಹೋಗುತ್ತಿದೆ. ಇನ್ನೂ ಅಧಿಕೃತವಾದ ಅಭ್ಯರ್ಥಿಗಳ ಘೋಷಣೆ ಆಗದೇ ಇರುವುದು ಈ ಘಟನೆಗಳಿಗೆ ಮತ್ತಷ್ಟು ಬಲಬಂದಂತೆ ಆಗಿದೆ.
ಕಾಂಗ್ರೆಸ ದಕ್ಷಿಣ ಕ್ಷೇತ್ರದಲ್ಲಿ ಹಲವು ಪ್ರಯೋಗಗಳನ್ನು ಮಾಡಿ ನೋಡಿದೆ. ಕಾಂಗ್ರೆಸ್ ಪಕ್ಷ ದಿಂದ ಮರಾಠ ಸಮುದಾಯದ ಪ್ರಬಲ ನಾಯಕರಾಗಿದ್ದ ದಿವಂಗತ ಸಂಭಾಜಿ ಪಾಟೀಲ್ ಹಾಗೂ ಹೊರಗಿನಿಂದ ಬಂದಂತಹ ಲಕ್ಷ್ಮೀನಾರಾಯಣ್ ಇಂತಹ ಪ್ರಯೋಗಗಳನ್ನು ಮಾಡಿ ಕಾಂಗ್ರೆಸ್ ವಿಫಲಗೊಂಡಿತ್ತು ಆದರೆ ಈಗಿರುವಂತ ಪರಿಸ್ಥಿತಿನೇ ಬೇರೆ. ಸರ್ಕಾರದ ಆಡಳಿತ ವಿರೋಧ ಅಲೆ ಕಾಂಗ್ರೆಸ್ ಪಕ್ಷಕ್ಕೆ ವರವಾಗಲಿದ್ದು ಇಲ್ಲಿ ಮತದಾರರ ಆಸೆಯಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾಗಲೇ ಪಕ್ಷಕ್ಕೆ ಗೆಲವು ಸಿಗಬಹುದು.
ಕೆ ಪಿ ಸಿ ಸಿ ಕಾರ್ಯಧ್ಯಕ್ಷರಾದ ಸತೀಶ್ ಜಾರಕಿಹೊಳಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಸ್ಥಳೀಯ ಸಮರ್ಥವಾದ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಾಗುವುದೆಂದು ಇಲ್ಲಿ ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ. ಈ ಭರವಸೆಯೇ ಕಾಂಗ್ರೆಸ್ಗೆ ವರವಾಗಲಿದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅಭ್ಯರ್ಥಿ ಆಕಾಂಕ್ಷಿಗಳ ಸ್ವಯಂ ಪ್ರೇರಿತವಾಗಿ ನಾನೇ ಈ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಿರುವುದು ಪಕ್ಷದ ಹಾಗೂ ಸಂಘಟನಾತ್ಮಕ ದೃಷ್ಟಿಯಿಂದ ಪಕ್ಷಕ್ಕೆ ಒಳ್ಳೆಯದಲ್ಲ ಎಂಬುದು ಕಾರ್ಯಕರ್ತರಲ್ಲಿ ಭಯ ಮೂಡಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


