ತುಮಕೂರು: ಕಂಪನಿಯೊಂದರ ಲೆಟರ್ ಹೆಡ್, ಮೊಹರು, ಸಹಿ ನಕಲು ಮಾಡಿ ಸುಳ್ಳು ಅನುಭವ ಪ್ರಮಾಣ ಪತ್ರ ಪಡೆದ ಆರೋಪದ ಮೇರೆಗೆ ಬೆಂಗಳೂರಿನ ಅಶ್ವಿನ್ ಅಶ್ವತ್ಥರಾಮ ಸೇರಿದಂತೆ 6 ಜನರ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಪನಿಯ ಜೊತೆ ಯಾವುದೇ ಸಂಬಂಧವಿಲ್ಲದಿದ್ದರೂ ಸುಳ್ಳು ಉದ್ಯೋಗ, ಅನುಭವ ಪ್ರಮಾಣ ಪತ್ರ ತಯಾರಿಸಿದ್ದಾರೆ. ಕಂಪನಿಯ ಅಧಿಕೃತ ಗುರುತುಗಳನ್ನು ನಕಲು ಮಾಡಿದ್ದಾರೆ. ಬೇರೆ ಕಂಪನಿಯಲ್ಲಿ ಕೆಲಸ ಪಡೆಯುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆಂದು ಸನ್ ಬಯೋ ಫ್ಯೂಯಲ್ ಪ್ರೈ.ಲಿ., ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಭದ್ರಾರಾಧ್ಯ ಎಂಬುವರು ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಬೆಂಗಳೂರಿನ ಅಶ್ವಿನ್ ಅಶ್ವತ್ಥರಾಮ, ಗೋವಿಂದಪ್ಪ, ಶ್ರೀರಾಮ ಚಂದ್ರ, ಜಯಶ್ರೀ ಅಶ್ವತ್ಥರಾಮ, ಟಿ.ಎಸ್. ಜಗದೀಶ್, ಶ್ರೀನಿವಾಸ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸನ್ ಬಯೋ ಫ್ಯೂಯಲ್ ಸಂಸ್ಥೆಯಲ್ಲಿ ಅಶ್ವಿನ್ ಅಶ್ವತ್ಥರಾಮ 1 ವರ್ಷ 6 ತಿಂಗಳು ಕೆಲಸ ಮಾಡಿದ್ದಾಳೆಂಬಂತೆ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಬೇರೆ ಕಂಪನಿಯಲ್ಲಿ ಕೆಲಸ ಪಡೆಯುವ, ಉನ್ನತ ಸ್ಥಾನ ಪಡೆಯುವ ಉದ್ದೇಶದಿಂದ ಇಂತಹ ಕೆಲಸ ಮಾಡಿದ್ದಾರೆನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


