ಕಾಂಗ್ರೆಸ್ ಗೆ ಕುಕ್ಕರ್ ಬಾಂಬ್ ಮೇಲೆ ಪ್ರೀತಿ ಇದೆ. ಸಿಬಿಐ ಸಂಸ್ಥೆ ಮೇಲೆ ದ್ವೇಷವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಲೇವಡಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಸಿ.ಟಿ ರವಿ, ಭ್ರಷ್ಟಾಚಾರ ಮಾಡದಿದ್ದರೇ ಕಾಂಗ್ರೆಸ್ ಯಾಕೆ ಹೆದರಬೇಕು…? ಸಿಬಿಐ ಒಂದು ಸ್ವತಂತ್ರ ತನಿಖಾ ಸಂಸ್ಥೆ. ಭ್ರಷ್ಟಾಚಾರ ಆಗಿದ್ದರೇ ತನಿಖೆ ಮಾಡುತ್ತಾರೆ. ಸಿಬಿಐ ಬಗ್ಗೆ ಕಾಂಗ್ರೆಸ್ ಗೆ ಯಾಕೆ ಭಯ. ಎಲ್ಲ ಸರಿ ಇದ್ದರೇ ಡಿ.ಕೆ ಶಿವಕುಮಾರ್ ಗೆ ಭಯವೇಕೆ..? ಎಂದು ಪ್ರಶ್ನಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


