ಗಾಜಾದಲ್ಲಿ ರೋಗಿಗಳನ್ನು ಜೀವಂತ ಸಮಾಧಿ ಮಾಡುವ ಮೂಲಕ ಇಸ್ರೇಲಿ ಪಡೆಗಳ ಕ್ರೂರತೆ. ಕಮಲ್ ಅಡ್ವಾನ್ ಆಸ್ಪತ್ರೆಯ ಮೇಲೆ ಇಸ್ರೇಲ್ ಸೇನಾ ದಾಳಿಯ ಬಗ್ಗೆ ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯ ತುರ್ತು ತನಿಖೆಗೆ ಆದೇಶಿಸಿದೆ. ಉತ್ತರ ಗಾಜಾದ ಕಮಲ್ ಅಡ್ವಾನ್ ಆಸ್ಪತ್ರೆಯ ಮೇಲೆ ದಾಳಿ ನಡೆದಿದೆ.
ಅಕ್ಟೋಬರ್ 7 ರಂದು ಇಸ್ರೇಲಿ ಮಿಲಿಟರಿ ಆಕ್ರಮಣವು ಪ್ರಾರಂಭವಾದಾಗಿನಿಂದ ಗಾಜಾದಲ್ಲಿ ಇನ್ನೂ ಕಾರ್ಯನಿರ್ವಹಿಸುತ್ತಿರುವ 11 ಆಸ್ಪತ್ರೆಗಳಲ್ಲಿ ಕಮಲ್ ಅಡ್ವಾನ್ ಕೂಡ ಒಂದಾಗಿದೆ. ಸ್ಥಳಾಂತರಗೊಂಡ ಪ್ಯಾಲೆಸ್ಟೀನಿಯನ್ನರ ವಸತಿ ಟೆಂಟ್ ಗಳು ಸಹ ಆಸ್ಪತ್ರೆಯ ಬಳಿ ಕಾರ್ಯ ನಿರ್ವಹಿಸುತ್ತಿವೆ. ಇಸ್ರೇಲಿ ಪಡೆಗಳು ಬುಲ್ಡೋಜರ್ ಬಳಸಿ ಇವುಗಳನ್ನು ಕೆಡವಿದವು.
ರೋಗಿಗಳನ್ನು ಜೀವಂತವಾಗಿ ನೆಲದಲ್ಲಿ ಹೂಳಲು ಸೇನೆಯು ಬುಲ್ಡೋಜರ್ ಗಳನ್ನು ಬಳಸಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ. ಕಮಲ್ ಅಡ್ವಾನ್ ಆಸ್ಪತ್ರೆಯ ಮುಂಭಾಗದ ಅವಶೇಷಗಳಡಿಯಲ್ಲಿ ರೋಗಿಗಳು ಜೀವಂತ ಸಮಾಧಿಯಾಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ರೀತಿ ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಆಸ್ಪತ್ರೆಯ ಇನ್ ಕ್ಯುಬೇಟರ್ ನಲ್ಲಿ 12 ನವಜಾತ ಶಿಶುಗಳು ಆಹಾರ, ನೀರು ಇಲ್ಲದೇ ಇವೆ.


