ವಿಮಾನದಲ್ಲಿ ಸೀಟಿನ ಮುಂಭಾಗ ಇಟ್ಟಿದ್ದ ನೀರನ್ನು ಕುಡಿದು ಅಸ್ವಸ್ಥರಾದ ಕಾರಣ ಕರ್ನಾಟಕದ ರಣಜಿ ಕ್ಯಾಪ್ಟನ್ ಮಯಾಂಕ್ ಅಗರ್ವಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ನಾಟಕ ರಣಜಿ ತಂಡದೊಂದಿಗೆ ತ್ರಿಪುರಾದ ಅಗರ್ತಲಾದಿಂದ ಸೂರತ್ ಗೆ ವಿಮಾನದಲ್ಲಿ ಅಗರ್ವಾಲ್ ಪ್ರಯಾಣ ಬೆಳೆಸಿದ್ದರು. ವಿಮಾನದಲ್ಲಿ ಕುಳಿತಿದ್ದ ಮಯಾಂಕ್, ಸೀಟಿನ ಮುಂಭಾಗದಲ್ಲಿ ಇಟ್ಟಿದ್ದ ನೀರನ್ನು ಕುಡಿದು ಅಸ್ವಸ್ಥಗೊಂಡಿದ್ದಾರೆ.
ನೀರು ಕುಡಿಯುತ್ತಿದ್ದಂತೆ ಮಯಾಂಕ್ ನಾಲಿಗೆ, ಬಾಯಿಗೆ ಸುಟ್ಟ ಅನುಭವವಾಗಿದೆ. ಪರಿಣಾಮ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅಗರ್ತಲಾದ ಐಎಲ್ ಎಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.
ತ್ರಿಪುರ ವಿರುದ್ಧ ಸೋಮವಾರ ನಡೆದ ರಣಜಿ ಪಂದ್ಯದಲ್ಲಿ ಕರ್ನಾಟಕ ಗೆಲುವು ಸಾಧಿಸಿತ್ತು. ಮುಂದಿನ ಪಂದ್ಯಕ್ಕಾಗಿ ಸೂರತ್ ಗೆ ಪ್ರಯಾಣ ಬೆಳೆಸಲಾಗಿತ್ತು ಎಂದು ವರದಿ ತಿಳಿಸಿದೆ. ಈ ಘಟನೆಯ ಬಳಿಕ ಉಳಿದವರು ಸೂರತ್ ಗೆ ತೆರಳಿದ್ದಾರೆ.


