ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದ ಈ ಪ್ರೀತಿಯ ಪರಾಕಾಷ್ಠೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ತನ್ನ ಪ್ರಿಯತಮನ ಫೋನ್ ಅನ್ನು ಬೇರೆ ಹುಡುಗಿ ರಿಸೀವ್ ಮಾಡಿದಳೆಂಬ ಕಾರಣಕ್ಕೆ ಪ್ರೇಯಸಿ ಆತನ ಮನೆಗೆ ಬೆಂಕಿ ಹಚ್ಚಿ ಸುಟ್ಟು ಬಿಟ್ಟಿದ್ದಾಳೆ.
ಪ್ರಿಯತಮನ ಮನೆಗೆ ಬೆಂಕಿ ಹಚ್ಚಿದ ಸೆನೈಡಾ ಮೇರಿ ಸೋಟೋ ಎಂಬ ಹುಡುಗಿಯನ್ನು ಪೊಲೀಸರು ಬಂಧಿಸಿದ್ದಾರೆ. ಮನೆಗೆ ಬೆಂಕಿ ಹಚ್ಚುವುದಕ್ಕೂ ಮೊದಲು ಗೆಳೆಯನ ಮನೆಯಲ್ಲಿ ಹಲವು ವಸ್ತುಗಳನ್ನು ಮೇರಿ ಸೋಟೋ ಕದ್ದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ತಾನು ಕರೆ ಮಾಡಿದಾಗ ಬಾಯ್‌ಫ್ರೆಂಡ್ ಫೋನ್ ಅನ್ನು ಬೇರೆ ಹುಡುಗಿ ಸ್ವೀಕರಿಸಿದ್ದಾಳೆ ಎಂದು ಮೇರಿ ಆತನ ಜೊತೆ ಜಗಳವಾಡಿದ ಬಳಿಕ ಮನೆಗೆ ಬೆಂಕಿ ಹಚ್ಚಿದ್ದಾಳೆ. ಫೋನ್ ರಿಸೀವ್ ಮಾಡಿದಾಕೆ ಹುಡುಗನ ಸಂಬಂಧಿ ಎಂದು ಪೊಲೀಸರು ತಿಳಿಸಿದ್ದಾರೆ.
ಮೇರಿ ಲಿವಿಂಗ್ ರೂಮ್‌ನಲ್ಲಿದ್ದ ಮಂಚಕ್ಕೆ ಬೆಂಕಿ ಹಚ್ಚಿದ್ದಾಳೆ. ಅದು ಬಳಿಕ ಇಡೀ ಮನೆಯನ್ನು ಆವರಿಸಿಕೊಂಡಿದೆ. ಮನೆಗೆ ಬೆಂಕಿ ಹಚ್ಚಿರುವುದನ್ನು ವೀಡಿಯೊ ಮಾಡಿದ್ದು, ಅದರಲ್ಲಿ ಮೇರಿ ಬೆಂಕಿ ಹಚ್ಚುತ್ತಿರುವುದು ರೆಕಾರ್ಡ್ ಆಗಿದೆ. ಈ ಕೃತ್ಯದಿಂದ 50 ಸಾವಿರ ಡಾಲರ್‌ನಷ್ಟು ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


