ಸರಗೂರು: ಬೂತ್ ಮಟ್ಟದಲ್ಲಿ ಬಿಜೆಪಿ ಸಂಘಟನೆ ಚುರುಕುಗೊಂಡಿದ್ದು, ಬೂತ್ ಸಮಿತಿಗಳು ಕಾರ್ಯಾರಂಭ ಮಾಡುತ್ತಿರುವುದು ಬಿಜೆಪಿಯ ಕ್ರೀಯಾಶೀಲ ಪಕ್ಷ ಸಂಘಟನೆಯ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಮಾಜ ಸೇವೆಕ ಬಿಜೆಪಿ ಮುಖಂಡ ಡಾ.ಹೆಚ್.ವಿ.ಕೃಷ್ಣಸ್ವಾಮಿ ಹೇಳಿದರು.
ತಾಲೂಕಿನ ಮುಳ್ಳೂರು ಮಹಾಶಕ್ತಿ ಕೇಂದ್ರ ಹಾಗೂ ಬೆಣ್ಣೆಗೆರೆ ಗ್ರಾಮದಲ್ಲಿ ಬುಧವಾರ ನಡೆದ ‘ಬೂತ್ ವಿಜಯ’ ಅಭಿಯಾನದ ಅಂಗವಾಗಿ ಮನೆ ಮನೆಗಳಿಗೆ ಬಿಜೆಪಿ ವಿಜಯಧ್ವಜ ಹಾರಿಸುವ ಮೂಲಕ ಪಕ್ಷದ ಯಶಸ್ವಿಯಾಗಿ ನೆರವೇರಿಸಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೂತ್ ಮಟ್ಟದಲ್ಲಿ ಪಕ್ಷ ಬಲಿಷ್ಠವಾಗಿದೆ, ಪಕ್ಷದ ಸಂಘಟನೆಯ ಕಾರ್ಯ ಇನ್ನೂ ಚುರುಕುಗೊಳಿಸಬೇಕಿದೆ, ಬಿಜೆಪಿ ಸರ್ಕಾರ ರೂಪಿಸಿರುವ ಜನಪರ ಯೋಜನೆ, ಸಾಧನೆಗಳ ಬಗ್ಗೆ ಜನರ ಮನೆಬಾಗಿಲಿಗೆ ಮುಟ್ಟಿಸುವ ಕೆಲಸ ನಡೆಯಬೇಕಿದೆ ಎಂದರು.
ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಜಿಲ್ಲಾ ಸಹ ವಕ್ತರರಾದ ಸಿ.ಕೆ.ಗಿರೀಶ್ ಮಾತನಾಡಿ, ಕಾರ್ಯಕರ್ತರೇ ಬಿಜೆಪಿಯ ಅಮೂಲ್ಯ ಆಸ್ತಿ, ಕಾರ್ಯಕರ್ತರೇ ಬಿಜೆಪಿಯ ಬೆನ್ನೆಲುಬು, ನಿಷ್ಠೆಯಿಂದ ದುಡಿಯುವ ಕೋಟಿ ಕೋಟಿ ಕಾರ್ಯಕರ್ತರ ಶ್ರಮ ಹಾಗೂ ಆಶೀರ್ವಾದ ಬಿಜೆಪಿಗೆ ಇದೆ, ಪರಿಶುದ್ಧವಾದ ಆಡಳಿತವನ್ನು ನಡೆಸುತ್ತಿರುವ ಪ್ರಧಾನಿ ಮೋದಿ ಅವರು ಜನರ ನಾಡಿಮಿಡಿತ ಅರಿತಿದ್ದಾರೆ. ಈ ಹಿಂದೆ ಸಾಧಕರು ಪ್ರಶಸ್ತಿಗೆ ಅರ್ಜಿ ಹಾಕಬೇಕಿತ್ತು, ಆದರೆ ಈಗ ನೈಜ ಸಾಧಕರಿಗೆ ಪ್ರಶಸ್ತಿ ಮನೆಬಾಗಿಲಿಗೆ ಹುಡುಕಿಕೊಂಡು ಬರುತ್ತಿದೆ. ಇದು ಮೋದಿ ಅವರ ಆಡಳಿತ ಎಂದರು.
ಈ ಸಂದರ್ಭದಲ್ಲಿ ಮುಳ್ಳೂರು ಮಹಾಶಕ್ತಿಕೇಂದ್ರ ಅಧ್ಯಕ್ಷ ಶಿವಕುಮಾರ್, ಬೂತ್ ಅಧ್ಯಕ್ಷ ಶಿಶುಪಾಲ, ಪ್ರಸಾದ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ರವಿ, ಗ್ರಾಮದ ಮುಖಂಡರಾದ ಶಿವರುದ್ರಪ್ಪ, ಸಿದ್ದಮಲ್ಲ ಶೆಟ್ಟರು, ರಾಮ ಶೆಟ್ಟರು, ರೇವಣ್ಣ, ಪುಟ್ಟಸ್ವಾಮಿ, ತಿಮ್ಮನಾಯಕ, ಮಹಾದೇವಸ್ವಾಮಿ, ನಾಗರಾಜಪ್ಪ, ಶಶಿಕಂಠಪ್ಪ, ನಾಗರಾಜು, ಗೋವಿಂದರಾಜು, ಮಲ್ಲಿಕಾರ್ಜುನ, ಸೋಮಶೇಖರ್, ಸತೀಶ್, ಸೋಮಣ್ಣ, ಚೆನ್ನಬಸಪ್ಪ, ಸುಬ್ರಹ್ಮಣ್ಯ, ಮಹಾದೇವ ಮೂರ್ತಿ, ಗೋಪಾಲರಾಜು, ಶಿವಕುಮಾರ್, ಪಕ್ಷದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


