nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು: ಫಿಟ್ವೀಲ್  ಟೂಲ್ಸ್ ಸಂಸ್ಥೆಯಲ್ಲಿ ಕಾರ್ಮಿಕರಿಗಾಗಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ

    September 16, 2025

    ಬೀದರ್ | ಬಾಲಕಿಯರ ಕುಸ್ತಿ ಪಂದ್ಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶೋಭಾ

    September 16, 2025

    ದ್ವೇಷಭಾಷಣ: ಶಾಸಕ ಯತ್ನಾಳ್ ವಿರುದ್ಧ ತುಮಕೂರಿನಲ್ಲಿ ದೂರು ದಾಖಲು

    September 16, 2025
    Facebook Twitter Instagram
    ಟ್ರೆಂಡಿಂಗ್
    • ತುಮಕೂರು: ಫಿಟ್ವೀಲ್  ಟೂಲ್ಸ್ ಸಂಸ್ಥೆಯಲ್ಲಿ ಕಾರ್ಮಿಕರಿಗಾಗಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ
    • ಬೀದರ್ | ಬಾಲಕಿಯರ ಕುಸ್ತಿ ಪಂದ್ಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶೋಭಾ
    • ದ್ವೇಷಭಾಷಣ: ಶಾಸಕ ಯತ್ನಾಳ್ ವಿರುದ್ಧ ತುಮಕೂರಿನಲ್ಲಿ ದೂರು ದಾಖಲು
    • ರಾಜ್ಯದಲ್ಲೂ ಜಾರಿಯಾಗುತ್ತಾ, 15 ವರ್ಷ ಹಳೆಯ ವಾಹನ ಗುಜರಿಗೆ ಹಾಕುವ ರೂಲ್ಸ್!
    • ಕುಡಿತ ಬಿಟ್ಟರು, ಹತ್ತಾರು ಶಾಲೆಗಳಿಗೆ ಬೆಳಕಾದರು: ಕುಶಲಕರ್ಮಿ ಸಮಾಜ ಸೇವಕ ಮಂಟೇಲಿಂಗಾಚಾರ್
    • ಅಂಗನವಾಡಿ ಕೇಂದ್ರದ ತಾಯಂದಿರಿಗೆ ಪೋಷಕತ್ವ ಯೋಜನೆಯ ಕುರಿತು ಮಾಹಿತಿ
    • ಸಂತಪೂರ ಮರಿಯ ಕೃಪಾ ದವಾಖಾನೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ
    • ಸತ್ವಯುತ ಆಹಾರ ಸೇವನೆ, ನಿಯಮಿತ ವ್ಯಾಯಾಮದಿಂದ ಉತ್ತಮ ಆರೋಗ್ಯ: ಹಾದನೂರು ಪ್ರಕಾಶ್ 
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವಿವಿಧ ಉದ್ಯೋಗಾವಕಾಶ ಒದಗಿಸುವ ದೃಶ್ಯಕಲಾ ಪದವಿ | ಬಿ.ವಿ.ಎ. ಪದವಿ ನೌಕರಿಗೂ ಸೈ–ಸ್ವಯಂ ಉದ್ಯೋಗಕ್ಕೂ ಸೈ
    ಲೇಖನ June 16, 2024

    ವಿವಿಧ ಉದ್ಯೋಗಾವಕಾಶ ಒದಗಿಸುವ ದೃಶ್ಯಕಲಾ ಪದವಿ | ಬಿ.ವಿ.ಎ. ಪದವಿ ನೌಕರಿಗೂ ಸೈ–ಸ್ವಯಂ ಉದ್ಯೋಗಕ್ಕೂ ಸೈ

    By adminJune 16, 2024No Comments4 Mins Read
    cc barakera
    • ಕಲಿಕೆಯೊಂದಿಗೆ ಗಳಿಕೆಯೂ ಸಾಧ್ಯ
    • ಕೋರ್ಸ್ ಆಯ್ಕೆಯ ವಾಸ್ತವಿಕತೆ

    ದ್ವಿತೀಯ ಪಿಯುಸಿ ಫಲಿತಾಂಶದ ನಂತರ ಯಾವ ಕೋರ್ಸ್ ಪದವಿಗೆ ಸೇರಿದರೆ ಉತ್ತಮ ಭವಿಷ್ಯವಿದೆ ಎಂಬ ಹುಡುಕಾಟದಲ್ಲಿ ಪಾಲಕರು ಮಕ್ಕಳು ಹೆಣಗಾಡುತ್ತಾರೆ. ಆರೋಗ್ಯವು ಜೀವನದ ಸಂಪತ್ತು ಎಂಬಂತೆ ಶಿಕ್ಷಣವು ವಿಶ್ವದ ಶಕ್ತಿಯುತ ಅಸ್ತ್ರ ಎಂಬುದು ಎಲ್ಲರಿಗೂ ಗೊತ್ತು. ಅಂತೆಯೇ ಯಾವ ಕೋರ್ಸ್ ಪದವಿ ಪಡೆದರೆ ಏನೇನು ಲಾಭ? ಯಾವ ಯಾವ ಉದ್ಯೋಗ ಪಡೆಯಬಹುದು ಎಂಬ ಚಿಂತನೆಗಳಿಗೆ ಒಳಗಾಗುವುದು ಸಹಜವಾಗಿದೆ. ಬಹುಪಾಲು ಪಾಲಕರು ವಿದ್ಯಾರ್ಥಿಗಳು ಇಂತಹ ಸಂಗತಿಗಳ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ಹೋಗದಿರುವವರೇ ಹೆಚ್ಚು.

    ಪಿಯುಸಿ ಮತ್ತು ಐಟಿಐ ಪಾಸಾದವರು ತಮ್ಮ ಅಭಿವೃದ್ಧಿ ಆಸಕ್ತಿಯ ವಿಷಯಗಳಲ್ಲಿ ಶಿಕ್ಷಣ ಪಡೆಯಲು ಕೆಲ ಪಾಲಕರೇ ಬಿಡುತ್ತಿಲ್ಲ ಎಂಬುದು ಹಲವು ಮಕ್ಕಳ ಕೊರಗಾಗಿದೆ. ಕಾರಣ ಕೆಲ ಪಾಲಕರು ತಮ್ಮ ಕನಸುಗಳನ್ನು ಮಕ್ಕಳ ಮೂಲಕ ಈಡೇರಿಸಿಕೊಳ್ಳುವ ಇರಾದೆಯಲ್ಲಿರುತ್ತಾರೆ. ಇದರಿಂದ ಮಕ್ಕಳ ಕಲಿಕಾ ಹಂಬಲ ಹಾಗೂ ಆಸಕ್ತಿಯನ್ನೇ ಕುಸಿಯುವಂತೆ ಮಾಡಿ ಅವರಲ್ಲಿ ಆತಂಕ ಒತ್ತಡ ಹೆಚ್ಚಲು ಕಾರಣವಾಗಬಹುದು.


    Provided by
    Provided by
    Provided by

    ಇನ್ನೊಂದೆಡೆ ವಿದ್ಯಾರ್ಥಿಗಳು ತಮ್ಮ ಸಹಪಾಠಿ ಮಿತ್ರರೊಂದಿಗೆನೇ ಓದಬೇಕೆಂಬ ಬಲವಾದ ಹಂಬಲ ಹೊಂದಿರುತ್ತಾರೆ. ಇಂಥವರು ತಮ್ಮ ಮಿತ್ರರು ಆಯ್ದುಕೊಂಡ ಕೋರ್ಸ್ ಹಾಗೂ ಕಾಲೇಜನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ತಮ್ಮ ಆಸಕ್ತಿ ಅಭಿರುಚಿಗಳನ್ನು, ಭವಿಷ್ಯದ ಚಿಂತನೆಯನ್ನೇ ಮರೆಮಾಚಿಸಿ ಬಿಡುತ್ತಾರೆ. ಅಶೀಕ್ಷಿತ ಬಡ ಪಾಲಕರು ತಮ್ಮ ಮಕ್ಕಳ ಮೇಲಿನ ವ್ಯಾಮೋಹದಿಂದ ತಮ್ಮ ಜವಾಬ್ದಾರಿಯನ್ನು ಮರೆತು ಅವರ ಆಣತಿಗೆ ಸಮ್ಮತಿಸುತ್ತಾರೆ. ಇಂತಹ ನಿರ್ಧಾರಗಳು ಮಕ್ಕಳ ಶಿಕ್ಷಣ & ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪರಿಣಾಮ ಕನಿಷ್ಠ ಅಂಕ ಪಡೆದು ಪಾಸಾದವರು, ಅನುತೀರ್ಣರಾದವರು, ನಿರುದ್ಯೋಗಿಗಳಾಗುವಂತಹ ಸಾಧ್ಯತೆಗಳೇ ಹೆಚ್ಚು. ಇಂತಹ ಮಕ್ಕಳು ಅವರ ಪ್ರೀತಿಯಿಂದ ವಂಚಿತರಾಗಿ ಪಾಲಕರಿಗೂ ಹೊರೆಯಾಗಿ ಪಾಲಕರ ದೂಷಣೆಗೆ ಗುರಿಯಾಗುತ್ತಾರೆ. ಜೀವನದಲ್ಲಿ ನಿರಾಶಕ್ತಿ, ಹತಾಶೆ, ಜಿಗುಪ್ಸೆಹೊಂದಿ ವ್ಯಸನಿಗಳಾಗಬಹುದು. ಇದೂ ಕೂಡ ಕೋರ್ಸ್ ಆಯ್ಕೆಯ ವೈಫಲ್ಯಕ್ಕೆ ಕಾರಣವಾಗುತ್ತದೆ.

    ಇಂತಹ ಮಹತ್ವದ ಕಾಲಘಟ್ಟದಲ್ಲಿ ಪಾಲಕರು ಹಾಗೂ ವಿದ್ಯಾರ್ಥಿಗಳು ಒಟ್ಟಿಗೆ ಕುಳಿತು ಪರಸ್ಪರ ಆಪ್ತ ಸಮಾಲೋಚನೆ ಮಾಡಿ ಹೆಜ್ಜೆ ಇಡುವುದು ಉತ್ತಮ. ಇದರಿಂದ ಮಕ್ಕಳ ಕಲಿಕೆಯ ನಂತರ ಉತ್ತಮ ಉದ್ಯೋಗ, ವೇತನಭಾಗ್ಯ ಲಭಿಸಿ ಸ್ವಾವಲಂಬಿ ಜೀವನಕ್ಕೆ ಭದ್ರಬುನಾದಿ ಸಿಗಬಹುದು ಎಂಬ ಕುರಿತು ಎಲ್ಲಾ ಪ್ರಜ್ಞಾವಂತ ಪಾಲಕರು ಅರಿಯುವ ಅಗತ್ಯವಿದೆ.

    ದೃಶ್ಯಕಲಾ ಪದವಿ ವೈವಿಧ್ಯತೆಗಳು:

    ತುಮಕೂರಿ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜು ದಕ್ಷಿನ ಕರ್ನಾಟಕದ ಏಕೈಕ ಸರ್ಕಾರಿ ಕಾಲೇಜು ಇದಾಗಿದೆ. ಕಳೆದ 30 ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಶೇ.90ರಷ್ಟು ವಿದ್ಯಾರ್ಥಿಗಳು ವಿವಿಧ ಉದ್ಯೋಗವಕಾಶಗಳನ್ನು ಪಡೆದುಕೊಂಡಿರುತ್ತಾರೆ. ಇಲ್ಲಿ ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ವಿದ್ಯಾರ್ಥಿಗಳು ಬಿ.ವಿ.ಎ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.

    ಔದ್ಯೋಗಿಕ ಕೌಶಲ್ಯ ಆಧಾರಿತ ದೃಶ್ಯಕಲಾ ಪ್ರಕಾರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ, ಹಸ್ತ ಕೌಶಲ್ಯ ಹಾಗೂ ಸೃಜನಶೀಲ ಗುಣ ಹೊಂದಿದ ವಿದ್ಯಾರ್ಥಿಗಳಿಗೆ ದೇಶ, ವಿದೇಶಗಳಲ್ಲಿಯೂ ಹೆಚ್ಚಿನ ಬೇಡಿಕೆ ಇದೆ. ಹಾಗೂ ಉದ್ಯೋಗ ಅವಕಾಶಗಳಿವೆ ಜೊತೆಗೆ ವಿವಿಧ ಕಲಾ ಪ್ರಕಾರಗಳಲ್ಲಿ ಪ್ರಾವೀಣ್ಯತೆ ಪಡೆದುಕೊಂಡವರು ಹೆಸರು, ಹಣ, ಕೀರ್ತಿ ಸಂಪಾದಿಸಲು ವಿಶ್ವ ಮಟ್ಟದಲ್ಲಿ ಸಾಕಷ್ಟು ಅವಕಾಶಗಳಿವೆ ಎಂಬುದನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಗಮನಹರಿಸಬೇಕಾಗಿದೆ.

    ಬಿ.ವಿ.ಎ. ಪದವಿಗಳು:

    ಬಿ.ವಿ.ಎ–ಪೇಂಟಿಂಗ್ ಪದವಿ ಜೊತೆಗೆ ಕರ್ನಾಟಕ ಸರ್ಕಾರದ ಅನುಮತಿ ಪಡೆದು 2024-25 ನೇ ಸಾಲಿನಿಂದ ನಮ್ಮ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿನಲ್ಲಿ ಹೊಸದಾಗಿ ಬಿ.ವಿ.ಎ ಅನಿಮೇಶನ್ ಹಾಗೂ ಬಿ.ವಿ.ಎ ಗ್ರಾಫಿಕ್‍ ಡಿಸೈನ್ ಪದವಿ ಕೋರ್ಸ್‍ಗಳನ್ನು ಆರಂಭಿಸಲಾಗಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಡಿಮೆ ಫೀ ಹಣದಲ್ಲಿ ದುಬಾರಿ ವೆಚ್ಚದ ಈ ಪದವಿಗಳನ್ನು ಪಡೆಯುವ ಅವಕಾಶವಿದೆ. ಆಸಕ್ತರು ಈ ಹೊಸ ಪದವಿ ಕೋರ್ಸ್‍ಗಳ ಪ್ರಯೋಜನ ಪಡೆದುಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

    ದೇಶದ ಕಲೆ ಸಂಸ್ಕೃತಿ ಸಂಪ್ರದಾಯಗಳ ವಿವಿಧ ಕಲಾಶೈಲಿಗಳು, ಕಲಾ ಪ್ರಕಾರಗಳು ಕಲಾ ಇತಿಹಾಸ ಸೌಂದರ್ಯಶಾಸ್ತ್ರ ಮುಂತಾದ ಕೌಶಲ್ಯಭರಿತ ಸೃಜನಶೀಲ ಕಲೆಗಳಾದ ವರ್ಣ ಚಿತ್ರಗಳ ರಚನೆ, ವರ್ಣಗಳ ಪ್ರಭಾವ ಮತ್ತು ಪರಿಣಾಮಗಳ ಸೈದ್ದಾಂತಿಕ ಅಧ್ಯಯನ ಅನಾಟಮಿ, ರೇಖಾಚಿತ್ರಣ, ಕ್ಯಾಲಿಗ್ರಫಿ, ಮುದ್ರಣ ಕಲೆ, ಗ್ರಾಫಿಕ್ ಅಂಡ್ ಗ್ರಾಫಿಕ್ ಡಿಸೈನಿಂಗ್, ತಂತ್ರಗಾರಿಕೆ, ಅನಿಮೇಷನ್ 2ಡಿ 3ಡಿ ವಿನ್ಯಾಸಗಳು, ಶಿಲ್ಪಕಲೆ ಮ್ಯೂರಲ್ಸ್ ರಚನೆ ಇನ್‍ಸ್ಟಾಲೇಶನ್, ಮಾಡ್ಲಿಂಗ್ ಕ್ರಾಪ್ಟ್ ಮುಂತಾದ ಹಸ್ತ ಕೌಶಲ್ಯಗಳು ಮತ್ತು ವಿವಿಧ ವೃತ್ತಿ ಕೌಶಲ್ಯಗಳನ್ನು ಈ ಪದವಿ ಶಿಕ್ಷಣ ಒಳಗೊಂಡಿದೆ. ಜೊತೆಗೆ ಸರ್ಕಾರದ ಮಾರ್ಗಸೂಚಿಯಂತೆ ಇಲಾಖೆಯ ಸಹಯೋಗದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವಂತಹ ಆನ್ಲೈನ್ ಪಾಠ ಪ್ರವಚನಗಳು ಈ ಪರೀಕ್ಷೆಗಳನ್ನು ಆನ್ಲೈನ್‍ನಲ್ಲಿ ಬರೆದು ಉತ್ತಮ ಉದ್ಯೋಗಗಳನ್ನು ಪಡೆಯುವ ಹಲವು ಅವಕಾಶಗಳಿವೆ. ಬಡ ಹಾಗೂ ಮಾಧ್ಯಮ ವರ್ಗದ ಮಕ್ಕಳಿಗೆ ಬಿ.ವಿ.ಎ ಪದವಿ ಆಯ್ಕೆ ಉತ್ತಮವಾಗಿದೆ ಎಂದರೆ ತಪ್ಪಾಗಲಾರದು.

    ಕಲಿಕೆಯೊಂದಿಗೆ ಗಳಿಕೆಗೂ ಅವಕಾಶ:

    ಕೆಲವು ವೃತ್ತಿ ಕೌಶಲ್ಯಗಳ ಕೋರ್ಸುಗಳು ಪದವಿಗಳಲ್ಲಿ ಮಕ್ಕಳು ತಮ್ಮ ಕಲಿಕಾ ಅವಧಿಯಲ್ಲಿಯೇ ಗಳಿಕೆಯನ್ನು ಮಾಡುವಂತಹ ಹತ್ತು ಹಲವು ಕೋರ್ಸುಗಳಿವೆ. ಅಂಥವುಗಳಲ್ಲಿ ದೃಶ್ಯಕಲೆಗಳ ಬಿ.ವಿ.ಎ. ಪದವಿ ಅತ್ಯಂತ ಉಪಯುಕ್ತವಾಗಿದೆ. ಇತರೆ ಪದವಿಗಳಂತೆ ದೃಶ್ಯಕಲಾ ಪದವಿಯಲ್ಲಿಯೂ ಸ್ನಾತಕ ಹಾಗೂ ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿ ಪಡೆಯುವ ಅವಕಾಶಗಳಿವೆ. ಇತರ ಪದವಿಗಳಿಗಿಂತ ಹೆಚ್ಚಿನ ಉದ್ಯೋಗವಕಾಶಗಳು ಈ ಪದವಿಗಳಿಂದ ಲಭ್ಯವಿವೆ ಎಂಬುದನ್ನು ಬಹುಪಾಲು ವಿದ್ಯಾರ್ಥಿಗಳು ಪಾಲಕರು ಅರಿಯಬೇಕಾಗಿದೆ. ಜೊತೆಗೆ ವಿವಿಧ ಕೌಶಲ್ಯಗಳನ್ನು ಈ ಪದವಿಯೊಂದಿಗೆ ಪಡೆಯುವುದರಿಂದ ಸ್ವಯಂ ಉದ್ಯೋಗ ಕೈಗೊಳ್ಳುವ ಅವಕಾಶಗಳನ್ನು ಬಿ.ವಿ.ಎ ಪದವಿ ಶಿಕ್ಷಣ ಒಳಗೊಂಡಿದೆ.

    ರಾಷ್ಟ್ರೀಯ ಶಿಕ್ಷಣ ನೀತಿ-2020 ಎನ್‍ ಇಪಿ ಅಡಿಯಲ್ಲಿ ದೃಶ್ಯಕಲಾ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಠ್ಯಕ್ರಮ ಜಾರಿಯಾಗಿದೆ ಇದರನ್ವಯ ದೃಶ್ಯಕಲೆಯಲ್ಲಿ ಹತ್ತಕ್ಕೂ ಹೆಚ್ಚು ಪದವಿ ಕೋರ್ಸ್‍ಗಳ ಪಟ್ಟಿಯನ್ನು ಯು.ಜಿ.ಸಿ ಮಾರ್ಗಸೂಚಿಯಂತೆ ಜಾರಿಗೊಳಿಸಲಾಗಿದೆ. ಜೊತೆಗೆ ಹೊಸ ಪಠ್ಯಕ್ರಮದಲ್ಲಿ ದೇಶದ ವಿವಿಧ ಕಲಾ ಪ್ರಕಾರಗಳು, ಸಂಸ್ಕೃತಿಗೆ ಸಂಬಂಧಿಸಿದ ಹಲವಾರು ಪ್ರಾಯೋಗಿಕ ಕಲಾ ವಿಷಯಗಳ ಕಲಿಕೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ವೃತ್ತಿ ಕೌಶಲ್ಯ ಶಿಕ್ಷಣದಿಂದ ಭವಿಷ್ಯದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬುದಂತೂ ಸತ್ಯ.

    ಶೈಕ್ಷಣಿಕ ಸೌಲಭ್ಯಗಳು:

    ಮೂಲ ಸೌಕರ್ಯಗಳಾದ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ವಿವಿಧ ವಿಷಯಗಳನ್ನು ಬೋಧಿಸಲು ಪರಿಣಿತ ಅಧ್ಯಾಪಕ ವೃಂದ, ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿ ವೇತನ ಸೌಲಭ್ಯ, ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲತೆಗಳು ಮುಂತಾದ ಸೌಲಭ್ಯಗಳಿವೆ.

    ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮ ಹಾಗೂ ತುಮಕೂರು ವಿಶ್ವವಿದ್ಯಾಲಯ ಸಹಯೋಗದೊಂದಿಗೆ ‘ಕಲಿಕೆ ಜೊತೆಗೆ ಕೌಶಲ್ಯ’ ಎಂಬ ವಿನೂತನ ಯೋಜನೆಯನ್ನು ಸರ್ಕಾರದಿಂದ ಜಾರಿಗೊಳಿಸಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ವಿವಿಧ ಉದ್ದಿಮೆ, ಕೈಗಾರಿಕೆಗಳಲ್ಲಿ ಉದ್ಯೋಗ ಪಡೆಯಲು ಹಸ್ತ ಕೌಶಲ್ಯ, ವೃತ್ತಿ ಕೌಶಲ್ಯ ಹಾಗೂ ಸೃಜನಶೀಲತೆಗಳ ಶಿಕ್ಷಣ ಅಗತ್ಯವಾಗಿದೆ. ಉದ್ಯಮಗಳು ಹಾಗೂಕೈಗಾರಿಕೆಗಳ ಪರಿಣಿತರಿಂದ ತರಬೇತಿ, ವೃತ್ತಿ ಮಾರ್ಗದರ್ಶನಗಳ ಅವಕಾಶವಿದೆ. ಪದವಿ ವಿಷಯಗಳೊಂದಿಗೆ ವೃತ್ತಿ ಕೌಶಲ್ಯ ವಿಷಯಗಳ ಕಲಿಕೆಗೆ ಅವಕಾಶವಿದ್ದು, ಪ್ಲೇಸ್‍ಮೆಂಟ್ ಪ್ರಕ್ರಿಯೆಗಳಿಗೆ ಆಧ್ಯತೆ ಹಾಗೂ ಪದವಿ ನಂತರ ಉದ್ಯೋಗ ಭರವಸೆ ಅವಕಾಶವಿರುತ್ತದೆ.

    ಪ್ರವೇಶಾರ್ಹತೆ: ನಾಲ್ಕು ವರ್ಷದ ಪದವಿ ಎಂಟು ಸೆಮಿಸ್ಟರ್‍ ಗಳು:

    ಬಿ.ವಿ.ಎ ದೃಶ್ಯಕಲಾ ಪದವಿ ಪ್ರವೇಶಾತಿಗೆ ದ್ವಿತೀಯ ಪಿಯುಸಿ, ಐಟಿಐ, ಡಿಪೆÇ್ಲೀಮಾ ಅಥವಾ 10+2 ತತ್ಸಮಾನ ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು. ಹೆಚ್ಚಿನ ಅಂಕಗಳ ಹಂಗಿಲ್ಲ-ಕಲಾಭಿರುಚಿ ಸೃಜನಶೀಲತೆ, ಪ್ರಾಯೋಗಿಕ ವಿಷಯಗಳ ಪರಿಣಿತಿಗೆ ಆದ್ಯತೆಯಿದೆ. ‘ಕಲೆ ಎಲ್ಲರನ್ನೂ ಸಹಜವಾಗಿ ಆಕರ್ಷಿಸುತ್ತದೆ, ಕೆಲವರನ್ನು ಮಾತ್ರ ಕೈ ಹಿಡಿದು ಕಾಪಾಡುತ್ತದೆ’.

    ಭವಿಷ್ಯದ ಉದ್ಯೋಗಾವಕಾಶಗಳು:

    ಸರ್ಕಾರಿ ಅಥವಾ ಖಾಸಗಿ ಶಾಲಾ-ಕಾಲೇಜುಗಳಲ್ಲಿ ಚಿತ್ರಕಲಾ ಶಿಕ್ಷಕ ವೃತ್ತಿ, ಆರ್ಟ್ ಗ್ಯಾಲರಿಗಳು ವಸ್ತು ಸಂಗ್ರಹಾಲಯಗಳಲ್ಲಿ ಕ್ಯೂರೇಟರ್‍ಹುದ್ದೆ, ದೂರದರ್ಶನ ಮಾಧ್ಯಮಗಳು ಹಾಗೂ ಚಲನಚಿತ್ರ ಉದ್ಯಮಗಳಲ್ಲಿ ಆರ್ಟಿಸ್ಟ್ ಫೆÇೀಟೋಗ್ರಾಫರ್, ಅನಿಮೇಟೆಡ್ ಡಿಸೈನರ್ ವಿನ್ಯಾಸಕರಾಗಿ ವಿಜ್ವಲ್‍ಆರ್ಟಿಸ್ಟ್ ಗಳಾಗಿ, ವ್ಯಂಗ್ಯ ಚಿತ್ರಕಾರರಾಗಿ, ಒಳಾಂಗಣ/ಹೊರಾಂಗಣ ವಿನ್ಯಾಸಗಾರರಾಗಿ ಮುಂತಾದ ಅನೇಕ ಉದ್ಯೋಗಾವಕಾಶಗಳ ಜೊತೆಗೆ ಸ್ವತಂತ್ರ ಉದ್ಯೋಗ ಉದ್ದಿಮೆ ಕೈಗೊಳ್ಳುವ ಅವಕಾಶಗಳಿವೆ.

     

    ಲೇಖನ: ಸಿ.ಸಿ. ಬಾರಕೇರ

    ಪ್ರಾಂಶುಪಾಲರು, ಸರ್ಕಾರಿ ಚಿತ್ರಕಲಾ ಪದವಿ ಕಾಲೇಜು, ತುಮಕೂರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ಬೆಳಕಿನ ವೇಗದ ಬಗ್ಗೆ ಒಂದು ಸಣ್ಣ ಆತ್ಮಾವಲೋಕನ

    August 13, 2025

    ನಾಶವಾಗ್ತಿದೆ ಮಿಂಚುಹುಳ ಸಂತತಿ!

    July 23, 2025

    ನಿಜವಾದ ದಾನಿ

    April 4, 2025
    Our Picks

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025

    ರಾಜಕೀಯ, ಆರ್ಥಿಕ ಸ್ಥಿರತೆ ಭಾರತ 3ನೇ ಅತೀ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ: ಪ್ರಧಾನಿ ಮೋದಿ

    August 29, 2025

    ದರ್ಗಾದ ಮೇಲ್ಛಾವಣಿ ಕುಸಿದು 5 ಮಂದಿ ಸಾವು

    August 16, 2025

    ಹಿಂದೂ ಎಂದು ನಂಬಿಸಿ ಅನೇಕ ಯುವತಿಯರನ್ನು ವಿವಾಹವಾಗಿದ್ದ ವ್ಯಕ್ತಿಯ ಬಂಧನ

    August 16, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು: ಫಿಟ್ವೀಲ್  ಟೂಲ್ಸ್ ಸಂಸ್ಥೆಯಲ್ಲಿ ಕಾರ್ಮಿಕರಿಗಾಗಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ

    September 16, 2025

    ತುಮಕೂರು: ಅಂತರಸನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ FITWEL TOOLS AND FORGINGS PRIVATE LIMITED ಸಂಸ್ಥೆಯಲ್ಲಿ ಕಾರ್ಮಿಕರಿಗಾಗಿ ರಸ್ತೆ ಸುರಕ್ಷತಾ ಜಾಗೃತಿ…

    ಬೀದರ್ | ಬಾಲಕಿಯರ ಕುಸ್ತಿ ಪಂದ್ಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶೋಭಾ

    September 16, 2025

    ದ್ವೇಷಭಾಷಣ: ಶಾಸಕ ಯತ್ನಾಳ್ ವಿರುದ್ಧ ತುಮಕೂರಿನಲ್ಲಿ ದೂರು ದಾಖಲು

    September 16, 2025

    ರಾಜ್ಯದಲ್ಲೂ ಜಾರಿಯಾಗುತ್ತಾ, 15 ವರ್ಷ ಹಳೆಯ ವಾಹನ ಗುಜರಿಗೆ ಹಾಕುವ ರೂಲ್ಸ್!

    September 16, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.