ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದೆ. ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಕೂಡಾ ಪ್ರಶ್ನಿಸುತ್ತಿದೆ. ಈ ನಡುವೆ ಮುಖ್ಯಮಂತ್ರಿಯನ್ನು, ಪ್ರಧಾನಮಂತ್ರಿಯನ್ನು ಮತ್ತು ರಾಷ್ಟ್ರಪತಿಯನ್ನು ಬಂಧಿಸಬಹುದಾ ಎನ್ನುವ ಪ್ರಶ್ನೆ ಜನರಲ್ಲಿ ಮೂಡುತ್ತಿದೆ. ಅದಕ್ಕೆ ಸಂಪೂರ್ಣ ಉತ್ತರ ಇಲ್ಲಿದೆ.
ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯನ್ನು ಕೂಡ ಅವರ ಪದವಿಯಲ್ಲಿರುವಾಗಲೇ ಬಂಧಿಸಬಹುದು. ಕಾನೂನಿನ ದೃಷ್ಟಿಯಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸಾಮಾನ್ಯ ವ್ಯಕ್ತಿ. ಅರೆಸ್ಟ್ ಮಾಡುವ ಕ್ರಮವನ್ನು ತಡೆಯಲು ಯಾವುದೇ ನಿಯಮಗಳಿಲ್ಲದ ಕಾರಣ ಅವರ ವಿರುದ್ಧ ಕ್ರಿಮಿನಲ್ ಅಪರಾಧವನ್ನು ದಾಖಲಿಸಿದರೆ ಪ್ರಧಾನಿಯನ್ನು ಕೂಡಾ ಬಂಧಿಸಬಹುದು.
ಆದರೆ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಇದೆ ದೊಡ್ಡ ವಿನಾಯಿತಿ:
ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ (ಗಣರಾಜ್ಯದ ಅಧ್ಯಕ್ಷರು ಮತ್ತು ಗವರ್ನರ್ ಗಳು) ತಮ್ಮ ಅಧಿಕಾರದ ಅವಧಿ ಮುಗಿಯುವವರೆಗೆ, ಅಥವಾ ತಾವು ಅಧಿಕಾರದಲ್ಲಿ ಇರುವ ತನಕ ಅವರಿಬ್ಬರನ್ನು ಯಾರು ಮುಟ್ಟಲು ಸಾಧ್ಯವಿಲ್ಲ. ಅವರ ಮುಗಿಯುವವರೆಗೆ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳಿಂದ ವಿನಾಯಿತಿ ಹೊಂದಿರುತ್ತಾರೆ. ಯಾವುದೇ ಪೊಲೀಸ್ ಆಗಲಿ, ಸಿಬಿಐಯಾಗಲಿ ಅಥವಾ ಯಾವುದೇ ಕೋರ್ಟ್ ಆಗಲಿ ರಾಷ್ಟ್ರಪತಿ ಮತ್ತು ರಾಜ್ಯಪಾಲರನ್ನು ಬಂಧಿಸುವಂತಿಲ್ಲ.
ಭಾರತದ ಸಂವಿಧಾನದ 361 ನೇ ವಿಧಿಯು ಭಾರತದ ರಾಷ್ಟ್ರಪತಿಗಳು ಮತ್ತು ರಾಜ್ಯಗಳ ರಾಜ್ಯಪಾಲರು ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಲು ಯಾವುದೇ ಕಾರ್ಯಕ್ಕಾಗಿ ಯಾವುದೇ ನ್ಯಾಯಾಲಯಕ್ಕೆ ಜವಾಬ್ದಾರರಾಗಿರುವುದಿಲ್ಲ ಎಂದು ಒತ್ತಿ ಹೇಳಿದೆ.
ಸಂವಿಧಾನದ ಅಡಿಯಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ವಿಷಯಗಳಲ್ಲಿ ಬಂಧನದಿಂದ ವಿನಾಯಿತಿಯನ್ನು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮಾತ್ರ ಒದಗಿಸಲಾಗಿದೆ. ಅವರು ಅಧಿಕಾರದಲ್ಲಿರುವಾಗ ಕ್ರಿಮಿನಲ್ ಅಪರಾಧಗಳಲ್ಲಿ ಕೂಡಾ ಅವರನ್ನು ಬಂಧಿಸಲಾಗುವುದಿಲ್ಲ. ಯಾವುದೇ ಕ್ರಮ, ಕ್ರಿಮಿನಲ್ ನಲ್ಲಿಯೂ ಸಹ ಅವರು ಅಧಿಕಾರವನ್ನು ತೊರೆದ ನಂತರವೇ ಪ್ರಾರಂಭಿಸಬಹುದು.
ಸಿಎಂ, ಕ್ಯಾಬಿನೆಟ್ ಸಚಿವರನ್ನು ಬಂಧಿಸಲು ನಿಯಮಗಳು:
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ 1973 (CrPC) ಯ ನಿಬಂಧನೆಗಳ ಪ್ರಕಾರ, ಕಾನೂನು ಜಾರಿ ಸಂಸ್ಥೆಯು ನ್ಯಾಯಾಲಯದಿಂದ ಸಿಬಿಐ ಸಂಬಂಧಿಸಿದಂತೆ, ಬಂಧನ ವಾರಂಟ್ ಹೊರಡಿಸಿದ ಯಾವುದೇ ವ್ಯಕ್ತಿಯನ್ನು ಬಂಧಿಸಬಹುದು.
ಮುಖ್ಯಮಂತ್ರಿಯನ್ನು ಬಂಧಿಸುವ ಸಂದರ್ಭದಲ್ಲಿ, ಕೆಲವು ನಿಯಮಗಳು ಮತ್ತು ಕಾರ್ಯವಿಧಾನದ ಅಂಶಗಳನ್ನು ಅನುಸರಣೆ ಮಾಡಿ ಅವರನ್ನು ಸಿಬಿಐ ಬಂಧಿಸಬಹುದು. ಉದಾಹರಣೆಗೆ ಆರೋಪಿಗಳು ತಲೆಮರೆಸಿಕೊಳ್ಳುತ್ತಾರೆ ಅಥವಾ ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸುತ್ತಾರೆ, ಯಾರು ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ರೀತಿಯಲ್ಲಿ ವರ್ತಿಸುತ್ತಾರೆ, ಎಂದು ಅನ್ನಿಸಿದರೆ ಮತ್ತು ಅದಕ್ಕೆ ಬಲವಾದ ಸಾಕಷ್ಟು ಕಾರಣವಿದ್ದರೆ ಮಾತ್ರ ಅವರನ್ನು ಅರೆಸ್ಟ್ ಮಾಡಬಹುದು.
ಎಂಪಿಗಳನ್ನು ವರ್ಷದ 300 ದಿನ ಯಾರೂ ಬಂಧಿಸುವಂತಿಲ್ಲ:
ಸಂಸತ್ತಿನ ಸದಸ್ಯರನ್ನು ಸಂಸತ್ತು ಅಧಿವೇಶನ ನಡೆಯುವ ದಿನದಿಂದ 40 ದಿನಗಳ ಮೊದಲು, 40 ದಿನಗಳ ನಂತರ ಮತ್ತು ಸಂಸತ್ತಿನ ಅಧಿವೇಶನ ನಡೆಯುವ ಅವಧಿಯಲ್ಲಿ ಬಂಧಿಸಲ್ಪಡುವುದರಿಂದ ರಕ್ಷಣೆಯನ್ನು ಹೊಂದಿರುತ್ತಾರೆ. ಅಂದರೆ ಸಂಸತ್ತಿನ ಅಧಿವೇಶ ನಡೆಯುವಾಗ ಮತ್ತು ಅದರ ಹಿಂದು ಮುಂದಿನ ದಿನಗಳಲ್ಲಿ ಭಾರತದ ಲೋಕಸಭಾ ಸದಸ್ಯರನ್ನು ಬಂಧಿಸುವಂತಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


