2003ರಲ್ಲಿ ನೀಲಿ ಚಿತ್ರದ ಮೂಲಕ ಈ ಉದ್ಯಮಕ್ಕೆ ಕಾಲಿಟ್ಟ ಜಸ್ಸಿ ಜೇನ್ಸ್ ಹಾಗೂ ಆಕೆಯ ಬಾಯ್ ಫ್ರೆಂಡ್, ನಟ ಬ್ರೆಟ್ ಹ್ಯಾಸೆನ್ಮುಲ್ಲರ್ ಮಿತಿ ಮೀರಿದ ಮಾದಕವಸ್ತು ಸೇವನೆಯಿಂದಾಗಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಈ ನೀಲಿ ಚಿತ್ರಗಳ ತಾರೆ ಹಾಗೂ ಬಾಯ್ ಫ್ರೆಂಡ್ ಮನೆಯಲ್ಲಿ ಒಟ್ಟಾಗಿ ವಾಸಿಸುತ್ತಿದ್ದು, ಜೇನ್ ಮತ್ತು ಅವರ ಬಾಯ್ ಫ್ರೆಂಡ್ ಶವಗಳನ್ನು ಒಟ್ಟಿಗೆ ಸಿಕ್ಕಿರುವುದರಿಂದ ಈ ಕುರಿತಂತೆ ತನಿಖೆ ಕೂಡ ನಡೆಯಲಾಗುತ್ತಿದೆ ಎನ್ನಲಾಗಿದೆ. ಪೊಲೀಸ್ ಇಲಾಖೆಯು ತನಿಖೆಯನ್ನು ಕೈಗೆತ್ತಿಕೊಂಡಿದೆ.
ಜಸ್ಸಿ ಜೇನ್ಸ್ ಅವರು ಹವಾಯಿಯನ್ ವೆಡ್ಡಿಂಗ್ ಸಿನಿಮಾ ಸೇರಿದಂತೆ ಸಾಕಷ್ಟು ಚಿತ್ರಗಳು ಇವರ ಜನಪ್ರಿಯ ಚಿತ್ರಗಳ ಲಿಸ್ಟ್ ನಲ್ಲಿವೆ. ನೀಲಿ ಚಿತ್ರಗಳಲ್ಲಿ ನಟಿಸುವುದು ಮಾತ್ರವಲ್ಲ, ಟಿವಿ ಕಾರ್ಯಕ್ರಮಗಳಲ್ಲಿ, ಸೌಂದರ್ಯ ಸ್ಪರ್ಧೆಯಲ್ಲೂ ಇವರು ಭಾಗಿಯಾಗಿದ್ದು, ಸಾಕಷ್ಟು ಪುರಸ್ಕಾರಗಳನ್ನು ಪಡೆದಿದ್ದಾರೆ. ಅದರಲ್ಲೂ ಇವರು ನಡೆಸಿಕೊಡುತ್ತಿದ್ದ ಮಿಡ್ ನೈಟ್ ಕಾರ್ಯಕ್ರಮ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.


