ಸಾದಹಳ್ಳಿ ಗೇಟ್ ಸಮೀಪದ ಐಟಿಸಿ ಕಾರ್ಖಾನೆ ಎದುರು ಬುಧವಾರ ಬೆಳಿಗ್ಗೆ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ದಿನಪತ್ರಿಕೆ ವಿತರಣೆಗೆ ತೆರಳುತ್ತಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸೊಣ್ಣಪ್ಪನಹಳ್ಳಿ ಗ್ರಾಮದ ಮನೋಜ್(18) ಮೃತಪಟ್ಟವರು. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮುಖ್ಯರಸ್ತೆಯ ಪಕ್ಕದಲ್ಲಿರುವ ಸೇವಾ ರಸ್ತೆಯಲ್ಲಿ ಬೆಳಿಗ್ಗೆ 6.30ರ ಸುಮಾರಿಗೆ ಮನೋಜ್ ಪತ್ರಿಕೆ ವಿತರಿಸಲು ಉತ್ತನಹಳ್ಳಿ ಕಡೆಗೆ ತೆರಳುತ್ತಿದ್ದ ಎನ್ನಲಾಗಿದೆ.


