ತುಮಕೂರು: ಜಾತಿ ಗಣತಿ ವರದಿ ಅಗತ್ಯವಿರುವಂತಹುದು. ಜವಾಬ್ದಾರಿಯುತ ಸರಕಾರ ಬಂದಾಗ, ಬಡತನ ರೇಖೆಗಿಂತ ಕೆಳಗೆ ಇರುವ ಸಮುದಾಯಗಳನ್ನು ಮೇಲಕ್ಕೆ ಎತ್ತಲು ಸಹಕಾರಿ ಆಗಲಿದೆ. ನೂರಾರು ವಷಗಳಿಂದ ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಅವಕಾಶ ವಂಚಿತರಾಗಿರುತ್ತಾರೆ ಅವರ ಅಭಿವೃದ್ಧಿಗೆ ಇಂತಹ ಜಾತಿ ಗಣತಿ ವರದಿಗಳು ಸಹಾಯ ಆಗಲಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಆರ್.ಹುಲಿನಾಯ್ಕರ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿರುವ ಅವರು, 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಜಾತಿ ಗಣತಿ ವರದಿ ತಯಾರಿಸಲು ಕಾಂತರಾಜ್ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಲಾಗಿತ್ತು. ಕಾಂತರಾಜ್ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಎಲ್ಲಾ ಜಿಲ್ಲೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ತಯಾರಿಸಲಾಗಿತ್ತು. ಬಿಜೆಪಿ ಸರಕಾರ ಬಂದ ನಂತರ ಜಯಪ್ರಕಾಶ್ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ನಂತರ ಜಾತಿ ಗಣತಿ ವರದಿ ತಯಾರಿಸಲು ಮತ್ತೊಮ್ಮೆ ಕೆಲಸ ಮಾಡಿದರು. ಸರಕಾರ ಕೂಡ ಅದನ್ನು ಪರಿಗಣಿಸಿತು. ಅವೈಜ್ಞಾನಿಕ ಎಂದು ತಿಳಿಸುತ್ತಿದ್ದಾರೆ ಸರಿಯಲ್ಲ , ನಾವು ಜಾತಿ ಗಣತಿಯನ್ನು ಒಪ್ಪಬೇಕಿದೆ ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW