ಕೊರಟಗೆರೆ: ಏಪ್ರಿಲ್ 1 ರಿಂದ ಆರಂಭವಾಗಿರುವ ಸ್ವಯಂ ಗಣತಿ ಕಾರ್ಯದಲ್ಲಿ ಸಾರ್ವಜನಿಕರು ಮೂಲಕ ಅಭಿವೃದಿಗೆ ಭಾಗವಹಿಸುವ ಕೈ ಜೋಡಿಸಬೇಕೆಂದು ತಹಶೀಲಾರ್ ಕೆ.ಮಂಜುನಾಥ್ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಅವರು ತಾಲ್ಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಮೊಬೈಲ್ ಮೂಲಕ ಸಾರ್ವಜನಿಕರು ಸ್ವಯಂ ಗಣತಿ ಮಾಡುವುದು ಹೇಗೆ ಎಂಬುದನ್ನು ಖುದ್ದು ತಿಳಿಸಿದ ಅವರು, ಪ್ರತಿ ಹತ್ತು ವರ್ಷಗಳಿಗೊಮ್ಮೆ ಭಾರತ ಸರ್ಕಾರ ಜನಗಣತಿ ಮಾಡುತ್ತಿದೆ. ಅದರಂತೆ ಈಗ 2027 ರ ಜನ ಗಣತಿ ಏಪ್ರಿಲ್ 1 ರಿಂದ ಪ್ರಾರಂಭವಾಗಿ ಏಪ್ರಿಲ್ 15 ರವರೆಗೆ ಸ್ವಯಂ ಗಣತಿ ನಂತರ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಮಾಡಲಿದ್ದಾರೆ ಎಂದರು.
ಕೊರಟಗೆರೆ ತಾಲ್ಲೂಕಿನ 388 ಗ್ರಣಗಳಿದ್ದು, ಗಣತಿ ಕಾರ್ಯಕ್ಕೆ 54 ಸಿಬ್ಬಂದಿಯನ್ನು ಮತ್ತು 8 ಅಧಿಕಾರಿಗಳನ್ನು ಹಾಗೂ ಪುರಸಭಾ ವ್ಯಾಪ್ತಿಯಲ್ಲಿ 23 ವಾರ್ಡ್ ಗಳಿದ್ದು, ಗಣತಿ ಕಾರ್ಯಕ್ಕೆ 10 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. 2011ರ ಗಣತಿಯನ್ನು ತಾಳೆ ನೋಡಿಕೊಂಡು ಗಣತಿಕಾರ್ಯ ಮಾಡಲಾಗುವುದು. ಈ ಗಣತಿ ಕಾರ್ಯದಲ್ಲಿ ಒಂದು ಕುಟುಂಬಕ್ಕೆ 34 ಪ್ರಶ್ನೆಗಳನ್ನು ಒಳಗೊಂಡಿದ್ದು ಅವುಗಳಿಗೆ ಮಾಹಿತಿ ನೀಡಬೇಕಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ನಕಲಿ ಐ.ಡಿ.ಗಳ ಬಗ್ಗೆ ಎಚ್ಚರ ವಹಿಸಿ:
ಸಾರ್ವಜನಿಕರು ಸರ್ಕಾರದ ಅಧಿಕೃತ ಜಾಲತಾಣದ (ವೆಬ್ ಸೈಟ್) ಮೂಲಕ ಮಾತ್ರ ತಮಗೆ ಬರುವ ಓ.ಟಿ.ಪಿ. ತಿಳಿಸಬೇಕಿದೆ. ಸಾಮಾಜಿಕ ಜಾಲ ತಾಣಗಳಿಂದ ಬರುವ ಯಾವುದೇ OTP ಗಳಿಗೆ ಯಾವುದೇ ಮಾಹಿತಿ ನೀಡಬಾರದೆಂದು ತಹಶೀಲ್ದಾರ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕೊರಟಗೆರೆ ಪುರಸಭಾ ಮುಖ್ಯಾಧಿಕಾರಿ ಉಮೇಶ್, ಕಂದಾಯ ಇಲಾಖಾ ಅಧಿಕಾರಿ ವೆಂಕಟೇಶಮೂರ್ತಿ, ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಕಾಂತರಾಜು, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ದೇಶದ ಅಭಿವೃದ್ಧಿ ದೃಷ್ಟಿಯಿಂದ ಗಣತಿ ಕಾರ್ಯ ಪ್ರಮುಖ ಪಾತ್ರವಾಗಿದೆ. ಜನಸಂಖ್ಯೆ ಮಾಹಿತಿ ಪಡೆದು ಅದಕ್ಕೆ ಅನುಗುಣವಾಗಿ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನುಸಾರ ನೀತಿಗಳನ್ನು ರೂಪಿಸಲು ಗಣತಿ ಅಂಕಿ ಸಂಖ್ಯೆಗಳು ಮುಖ್ಯವಾಗಿವೆ. ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಎಲ್ಲಾ ಜನರು ಜನ ಗಣತಿಯಲ್ಲಿ ಪಾಲ್ಗೊಳ್ಳಬೇಕು. ಪ್ರಸ್ತುತ ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ಗಣತಿ ನಡೆಯುತ್ತಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ವಿವರಗಳನ್ನು ದಾಖಲಿಸಬೇಕು.
— ಕೆ.ಮಂಜುನಾಥ್, ತಹಶೀಲ್ದಾರ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


