ಹೊಸದಿಲ್ಲಿ: ಸಾಲದ ಸುಳಿಯಲ್ಲಿ ಸಿಲುಕಿರುವ ಶಿಕ್ಷಣ ತಂತ್ರಜ್ಞಾನ ಸಂಸ್ಥೆ BYJU’S ಒಂದೊಮ್ಮೆ 22 ಬಿಲಿಯನ್ ಡಾಲರ್ ಮೌಲ್ಯ ಹೊಂದಿದ್ದರೆ, ಈಗ ಅದರ ನಿವ್ವಳ ಮೌಲ್ಯ ಶೂನ್ಯವಾಗಿದೆ ಎಂದು ಎಚ್ ಎಸ್ ಬಿಸಿ ನಡೆಸಿದ ಸಂಶೋಧನೆ ತಿಳಿಸಿದೆ.
ಬೈಜೂಸ್ ನಲ್ಲಿ ಹೂಡಿಕೆ ಕಂಪನಿ ಪ್ರೋಸಸ್ ನ ಶೇ.10ರಷ್ಟು ಪಾಲು ಬಂಡವಾಳದ ಮೌಲ್ಯ ಶೂನ್ಯ ಎಂದು ಎಚ್ ಎಸ್ ಬಿಸಿ ಅಧ್ಯಯನ ತಿಳಿಸಿದೆ.
ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಬೈಜೂಸ್ ಹಲವಾರು ಕಾನೂನು ಪ್ರಕರಣಗಳನ್ನು ಎದುರಿಸುತ್ತಿದೆ ಮತ್ತು ತನ್ನ ಉದ್ಯೋಗಿಗಳಿಗೆ ವೇತನ ನೀಡಲು ಹೆಣಗಾಡುತ್ತಿದೆ. ಈ ವರ್ಷದ ಜನವರಿಯಲ್ಲಿ ಅಮೆರಿಕಾದ ಹೂಡಿಕೆ ಸಂಸ್ಥೆ ಬ್ಲ್ಯಾಕ್ ರಾಕ್ ಬೈಜೂಸ್ ನಲ್ಲಿನ ತನ್ನ ಪಾಲನ್ನು 22 ಬಿಲಿಯನ್ ಡಾಲರ್‌ನಿಂದ 1 ಬಿಲಿಯನ್ ಡಾಲರ್ ಗೆ ಕಡಿತಗೊಳಿಸಿತ್ತು.
ಬ್ಲ್ಯಾಕ್ ರಾಕ್ ಸಂಸ್ಥೆ ಬೈಜೂಸ್ ನಲ್ಲಿ ಶೇ.1ಕ್ಕಿಂತಲೂ ಕಡಿಮೆ ಪಾಲು ಹೊಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296