ನವದೆಹಲಿ: ಕೇಂದ್ರ ಬಜೆಟ್ 2023ನ್ನು ಬುಧವಾರ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಮಂಡಿಸಿದ್ದಾರೆ. ಬಜೆಟ್ ಮಂಡನೆ ಬೆನ್ನಲ್ಲೇ ಪರ ವಿರೋಧಗಳು ವ್ಯಕ್ತವಾಗುತ್ತಿದೆ.
ಕೇಂದ್ರ ಬಜೆಟ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಬಜೆಟ್ ನ್ನು ವ್ಯಂಗ್ಯಮಾಡಿದ್ದು, ಇದು ಬಜೆಟ್ಟಾ? ಇಲ್ಲ ದಿನಸಿ ಅಂಗಡಿಯ ಚೀಟಿಯೇ? ಎಂದು ಪ್ರಶ್ನಿಸಿದ್ದಾರೆ.
ಇದೂ ಒಂದು ಬಜೆಟ್!, ಇದು ದಿನಸಿ ಅಂಗಡಿ ಮಾಲಿಕನ ಬಿಲ್ ಥರ ಇದೆ, ಒಂದು ಯೋಗ್ಯ ಬಜೆಟ್ ತನ್ನ ಉದ್ದೇಶಗಳನ್ನು ಬಹಿರಂಗಪಡಿಸಬೇಕು ಎಂದು ಅವರು ಟೀಕಿಸಿದ್ದಾರೆ.
ಜಿಡಿಪಿ ಬೆಳವಣಿಗೆ ದರವಾಗಿದ್ದರೆ, ಹೂಡಿಕೆಯ ಮಟ್ಟ ಮತ್ತು ರಿಟರ್ನ್ ದರ, ಆದ್ಯತೆಗಳು, ಆರ್ಥಿಕ ತಂತ್ರಗಾರಿಕೆ ಮತ್ತು ಸಂಪನ್ಮೂಲ ಕ್ರೋಢೀಕರಣವನ್ನು ಬಹಿರಂಗಪಡಿಸಿ ಎಂದು ಅವರು ಟ್ವೀಟ್ ನಲ್ಲಿ ತಮ್ಮದೇ ಸರ್ಕಾರಕ್ಕೆ ಕುಟುಕಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


