ಪಾವಗಡ: ಭಾರತೀಯ ಪರಿವರ್ತನ ಸಂಘ –BPS ಪಾವಗಡ ತಾಲ್ಲೂಕು ವತಿಯಿಂದ ಪಾವಗಡ ಟೌನ್ ಆದರ್ಶ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಹಾಗೂ ಹೋಬಳಿ ಪದಾಧಿಕಾರಿಗಳ ಆಯ್ಕೆ ಹಾಗೂ ಬೊಮ್ಮತನಹಳ್ಳಿ ಗ್ರಾಮದ ವಿದ್ಯಾರ್ಥಿ ಎಂಬಿಬಿಎಸ್ ವೈದ್ಯಕೀಯ ಸೀಟು ಪಡೆದಿರುವುದರಿಂದ ಸನ್ಮಾನ ಮಾಡಲಾಯಿತು.
ಈ ವಿದ್ಯಾರ್ಥಿಯು ಕಡು ಬಡತನದಲ್ಲಿ ಬೆಳೆದು ಒಂದರಿಂದ ಹತ್ತನೇ ತರಗತಿಯನ್ನು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ, ಪಿಯುಸಿ ವಿಜ್ಞಾನ ವಿಭಾಗವನ್ನು ತೆಗೆದುಕೊಂಡು 94% ಅಂಕಗಳನ್ನು ಪಡೆದುಕೊಂಡು ಎಂಬಿಬಿಎಸ್ ಕೋರ್ಸ್ ಮಾಡಲು ಕನಸು ಹೊಂದಿದ್ದರು, ಇವರ ಪ್ರತಿಭೆಯನ್ನು ಗುರುತಿಸಿದ ಭಾರತೀಯ ಪರಿವರ್ತನ ಸಂಘ ಪಾವಗಡ ವತಿಯಿಂದ ಬಿಪಿಎಸ್ ರಾಜ್ಯಾಧ್ಯಕ್ಷರಾದ ಪ್ರೊ.ಹರಿರಾಮ್ ಮತ್ತು ದೇವನಹಳ್ಳಿಯ ಮಹೇಶ್ ದಾಸ್ ರವರು ಬೆಂಗಳೂರಿನ ಪ್ರತಿಷ್ಠಿತ ಪರಿಶ್ರಮ ನೀಟ್ ಅಕಾಡೆಮಿಯಲ್ಲಿ ಎರಡು ವರ್ಷ ತರಬೇತಿಯನ್ನು ಕೊಡಿಸಿದರ ಪರಿಣಾಮ ನೀಟ್ ಪರೀಕ್ಷೆ ಪಾಸ್ ಮಾಡಿ, ಈಗ ಬೆಂಗಳೂರಿನ ಬಿಜಿಎಸ್ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪಾವಗಡ ತಾಲೂಕಿನಾದ್ಯಂತ ಎಲ್ಲಾ ಸಮುದಾಯದ ಬಡ ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕೆ ಹಾಗೂ ಉನ್ನತ ಸರ್ಕಾರಿ ಹುದ್ದೆಗಳನ್ನು ಪಡೆಯುವಂತೆ ಬಿಪಿಎಸ್ ವತಿಯಿಂದ ಕೆಲಸ ಮಾಡುತ್ತೇವೆ ಎಂದು ಹರಿರಾಮ್ ರವರು ಹೇಳಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಪ್ರೊ.ಹರಿರಾಮ್, ಡಾ.ರಾಜೇಶ್, ತುಮಕೂರು ಜಿಲ್ಲಾಧ್ಯಕ್ಷರಾದ ಚಿಕ್ಕತಿಮ್ಮನಹಟ್ಟಿ ಗ್ರಾಮದ ಎಚ್.ಕೆಂಚರಾಯ, ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಹರಿಹರಪುರ ಗ್ರಾಮದ ಎಚ್.ಡಿ.ಈರಣ್ಣ, ಕಾನೂನು ಸಲಹೆಗಾರರಾಗಿ ವಕೀಲರಾದ ಎ.ಎಸ್.ರಘುನಂದನ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಜಿಲ್ಲಾಧ್ಯಕ್ಷರಾದ ಎಚ್.ಕೆ.ಕೆಂಚರಾಯ ಮಾತನಾಡಿ, ಹರಿರಾಮ್ ಅವರ ಮಾರ್ಗದರ್ಶನದಲ್ಲಿ ತಾಲೂಕಿನ ಯುವಕರು ಪರಿವರ್ತನಾ ಶಿಬಿರದಲ್ಲಿ ಭಾಗಿಯಾದವರು, ಬದಲಾವಣೆಯಾಗಿ ಚಳುವಳಿ ಮಾಡಲು ತಮ್ಮ ಕೈಲಾದಷ್ಟು ಹಣವನ್ನು ಸಹಾಯ ಮಾಡುತ್ತಿದ್ದಾರೆ. ಬುದ್ಧ, ಬಸವ, ಪುಲೆ ದಂಪತಿಗಳು, ಡಾ.ಬಿ.ಆರ್.ಅಂಬೇಡ್ಕರ್, ಮಾನ್ಯವರ್ ಕಾನ್ಸಿರಾಂ ಜಿ ರವರ ತತ್ವ ಸಿದ್ಧಾಂತಗಳನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


