ಪಾವಗಡ: ವೈ.ಎನ್. ಹೊಸಕೋಟೆ ಹೋಬಳಿ ದಳವಾಯಹಳ್ಳಿ ಗ್ರಾಮದ 80 ವರ್ಷದ ಹಿರಿಯ ವ್ಯಕ್ತಿ ಮೃತಪಟ್ಟಾಗ ಆಸ್ಪತ್ರೆಯಿಂದ ಮನೆಗೆ ಸಾಗಿಸಲು ಹಣವಿಲ್ಲದೇ, ಬೈಕ್ ನಲ್ಲಿ ಮೃತದೇಹ ಸಾಗಿಸಿದ ಘಟನೆ ನಡೆದಿತ್ತು.
ಈ ಘಟನೆಯ ವರದಿ ನಮ್ಮತುಮಕೂರು ವಾಹಿನಿಯಲ್ಲಿ ಪ್ರಸಾರವಾಗಿತ್ತು. ಈ ಸುದ್ದಿಯನ್ನು ಗಮನಿಸಿ ಭಾರತೀಯ ಪರಿವರ್ತನ ಸಂಘ(BPS) ನಿನ್ನೆ ಪೋತಗನಹಳ್ಳಿ ಗ್ರಾಮ ಪಂಚಾಯಿತಿಯ PDO ಮಹಮ್ಮದ್ ರಫೀಕ್ ಅವರನ್ನು ಭೇಟಿಯಾಗಿ, ನೊಂದ ಕುಟುಂಬಕ್ಕೆ ಮೃತರ ಅಂತ್ಯ ಸಂಸ್ಕಾರಕ್ಕೆ ಪಂಚಾಯತ್ ನೆರವಾಗಬೇಕು ಎಂದು ಮನವಿ ಮಾಡಿಕೊಂಡಿತ್ತು.
ಈ ಮನವಿಗೆ ಸ್ಪಂದಿಸಿದ ಪಿಡಿಓ ಗ್ರಾಮ ಪಂಚಾಯತ್ ವತಿಯಿಂದ 5 ಸಾವಿರ ರೂಪಾಯಿಗಳನ್ನು ಮಂಜೂರು ಮಾಡಿದ್ದು, ಬಿಪಿಎಸ್ ವೈ ಎನ್ ಎಸ್ ಕೋಟೆ ಹೋಬಳಿ ಮುಖಂಡರಾದ ಚನ್ನಕೇಶವ ಸಮ್ಮುಖದಲ್ಲಿ ಪಿಡಿಓ, ಅಧ್ಯಕ್ಷರು, ಸಿಬ್ಬಂದಿ ಚೆಕ್ ವಿತರಣೆ ಮಾಡಿದ್ದಾರೆ.
ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಜನರು ತಿಳಿದುಕೊಂಡು ಸದ್ಬಳಕೆ ಮಾಡಬೇಕು ಎಂದು ಇದೇ ವೇಳೆ ಭಾರತೀಯ ಪರಿವರ್ತನ ಸಂಘದ ತುಮಕೂರು ಜಿಲ್ಲಾಧ್ಯಕ್ಷ ನಿಡಗಲ್ಲು ಹೋಬಳಿ ಚಿಕ್ಕತಿಮ್ಮನಹಟ್ಟಿ ಗ್ರಾಮದ ಎಚ್. ಕೆಂಚರಾಯ, ಮನವಿ ಮಾಡಿಕೊಂಡರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q