ಗದಗ : ಮುಖ್ಯಮಂತ್ರಿ ಬೊಮ್ಮಾಯಿ ಅವರೇ ನಿಮ್ಮ ಪಾಪದ ಕೊಡ ತುಂಬಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.
ಗದಗನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅಧಿಕಾರಕ್ಕೆ ಬರುವುದು ಲೂಟಿ ಹೊಡೆಯೋದಕ್ಕೆ ಅಲ್ಲ, ಬೊಮ್ಮಾಯಿ ಅವರೇ ನಿಮ್ಮ ಪಾಪದ ಕೊಡ ತುಂಬಿದೆ, ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಒಂದು ವಿಶೇಷ ತನಿಖಾ ಆಯೋಗ ರಚನೆ ಮಾಡಿ ತಕ್ಕ ಪಾಠ ಕಲಿಸುವಂತೆ ಜನರಿಗೆ ಮನವಿ ಮಾಡುತ್ತೇನೆ, ಯಾರು ಲೂಟಿ ಹೊಡೆದಿದ್ದಾರೋ ಅವರಿಗೆ ಶಿಕ್ಷೆ ಕಾದಿದೆ ಎಂದು ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


