ಬೆಂಗಳೂರಿನ ಕೆಂಗೇರಿಯ ಲಾಡ್ಜ್ ಒಂದರಲ್ಲಿ ಜನವರಿ 30 ರಂದು ಬಿಎಂಟಿಸಿ ಚಾಲಕನೋರ್ವ ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ತನಿಖೆ ಕೈಗೊಂಡ ಪೊಲೀಸರಿಗೆ ಸ್ಪೋಟಕ ಮಾಹಿತಿ ದೊರೆತಿದೆ.
ಕೊಲೆಯೋ ಆತ್ಮಹತ್ಯೆಯೋ ಎಂಬ ಅನುಮಾನಕ್ಕೆ ತೆರೆ ಬಿದ್ದಿದ್ದು, ವಿವಾಹಿತಳ ಹಿಂದೆ ಬಿದ್ದ ಚಾಲಕ ಪುಟ್ಟೇಗೌಡ (28) ಆಕೆ ಸಂಬಂಧ ನಿರಾಕರಿಸಿದಾಗ ಬೇಸತ್ತು ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ ಎಂಬುದು ಗೊತ್ತಾಗಿದೆ.
ಮೃತ ಚಾಲಕ ಪುಟ್ಟೇಗೌಡ ಓರ್ವ ಆಂಟಿಯನ್ನು ಪ್ರೀತಿಸುತ್ತಿದ್ದ. ಕೇವಲ ಆರು ತಿಂಗಳ ಹಿಂದಷ್ಟೇ ಪರಿಚಿತಳಾದ ಆಕೆಯೊಂದಿಗೆ ಪ್ರೀತಿ ಚಿಗುರಿತ್ತು. ಇಬ್ಬರು ಅಕ್ಕಪಕ್ಕದ ಊರಿನವರಾಗಿದ್ದರಿಂದ ಓಡಾಟ ಹೆಚ್ಚಾಗಿತ್ತು.
ಇತ್ತೀಚೆಗೆ ಮಹಿಳೆಯನ್ನು ತನ್ನ ಜೊತೆಯಲ್ಲೇ ಇರುವಂತೆ ಪುಟ್ಟೇಗೌಡ ಒತ್ತಾಯ ಮಾಡ್ತಿದ್ದ. ಆದರೆ ಆಕೆ ನನಗೆ ಇಬ್ಬರು ಮಕ್ಕಳಿದ್ದಾರೆ, ಜೊತೆಯಲ್ಲಿರಲು ಸಾಧ್ಯವಿಲ್ಲ ಎಂದು ಮಹಿಳೆ ಹೇಳಿದ್ದಳು. ಈ ಮಧ್ಯೆ ಜನವರಿ 30 ರಂದು ಕೆಲಸಕ್ಕೆ ಬಂದಿದ್ದ ಪುಟ್ಟೇಗೌಡ ನೇರವಾಗಿ ಮಹಿಳೆಯೊಂದಿಗೆ ಸಲುಗೆಯಿಂದಲೇ ಮಾತನಾಡುತ್ತ ಕೆಂಗೇರಿ ಲಾಡ್ಜ್ಗೆ ಮಹಿಳೆಯನ್ನು ಕರೆದೊಯ್ದಿದ್ದ.
ಇಬ್ಬರು ಲಾಡ್ಜ್ನಲ್ಲಿ ಸುಮಾರು ಗಂಟೆಗಳ ಕಾಲ ಕಳೆದಿದ್ದರು. ನಂತರ ಮಹಿಳೆ ಇಲ್ಲಿಂದ ಹೊರಡೋಣ ಎಂದಿದ್ದಾಳೆ. ಆಗ ಜೊತೆಯಲ್ಲೇ ಇರುವಂತೆ ಪುಟ್ಟೇಗೌಡ ಆಕೆಯ ಜೊತೆ ಜಗಳ ಮಾಡಲು ಶುರುಮಾಡಿದ್ದನು. ಆನಂತರ ಬಾತ್ ರೂಂಗೆ ಹೋಗಿ ಬರ್ತಿನಿ ಎಂದು ಪುಟ್ಟೇಗೌಡ ಹೋಗಿದ್ದ. ಇದೇ ವೇಳೆ ಮಹಿಳೆ, ಆತನಿಂದ ತಪ್ಪಿಸಿಕೊಂಡು ಬಂದಿದ್ದಾಳೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಪುಟ್ಟೇಗೌಡ ಮರಣೋತ್ತರ ಪರೀಕ್ಷೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ (Confirm). ಹೀಗಾಗಿ ಪುಟ್ಟೇಗೌಡನ ಯಾರೂ ಕೊಲೆ ಮಾಡಿಲ್ಲ ಅನ್ನೋದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಕೆಂಗೇರಿ ಪೊಲೀಸರಿಂದ ತನಿಖೆ ಮುಂದುವರಿದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


