ಲೈಂಗಿಕತೆ ಅನ್ನೋದು ಒಬ್ಬ ವ್ಯಕ್ತಿಯ ಖಾಸಗಿತನ. ಸಾಕಷ್ಟು ದೇಶಗಳಲ್ಲಿ ಲೈಂಗಿಕತೆ ಅನ್ನೋದು ಏಕಾಂತ ಹಾಗೂ ಮುಚ್ಚುಮರೆಯಿಂದ ಕೂಡಿದೆ. ಆದ್ರೆ ಆಫ್ರಿಕನ್ ಖಂಡದ ಅನೇಕ ದೇಶಗಳಲ್ಲಿ ವಿಚಿತ್ರ ಸಂಪ್ರದಾಯವೊಂದಿದ್ದು, ಈ ಸಂಪ್ರದಾಯವನ್ನು ಕೇಳಿದರೆ, ನೀವು ಅಚ್ಚರಿಗೀಡಾಗುತ್ತೀರಿ.
ಮದುವೆಯ ನಂತರ ವಧುವರ ಮೊದಲ ರಾತ್ರಿಯಲ್ಲಿ ಏಕಾಂತದಲ್ಲಿ ಕಳೆಯುವುದು ಭಾರತ ಸೇರಿದಂತೆ ಸಾಕಷ್ಟು ದೇಶಗಳಲ್ಲಿರುವ ಸಂಪ್ರದಾಯ. ಆದ್ರೆ, ಆಫ್ರಿಕನ್ ಖಂಡದ ಅನೇಕ ದೇಶಗಳಲ್ಲಿ ಮೊದಲ ರಾತ್ರಿಯ ದಿನ ವಧುವಿನ ತಾಯಿ ಕೂಡ ವಧುವರರ ಕೋಣೆಯಲ್ಲಿಯೇ ಮಲಗುವ ವಿಚಿತ್ರ ಸಂಪ್ರದಾಯವಿದೆ.
ವಧು ಮತ್ತು ವರ ಹೊಸಬರಾಗಿರುವ ಕಾರಣ ಅವರಿಗೆ ಮೊದಲ ರಾತ್ರಿಯಂದು ವಧುವಿನ ತಾಯಿ ಸಲಹೆ ನೀಡಲೆಂದು ಅವರ ಜೊತೆಗೆ ಇರುತ್ತಾರೆ ಅನ್ನೋದು ಇಲ್ಲಿನ ಸಂಪ್ರದಾಯವಾದಿಗಳ ವಾದವಾಗಿದೆ.
ಸಂತೋಷದ ಜೀವನವನ್ನು ಹೇಗೆ ಸಾಗಿಸಬೇಕು, ಸಂಸಾರದ ಬಂಡಿಯಲ್ಲಿನ ಕಷ್ಟ ಸುಖಗಳನ್ನು ಹೇಗೆಲ್ಲ ಸ್ವೀಕರಿಸಬೇಕು ಎಂದು ವಧುವಿನ ತಾಯಿ ವಧುವರರಿಗೆ ಮೊದಲ ರಾತ್ರಿಯಂದು ಹೇಳಿಕೊಡುತ್ತಾಳಂತೆ.
ವಧುವರರ ಮೊದಲ ರಾತ್ರಿ ಮುಗಿದ ಬಳಿಕ, ಅವರಿಬ್ಬರು ಸಂತೋಷದಲ್ಲಿದ್ದರೆ, ಎಂದು ವಧುವಿನ ತಾಯಿ ತನ್ನ ಕುಟುಂಬಸ್ಥರಿಗೆ ತಿಳಿಸಬೇಕಂತೆ. ಇಂತಹ ಸಂಪ್ರದಾಯ ಚೀನಾದ ಕೆಲವು ಪ್ರದೇಶಗಳಲ್ಲಿಯೂ ಇವೆಯಂತೆ!
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1