ಸರಗೂರು: ಹೆಡಿಯಾಲ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಮೇಲೆ ಈಗಾಗಲೇ ಜಾತಿನಿಂದನೆ ಪ್ರಕರಣ ದಾಖಲಾಗಿದೆ, ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಯಿಂದ ಅರಣ್ಯ ಸಚಿವರಾದ ಈಶ್ವರ ಬಿ. ಖಂಡ್ರೆ ಅವರಿಗೆ ಎಂದು ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರು, ಡಿಸಿಎಫ್ ಅಧಿಕಾರಿಗಳಿಗೆ ಪರಿಶೀಲನೆ ನಡೆಸಿ ಹೆಡಿಯಾಲ ವಲಯದ ಸಹಾಯಕ ಸಂರಕ್ಷಣಾಧಿಕಾರಿ ಎ ವಿ ಸತೀಶ್ ರವರನ್ನು ಸೂಕ್ತ ಕಾನೂನು ಕ್ರಮ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.
ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಹಚಾರ ಚೆನ್ನಾಗಿ ಇಲ್ಲ ಎಂಬುವುದಕ್ಕೆ ಮತ್ತೊಂದು ತಾಜಾ ಉದಾಹರಣೆ ಮತ್ತೊಬ್ಬ ಅಧಿಕಾರಿ ಮೇಲೆ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಬಂಡೀಪುರ ಅರಣ್ಯ ಇಲಾಖೆಯ 15 ಅಧಿಕಾರಿಗಳು ಮೇಲೆ ಪ್ರಕರಣ ದಾಖಲಾಗಿತ್ತು. ಇದು ಮಾಸುವ ಮುನ್ನ ಎಸಿ.ಎಫ್ ಒಬ್ಬರ ಮೇಲೆ ಎ ಎಫ್ ಆರ್ ದಾಖಲು ಮಾಡಿದರೂ ರಾಜಕೀಯ ನಾಯಕರ ಕೈವಾಡದಿಂದ ಎಸ್ಸಿ ಎಸ್ಟಿ ಜನಾಂಗದವರಿಗೆ ನ್ಯಾಯ ಸಿಕ್ಕುತ್ತಿಲ್ಲ ಎನ್ನುವ ಆಕ್ರೋಶ ಕೇಳಿಬಂದಿದೆ
ಎಸಿಎಫ್ ಸತೀಶ್ ರವರನ್ನು ವರ್ಗಾವಣೆ ಮಾಡಿ ನ್ಯಾಯ ಸಿಕ್ಕುವ ನಿಟ್ಟಿನಲ್ಲಿ ಕೆಲಸ ಮಾಡುವ ಬದಲು ರಾಜಕೀಯ ನಾಯಕರು ಸೇರಿದಂತೆ ಮುಖಂಡರು ಒತ್ತಡ ತಂದು ಅರಣ್ಯ ಇಲಾಖೆಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡುವ ಅಧಿಕಾರಿಗಳ ಮೇಲೆ ವರ್ಗಾವಣೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪೀಯ ಹೆಡಿಯಾಲ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್, ಎ.ವಿ ಅವರ ಮೇಲೆ ಅರಣ್ಯ ಇಲಾಖೆ ಹಾಗೂ ಸಿಬ್ಬಂದಿಯೊಬ್ಬರು ಸರಗೂರು ಪೋಲಿಸ್ ಠಾಣೆಯಲ್ಲಿ ಜಾತಿನಿಂದನೆ ಮಾಡಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಸರಗೂರು ಪೋಲಿಸ್ ಠಾಣೆಯಲ್ಲಿ 0117 /2025 ಬಿ ಎನ್ ಎಸ್.352,351(2) ಎಸ್ಸಿ ಎಸ್ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ
ಪ್ರಕರಣ ಹಿನ್ನೆಲೆ :
ಹೆಡಿಯಾಲ ಉಪವಿಭಾಗದ ಐನೂರು ಮಾರಿಗುಡಿ ವಲಯದಲ್ಲಿಅರಣ್ಯ ವೀಕ್ಷಕರಾಗಿ (ಹೊರಗುತ್ತಿಗೆ) ನೌಕರರಾಗಿ ಕೆಲಸ ಮಾಡುತ್ತಿದ್ದು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿ.ವಿ.ಸತೀಶ್ ರವರು ದಿನಾಂಕ 30/08/20255 ಅರಣ್ಯ ಪ್ರದೇಶದಲ್ಲಿ ಕೆಸರಿನಿಂದ ಕೂಡಿದೆ ಟೈಗರ್ ರಸ್ತೆಯಲಿ ಇಲಾಖಾ ವಾಹನಗಳು ಓಡಾಡಲು ಅನೂಕೂಲವಾಗುವಂತೆ ಆ ಜಾಗಕ್ಕೆ ಕಲ್ಲಾಗಿರುವ ಸಿಮೆಂಟ್ ಮೂಟೆಗಳನ್ನು ಹಾಕಲು ತಿಳಿಸಿರುತ್ತಾರೆ. ಅದರಂತೆ ನಾನು ಮತ್ತು ನಮ್ಮ ಇಲಾಖಾ ಸಿಬ್ಬಂದಿಗಳ ಜೊತೆಗೂಡಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಸಮಯ ಮಧ್ಯಾಹ್ನ 12.30 ಕ್ಕೆ ಎ.ಸಿ.ಎಫ್ ಎ ವಿ ಸತೀಶ್ ರವರು ಅಲ್ಲಿಗೆ ಬಂದರು ಅಲ್ಲಿಯ ಕೆಲಸವನ್ನು ನೋಡಿ ಇನ್ನೂ ಹೆಚ್ಚಿನ ಸಿಬ್ಬಂದಿಯು ಬೇಕಾಗಿರುವುದರಿಂದ ಹೊರಗುತ್ತಿಗೆದಾರರಾದ ಅರಣ್ಯ ಪರಿವೀಕ್ಷಕರಾದ ಗಣೇಶ್ ಬಿನ್ ಹೆತ್ತಯ್ಯ ರವರಿಗೆ ತಿಳಿಸಿದಾಗ ಸಿಬ್ಬಂದಿಗಳನ್ನು ಕರೆತರಲು ವಾಹನವಿಲ್ಲವೆಂದು ತಿಳಿಸಿದಾಗ ಶ್ರೀಕಂಠ, ಗಣೇಶ, ಕಿರುಮಾರ ಲೋಪರ್, ನನ್ನ ಮಕ್ಕಳ ಬೋಳಿ ಮಕ್ಕಳ, ಸೂಳೆ ಮಕ್ಕಳ, ಶ್ಯಾ* ತರಿಯಕ್ಕೆ ಲಾಯಕ್ಕು ನಿಮಗೆ ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಬರುವುದಿಲ್ಲ ನೀವು ನನ್ನ ಉಚ್ಚೆ ಕುಡಿಯಕ್ಕೆ ಲಾಯಕ್ಕು. ಬನ್ನಿ ನೀವು ನೀವು ಈ ಕೊಚ್ಚೆ ತೊಳೆಯೋಕೆ ಲಾಯಕ್ಕು ಎಂದು ಅವಾಚ್ಯ ಪದಗಳಿಂದ ಕೀಳು ಜಾತಿಯವರೆದೆಂದು ಮಾನಸಿಕವಾಗಿ ಕಿರುಕುಳ ನಮಗೆ ಹಿಂಸೆಯನ್ನು ನೀಡುತ್ತಿದ್ದಾರೆ. ನಮ್ಮ ಜೊತೆ ಸಿಬ್ಬಂದಿಗಳಾದ ಡ್ರೈವರ್ ಸೇಟು, ಆರ್.ಎಫ್ ರಾಮಾಂಜನೇಯ, ಲಕ್ಷ್ಮಣ ಇರುತ್ತಾರೆ.
ಮುಂದುವರೆದೂ 13/09/2025 ರಾತ್ರಿ 7.30ಕ್ಕೆ ಕಲ್ಕರೆ ಐಬಿಗೆ ಅವರ ಸ್ನೇಹಿತರನ್ನು ಕರೆದುಕೊಂಡು ಬಂದು ಮದ್ಯಪಾನ ಸಿಗರೇಟ್ ಸರಬರಾಜು ಮಾಡುವಂತೆ ತಿಳಿಸಿದರು. ಆಗ ಸರ್ ನಾನು ಅರಣ್ಯ ಕಾಯಲು ಬಂದಿರುವುದು. ನಾನು ಇವುಗಳನ್ನು ತರಲು ಬರುವುದಿಲ್ಲ ಎಂದು ಹೇಳಿದಾಗ ಸೂಳೆ ಮಗನೇ ಎಂದು ನನ್ನನ್ನು ಮತ್ತೆ ಅವರ ಸ್ನೇಹಿತರ ಮುಂದೆ ಕೆಟ್ಟದಾಗಿ ಬೈದು ಮಾನಸಿಕ ಚಿತ್ರಹಿಂಸೆ ಮತ್ತು ಕಿರುಕುಳ ನೀಡಿರುತ್ತಾರೆ. ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿಗಳಾದ ರಾಜೇಶ್ ಎಸ್.ಡಿ ಸ್ಥಳದಲ್ಲಿ ಇರುತ್ತಾರೆ. ಆಗ ನಾನು ಹೊರಗಡೆ ಬಂದ ಸಂದರ್ಭದಲ್ಲಿ ನನ್ನ ಹಿಂದೆಯೇ ಬಂದು ಈ ಕೆಲಸವನ್ನು ನೀನು ಮಾಡದೇ ಇದ್ದರೆ ಕೆಲಸದಿಂದ ಕಿತ್ತು ಹಾಕುತ್ತೇನೆ ಹೆಚ್ಚಿಗೆ ಮಾತನಾಡಿದರೆ ಕಾಡಿನಲ್ಲಿಯೇ ನಿನ್ನನ್ನು ಹೊಡೆದು ಯಾರಿಗೂ ಗೊತ್ತಾಗಬಾರದ ರೀತಿ ಹೂತು ಹಾಕಿಸುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆ. ನಂತರ ಮುಂಜಾನೆ ವೇಳೆಯಲ್ಲಿ ಅವರ ಸ್ನೇಹಿತರಿಗೆ ಬಿಸಿ ನೀರು ಕಾಯಿಸಲು ತಡವಾದಾಗ ಕೆಟ್ಟ ಮಾತುಗಳಿಂದ ಬೈದು ನೀವೆಲ್ಲಾ ನನ್ನ ಮೇಲ್ಜಾತಿಯವರ ಬೂಟು ನೆಕ್ಕುವುದಕ್ಕೆ ಲಾಯಕ್ಕು ಎಂದು ದರ್ಪ ತೋರಿರುತ್ತಾರೆ.
ಈ ಹಿಂದೆ ಕೂಡ ಹಲವಾರು ಬಾರಿ ಯಾವುದೇ ಸಕಾರಣವಿಲ್ಲದೇ ವಿನಾಕಾರಣ ಅವಾಚ್ಯ ಪದಗಳ ಪ್ರಯೋಗ ಮಾಡಿ ನಮ್ಮನ್ನು ನಿಂದಿಸಿರುತ್ತಾರೆ. ಸದರಿಯವರ ಈ ವರ್ತನೆಯಿಂದ ಮಾನಸಿಕ ಕಿರುಕುಳ ಮತ್ತು ಆತ್ಮಸ್ಥೆರ್ಯ ಕುಗ್ಗಿರುತ್ತದೆ. ನಾವೆಲ್ಲರು ಎಸ್ಸಿ, ಎಸ್ಟಿ, ದಲಿತ ಜನಾಂಗದವರಾಗಿದ್ದು ವೈಯಕ್ತಿಕವಾಗಿ ಹಾಗೂ ದಲಿತ ಸಮುದಾಯಕ್ಕೆ ಮಾಡಿದ ಅಪಮಾನವಾಗಿದ್ದು, ಬಹಳ ಮಾನಸಿಕ ಹಿಂಸೆಯಾಗಿ ನೊಂದಿರುವ ಕಾರಣ ಸಹಾಯಕ ಅರಣ್ಯ ಸುರಕ್ಷಣಾಧಿಕಾರಿಯಾದ ಎ.ವಿ ಸತೀಶ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಾಗೂ ವಲಯದಿಂದ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಎಸಿಎಫ್ ಸತೀಶ್ ರವರು ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿಲ್ಲ ಎಂದ ಮೇಲೆ ಎಸ್ಸಿ ಎಸ್ಟಿ ಸಮುದಾಯದ ಹಾಗೂ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳು ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗುಂಡ್ಲುಪೇಟೆ ತಾಲ್ಲೂಕಿನ ರಾಘವಪುರ ಗ್ರಾಮದ ಶ್ರೀಕಂತ. ಸರಗೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿಸಿಕೊಂಡು ಮುಂದಿನ ಕ್ರಮಕ್ಕೆ ಡಿವೈಎಸ್ಪಿ ಹಾಗೂ ಎಸ್ಪಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC