nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆಪ್‌ ನಲ್ಲಿ ಮಹಿಳಾ ಉದ್ಯಮಿಗಳನ್ನು ನೋಂದಾಯಿಸಲು ಮನವಿ

    February 16, 2026

    ಆಟದೊಂದಿಗೆ ಪಾಠ ಪ್ರವಚನಗಳ ಕಡೆ ಗಮನಹರಿಸಿ: ವಿದ್ಯಾರ್ಥಿಗಳಿಗೆ ಕೆ.ಎಸ್.ಹರೀಶ್ ಕಿವಿಮಾತು

    February 16, 2026

    ಮಕ್ಕಳ ಆಹಾರ ಮೇಳ:  ಮಕ್ಕಳು ಸಿದ್ಧಪಡಿಸಿದ ಆಹಾರ ಖರೀದಿಸಲು ಮುಗಿಬಿದ್ದ ಪೋಷಕರು

    February 16, 2026
    Facebook Twitter Instagram
    ಟ್ರೆಂಡಿಂಗ್
    • ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆಪ್‌ ನಲ್ಲಿ ಮಹಿಳಾ ಉದ್ಯಮಿಗಳನ್ನು ನೋಂದಾಯಿಸಲು ಮನವಿ
    • ಆಟದೊಂದಿಗೆ ಪಾಠ ಪ್ರವಚನಗಳ ಕಡೆ ಗಮನಹರಿಸಿ: ವಿದ್ಯಾರ್ಥಿಗಳಿಗೆ ಕೆ.ಎಸ್.ಹರೀಶ್ ಕಿವಿಮಾತು
    • ಮಕ್ಕಳ ಆಹಾರ ಮೇಳ:  ಮಕ್ಕಳು ಸಿದ್ಧಪಡಿಸಿದ ಆಹಾರ ಖರೀದಿಸಲು ಮುಗಿಬಿದ್ದ ಪೋಷಕರು
    • ಬೋರನಕಣಿವೆ ಶಂಕರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ: ನಟ ಶಿವರಾಜ್ ಕುಮಾರ್ ದಂಪತಿ ಭಾಗಿ
    • ಶ್ರೀ ಕ್ಷೇತ್ರ ಬೇಲದ ಕುಪ್ಪೆ ಶ್ರೀ ಮಹದೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪೂಜೆ
    • ಸಿದ್ಧಗಂಗಾ ಮಠದ ಸಿದ್ಧಲಿಂಗೇಶ್ವರ ಜಾತ್ರೆ:  ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ
    • ಕೊಲೆಯಾಗಿದ್ದಾಳೆಂದು ಶಂಕಿಸಲಾಗಿದ್ದ ಮಹಿಳೆ ಪ್ರಿಯಕರನ ಬಾಡಿಗೆ ಮನೆಯಲ್ಲಿ ಪತ್ತೆ!
    • ಕೇಂದ್ರದ ಅನುದಾನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ದುರುಪಯೋಗಪಡಿಸಿಕೊಂಡಿದೆ: ಬಿ.ವೈ.ವಿಜಯೇಂದ್ರ ಗಂಭೀರ ಆರೋಪ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ ನಮ್ಮ ಆದರ್ಶ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
    ರಾಜ್ಯ ಸುದ್ದಿ October 15, 2022

    ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ ನಮ್ಮ ಆದರ್ಶ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    By adminOctober 15, 2022No Comments2 Mins Read

    ಬೆಂಗಳೂರು : ಬುದ್ಧ, ಬಸವ, ಅಂಬೇಡ್ಕರ್ ವಾಲ್ಮೀಕಿ ನಮಗೆ  ಆದರ್ಶ ಹಾಗೂ ಪ್ರೇರಣೆ. ನಮ್ಮ ತೀರ್ಮಾನಗಳಿಗೆ ಈ ಮಹನೀಯರ ಬದುಕು, ವಿಚಾರಧಾರೆಯನ್ನು ಕೇಳಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ನಾಗಸೇನಾ ವಿದ್ಯಾಲಯದಲ್ಲಿ ಬುದ್ಧ, ಅಂಬೇಡ್ಕರ್ ಮಂಟಪ  ಉದ್ಘಾಟನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ವಸ್ತುಸಂಗ್ರಹಾಲಯಕ್ಕೆ  ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು,  ಬುದ್ಧ, ಬಸವ, ಅಂಬೇಡ್ಕರ್ ವಾಲ್ಮೀಕಿ ತಮ್ಮ ಬದುಕನ್ನೇ ತ್ಯಾಗ ಮಾಡಿದ್ದರಿಂದ ಅವರು ಶಾಶ್ವತವಾಗಿರುತ್ತಾರೆ. ಆದರ್ಶಗಳನ್ನು ಬಿಡದವರು ಶಾಶ್ವತವಾಗಿರುತ್ತಾರೆ. ಆದರ್ಶಗಳನ್ನು ಬಿಟ್ಟವರು ಕಾಲಸೀಮಿತವಾಗಿರುತ್ತಾರೆ ಎಂದರು.


    Provided by
    Provided by

    ನಾಗಸೇನಾ ವಿದ್ಯಾಲಯಕ್ಕೆ ಅಗತ್ಯ ಅನುದಾನ:

    ನಾಗಸೇನಾ ವಿದ್ಯಾಲಯಕ್ಕೆ ಅಗತ್ಯ ಅನುದಾನವನ್ನು ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದ ಮುಖ್ಯಮಂತ್ರಿಗಳು ನಾನು ಒಬ್ಬ  ಅಂಬೇಡ್ಕರ್, ಬುದ್ದ, ಬಸವ, ವಾಲ್ಮೀಕಿ ಭಕ್ತ. ಅಂಬೇಡ್ಕರ್ ಅವರ ಇಚ್ಛೆಯಂತೆ ಸಂಸ್ಥೆ  ಬೆಳೆದಿದೆ. ಇದು ಇನ್ನಷ್ಟು ಬೆಳೆಯಬೇಕು. ಇಲ್ಲಿ  ಪ್ರಸ್ತಾಪಿಸಿರುವ 2-3 ವಿಚಾರಗಳಿಗೆ ಸಂಪೂರ್ಣ ಸಹಮತ ಮತ್ತು ಬೆಂಬಲ ನೀಡಲಾಗುವುದು ಸಂಸ್ಥೆಗೆ ಅಗತ್ಯವಿರುವ  ಅನುದಾನವನ್ನು  ಮುಂದಿನ ವರ್ಷ ಪಿಯುಸಿ ಅದರ ಮುಂದಿನ ವರ್ಷ ಪದವಿ ಕೋರ್ಸುಗಳು ಪ್ರಾರಂಭ ಮಾಡಬೇಕೆಂಬ  ಷರತ್ತಿ ಮೇಲೆ ಬಿಡುಗಡೆ ಮಾಡಲಾಗುವುದು ಎಂದರು.

    ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿರುವ ಸಂಸ್ಥೆ ಇನ್ನೂ ಬೆಳೆಯಬೇಕು. ಕೇಂದ್ರ ಸಚಿವ ರಾಮದಾಸ್ ಅಟಾವಳೆ ಅವರು ಸಹ ಇದಕ್ಕೆ ಬೆಂಬಲ ನೀಡುವರು ಎಂದರಲ್ಲದೆ, ಸರ್ಕಾರ ಎಸ್.ಸಿ. ಎಸ್.ಪಿ ಟಿ.ಎಸ್ಪಿ ಯೋಜನೆಯಡಿ 100 ಅಂಬೇಡ್ಕರ್ ಹಾಸ್ಟೆಲ್ ಗಳನ್ನು ನಿರ್ಮಿಸಲು ತೀರ್ಮಾನ ಮಾಡಲಾಗಿದೆ. ಈ ಪೈಕಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲ ಮಾಡಿಕೊಡುವುದಾದರೆ ಒಂದು ಹಾಸ್ಟೆಲ್ ನ್ನು ಈ ಆವರಣದಲ್ಲಿ  ನಿರ್ಮಿಸಲಾಗುವುದು. ಅಂಬೇಡ್ಕರ್ ಅವರ ಜೀವನಚರಿತ್ರೆ ಬಿಂಬಿಸುವ ವಸ್ತುಸಂಗ್ರಹಾಲಯ ನಿರ್ಮಿಸುವ ಯೋಜನೆಗೆ ರಾಜ್ಯ ಸರ್ಕಾರದ ಯೋಜನೆಯಡಿ  ಅಂಬೇಡ್ಕರ್ ಭೇಟಿ ನೀಡಿದ ಹತ್ತು ಸ್ಥಳಗಳ ಅಭಿವೃದ್ದಿ ಪಡಿಸುತ್ತಿದ್ದು, ಅದರಲ್ಲಿ ನಾಗಸೇನಾ  ವಿದ್ಯಾಲಯಕ್ಕೂ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಆದರ್ಶ ಜೀವನ ನಡೆಸಬೇಕೆಂದು  ತಿಳಿಸಿದರು.

    ಬುದ್ಧ ಅಂತ:ಕರಣದ ಪ್ರತೀಕ:

    ಪೀಪಲ್ಸ್ ಎಜುಕೇಷನ್ ಸೊಸೈಟಿಯನ್ನು ಅಂಬೇಡ್ಕರ್ ಸ್ಥಾಪನೆ ಮಾಡಿದ್ದಾರೆ‌. ಅಂತಹ ಸಂಸ್ಥೆ ನಮ್ಮ ಬೆಂಗಳೂರಿನಲ್ಲಿರುವುದು  ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಜಗತ್ತಲ್ಲಿ ಮಾನವ ಮನುಷ್ಯನಾಗಿ ಹುಟ್ಟುತ್ತಾರೆ. ಕೆಲವರು ಮಾತ್ರ ಮಾನವರಾಗುತ್ತಾರೆ. ಮನುಷ್ಯರಾಗಿ ಹುಟ್ಟಿ ಕೆಲವರು ದೇವರಾಗುತ್ತಾರೆ. ನ್ಯಾಯ ನೀತಿ, ಧರ್ಮ, ಸತ್ಯ, ಅಹಿಂಸೆ,ಪ್ರೀತಿ, ವಿಶ್ವಾಸಗಳ ಸಂಕೋಲೆಯಲ್ಲಿ ಸಿಕ್ಕವನು ಮಾನವ. ಬುದ್ಧ ಜಾಗೃತಿಯ ಪ್ರತೀಕ. ಬುದ್ಧನಿಗೆ  ಸಮಾಜದಲ್ಲಿರುವ ದು:ಖ, ದುಮ್ಮಾನಗಳನ್ನು ನೋಡಿ ಅಂತರಂಗದಲ್ಲಿ ಜಾಗೃತಿಯಾಯಿತು. ಮುಂದೆ ಆತ ತ್ಯಾಗದ ಪ್ರತೀಕ, ಜ್ಞಾನದ ಪ್ರತೀಕ, ಇಡಿ ವಿಶ್ವದಲ್ಲಿ ಅಂತ:ಕರಣದ ಪ್ರತೀಕವಾಗಿದ್ದಾನೆ. ಬುದ್ದನನ್ನು ಜಗತ್ತಿನ ಎಲ್ಲಾ ದೇಶಗಳಲ್ಲಿ ಪ್ರೀತಿಸುತ್ತಾರೆ. ಅಮೇರಿಕಾದ ಅಧ್ಯಕ್ಷರ ಕಚೇರಿಯಲ್ಲಿ ಬುದ್ಧನ ಪ್ರತಿಮೆಯಿದೆ. ಬುದ್ಧ  ಶ್ರೇಷ್ಠ ದೇವಮಾನವ ಎಂದರು.

    nagasena

    ಬಸವಣ್ಣ ಜಾಗೃತಿಯ ಪ್ರತೀಕ:

    ಬಸವಣ್ಣ ಕೂಡ ಜಾಗೃತಿಯ ಪ್ರತೀಕ. ಜಾಗೃತಿಯ ಜೊತೆಗೆ   ವ್ಯವಸ್ಥೆಯ ವಿರುದ್ದ ಸಿಡಿದೆದ್ದು, ಹೊಸ  ಮನ್ವಂತರವನ್ನು ಹಾಡಿದರು. ಸಮಾಜದಲ್ಲಿ ಸಮಾನತೆಯ ಪ್ರತೀಕ ಬಸವಣ್ಣ. ಧರ್ಮಕ್ಕೆ ಅತ್ಯಂತ ಸೂಕ್ತ ವ್ಯಾಖ್ಯಾನವಾದ ದಯವೇ ಧರ್ಮದ ಮೂಲ ಎಂದು ವಿಶ್ವ ಮಾನವರಾದರು. ಅಂಬೇಡ್ಕರ್ ಅವರು ಜ್ಞಾನ, ಜಾಗೃತಿ, ಸಮಾನತೆ,  ತ್ಯಾಗದ ಹಾಗೂ ಭಾರತ ದೇಶದ ಭವ್ಯ ಭವಿಷ್ಯವನ್ನು ಬರೆದ ಧೀಮಂತ. ಅಂಬೇಡ್ಕರ್ ಅವರು ಸಂವಿಧಾನ ಬರೆಯದಿದ್ದರೆ, ಈ ಸಮಾಜದಲ್ಲಿ ಶಾಂತಿ ಸೌಹಾರರ್ದತೆ ಇರುತ್ತಿರಲಿಲ್ಲ. ಶಾಂತಿ, ಸೌಹಾರ್ದತೆ ಇದ್ದರೆ ಮಾತ್ರ ಪ್ರಗತಿಯಾಗಲು ಸಾಧ್ಯ. ಅದಕ್ಕೆ ಸಂಪೂರ್ಣವಾದ,  ಅದ್ಭುತವಾದ ಕಾನೂನಿನ ಸ್ವರೂಪದ ಸಂವಿಧಾನವನ್ನು ನಮಗೆ ಕೊಟ್ಟಿದ್ದು. ಇದನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ, ಸೂರ್ಯಚಂದ್ರ ಇರುವವರೆಗೂ ಅಂಬೇಡ್ಕರ್ ಹೆಸರು ಶಾಶ್ವತವಾಗಿರುತ್ತದೆ ಎಂದರು.

    ಪರಿವರ್ತನೆಯ ಪ್ರತೀಕ:

    ವಾಲ್ಮಿಕಿ ಪರಿವರ್ತನೆಯ ಪ್ರತೀಕ. ತನ್ನ ಹಿಂದಿನ ಜೀವನವನ್ನು ಬದಲಾಯಿಸಿಕೊಂಡು ಮರ್ಹರ್ಷಿಯಾದರು. ವಾಲ್ಮೀಕಿ ರಾಮಾಯಣದ ಮುಖಾಂತರ ನ್ಯಾಯ, ನೀತಿ, ಧರ್ಮವನ್ನು ಸ್ವಷ್ಟವಾಗಿ ವ್ಯಾಖ್ಯಾನ ಮಾಡಿದ್ದಾರೆ. ವಾಲ್ಮೀಕಿ ಇರದಿದ್ದರೆ ರಾಮಾಯಣ ಇಷ್ಟು ಸುಂದರವಾದ, ಆದರ್ಶವಾದ ರಾಮಾಯಣ ಇರುತ್ತಿರಲಿಲ್ಲ. ಭೂಮಿಯ ಮೇಲೆ ಮಾನವನ ಜನ್ಮವಿರುವವರೆಗೂ ಶಾಶ್ವತವಾಗಿ ಎಲ್ಲರ ಮನದಾಳದಲ್ಲಿ ಈ ನಾಲ್ಕೂ ಜನ ಇರುತ್ತಾರೆ ಎಂದರು.

    ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಂದಾಸ್ ಅಠವಳೆ, ನಾಗಸೇನಾ ವಿದ್ಯಾಲಯದ ಅಧ್ಯಕ್ಷ ಡಾ: ಎಂ.ವೆಂಕಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಕೇಂದ್ರದ ಅನುದಾನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ದುರುಪಯೋಗಪಡಿಸಿಕೊಂಡಿದೆ: ಬಿ.ವೈ.ವಿಜಯೇಂದ್ರ ಗಂಭೀರ ಆರೋಪ

    February 16, 2026

    ಅಧಿಕಾರ ಹಂಚಿಕೆ ಬಗ್ಗೆ ಪದೇ ಪದೇ ಕೇಳಬೇಡಿ, ಹೈಕಮಾಂಡ್ ನಿರ್ಧರಿಸಲಿದೆ: ಸಿಎಂ ಸಿದ್ದರಾಮಯ್ಯ ಗರಂ

    February 15, 2026

    ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ: 30 ಲಕ್ಷ ಮೌಲ್ಯದ ಚಿನ್ನಾಭರಣಕ್ಕಾಗಿ ಕೊಲೆ ಶಂಕೆ!?

    February 14, 2026

    Comments are closed.

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆಪ್‌ ನಲ್ಲಿ ಮಹಿಳಾ ಉದ್ಯಮಿಗಳನ್ನು ನೋಂದಾಯಿಸಲು ಮನವಿ

    February 16, 2026

    ತುಮಕೂರು: ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆಪ್‌ ನಲ್ಲಿ ಮಹಿಳಾ ಉದ್ಯಮಿಗಳನ್ನು ನೋಂದಾಯಿಸಲು ಜನವರಿ 9ರಂದು ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆಪ್‌…

    ಆಟದೊಂದಿಗೆ ಪಾಠ ಪ್ರವಚನಗಳ ಕಡೆ ಗಮನಹರಿಸಿ: ವಿದ್ಯಾರ್ಥಿಗಳಿಗೆ ಕೆ.ಎಸ್.ಹರೀಶ್ ಕಿವಿಮಾತು

    February 16, 2026

    ಮಕ್ಕಳ ಆಹಾರ ಮೇಳ:  ಮಕ್ಕಳು ಸಿದ್ಧಪಡಿಸಿದ ಆಹಾರ ಖರೀದಿಸಲು ಮುಗಿಬಿದ್ದ ಪೋಷಕರು

    February 16, 2026

    ಬೋರನಕಣಿವೆ ಶಂಕರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ: ನಟ ಶಿವರಾಜ್ ಕುಮಾರ್ ದಂಪತಿ ಭಾಗಿ

    February 16, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.