ಮಧುಗಿರಿ: ಪರಿಶ್ರಮದ ವಿದ್ಯಾಭ್ಯಾಸ, ಉಜ್ವಲ ಭವಿಷ್ಯಕ್ಕೆ ತಳಹದಿ ಎಂದು ಟಿ.ವಿ. ವೆಂಕಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಮಹಂತೇಶ ಮೈ ಹೊಸಮನಿ ಅಭಿಪ್ರಾಯ ಪಟ್ಟರು.
ವೆಂಕಟಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರಥಮ ಪಿ.ಯು ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಹೆಚ್ಚು ಅಂಕ ಪಡೆದು ತೇರ್ಗಡೆಯಾದವರಿಗೆ ಅಭಿನಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭವಿಷ್ಯದಲ್ಲಿ ಖುಷಿ ಆನಂದ ಶಾಶ್ವತವಾಗಿರಬೇಕೆಂದರೆ ಏಕಾಗ್ರತೆ, ಸತತ ಅಧ್ಯಯನ ಅವಶ್ಯ, ಶಿಕ್ಷಕರ ಮಾರ್ಗದರ್ಶನ ಅತ್ಯಗತ್ಯ. ವಿನಯ ವಿದ್ಯೆಗೆ ಪೋಷಕವಾಗಿರಬೇಕೆಂದರು.
ಮುಖ್ಯ ಅತಿಥಿ ಹಿರಿಯ ಸಾಹಿತಿ ಪ್ರೊ. ಮಲವ ಮೂರ್ತಿ ಎದೆಗೆ ಬಿದ್ದ ಅಕ್ಷರ ಅರಿವನ್ನು ಬಿತ್ತರಿಸಿ, ಆತ್ಮ ವಿಶ್ವಾಸ ತುಂಟ, ಅಹಂಕಾರ ಲಯಗೊಳಸುತ್ತದೆ, ಗುರು-ಹಿರಿಯರು, ತಂದೆ ತಾಯಿರಲ್ಲಿ ಗೌರವ, ವಿಶ್ವಾಸ ನಂಬಿಕೆ ಮತ್ತು ಪ್ರೀತಿ ಬೆಳೆಸುತ್ತದೆ.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಜಿ.ಹೆಚ್, ಹನುಮಂತರಾಯಪ್ಪ ವಿದ್ಯೆ ಬಾಳಿನ ಬೆಳಕು, ಶಿಕ್ಷಕರ ಪರಿಶ್ರಮ, ಪರೀಕ್ಷೆ ಫಲಿತಾಂಶದ ಗುಣ ಮಟ್ಟಕ್ಕೆ ಪೂರಕವಾಗಲಿ ಎಂದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷನ ನಿರ್ದೇಶಕ ವೆಂಕಟೇಶಮೂರ್ತಿ, ರಂಗಸ್ವಾಮಯ್ಯ, ಏನುಕುಮಾರ್, ಚಿತ್ತಯ್ಯ ಮತ್ತು ಮಹೇಶ್, ರೇಣುಕ, ಗುಲಾಬ್ ಸಾಬ್, ಶ್ವೇಷ, ತೌಹೀದ ಬಾನು, ಚೈತ್ರ ಮತ್ತು ಭೂತರಾಜು ಮಾತನಾಡಿದರು.
ನವ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮಂಜುಪ್ರಸಾದ್ ಸ್ವಾಗತಿಸಿ, ಶೃತಿ ನಿರೂಪಿಸಿದರು. ಅಶ್ವತ್ಥ ನಾರಾಯಣ್ ರವರು ವಂದಿಸಿದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


