ಬೆಂಗಳೂರು: 10 ತಿಂಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ 118 ಶಾಲಾ ವಾಹನ ಚಾಲಕರ ವಿರುದ್ಧ ಡ್ರಂಕ್ & ಡ್ರೈವ್ ಪ್ರಕರಣ ದಾಖಲಾಗಿದ್ದು, ಎಲ್ಲಾ ಚಾಲಕರ ವಾಹನ ಚಾಲನೆ ಪರವಾನಗಿ ರದ್ದುಗೊಳಿಸಲಾಗಿದೆ.
ಜನವರಿಯಲ್ಲಿ 16, ಫೆಬ್ರವರಿಯಲ್ಲಿ 7, ಜುಲೈನಲ್ಲಿ 23, ಆಗಸ್ಟ್ನಲ್ಲಿ 26, ಸೆಪ್ಟೆಂಬರ್ ನಲ್ಲಿ 22, ನವೆಂಬರ್ ನಲ್ಲಿ 24 ಪ್ರಕರಣ ದಾಖಲಾಗಿತ್ತು.
ಕಳೆದ 10 ತಿಂಗಳಲ್ಲಿ 20 ಸಾವಿರಕ್ಕಿಂತ ಹೆಚ್ಚು ಶಾಲಾ ವಾಹನಗಳನ್ನು ಪರಿಶೀಲನೆ ನಡೆಸಲಾಗಿದೆ. ಪರಿಶೀಲನೆ ವೇಳೆ ನಿಯಮ ಮೀರಿ ಬಸ್ನಲ್ಲಿ ಹೆಚ್ಚುವರಿ ಶಾಲಾ ಮಕ್ಕಳ ಸಾಗಾಟ ಮಾಡಿದ್ದು ಕೂಡ ತಿಳಿದು ಬಂದಿದೆ. ಈ ಕುರಿತು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಟ್ರ್ಯಾಕ್ಟ್ ಶಾಲಾ ವಾಹನಗಳ ಚಾಲಕರಿಂದಲೇ ಹೆಚ್ಚು ರೂಲ್ಸ್ ಬ್ರೇಕ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಪೊಲೀರು ಆಯಾ ಶಾಲಾ ಆಡಳಿತ ಮಂಡಳಿಗೆ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q