ಪಾವಗಡ: 7 ವರ್ಷದ ಬಾಲಕ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದು, ಬಾಲಕನ ಪೋಷಕರು ವೈದ್ಯರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆದಿದ್ದಾರೆ.
ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಪಾವಗಡ ಪಟ್ಟಣದ ಬಾಬೈನ ಗುಡಿ ಬೀದಿಯ ಹರಿಕುಮಾರ್ ಎನ್ನುವವರ ಪುತ್ರ ಕರುಣಾಕರ್ (7) ಮೃತಪಟ್ಟಿದ್ದನು. ಬಾಲಕನಿಗೆ ಸರಿಯಾಗಿ ಚಿಕಿತ್ಸೆ ನೀಡದ ಹಿನ್ನೆಲೆ ಸಾವನ್ನಪ್ಪಿದ್ದಾನೆ ಎಂದು ಪಟ್ಟಣದ ಸುಧಾ ಕ್ಲಿನಿಕ್ ಬಳಿ ಬಾಲಕನ ಕುಟುಂಬಸ್ಥರು ಮೃತಪಟ್ಟ ಬಾಲಕನ ಶವವಿಟ್ಟು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮೃತ ಬಾಲಕನ ತಂದೆ ಹರಿಕುಮಾರ್ ಮಾತನಾಡಿ, ಸೋಮವಾರದಿಂದ ನಾವು ಪಟ್ಟಣದ ಸುಧಾ ಕ್ಲಿನಿಕ್ ಸುಧಾಕರ್ ರೆಡ್ಡಿ ಅವರ ಬಳಿ ಮಗುವಿಗೆ ಚಿಕಿತ್ಸೆ ಕೊಡಿಸುತ್ತಿದ್ದು, ಡೆಂಗಿ ಜ್ವರ ಎಂದು ಹೇಳಿದರು ಮಗುವಿನ ದೇಹ ತಣ್ಣಗಾದ ಕೊನೆ ಕ್ಷಣದಲ್ಲಿ ಬೆಂಗಳೂರಿಗೆ ಹೋಗಿ ಎಂದು ತರ ತುರಿಯಲ್ಲಿ ಹೇಳಿ ಆಸ್ಪತ್ರೆ ಬಾಗಿಲು ಹಾಕಿಕೊಂಡು ಮನೆಗೆ ಹೋಗಿದ್ದಾರೆ ಎಂದು ಆರೋಪಿಸಿದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4