ವಿವಾದಿತ ಮಹಾದೇವ್ ಬೆಟ್ಟಿಂಗ್ ಆಪ್ ಅನ್ನು ಕೇಂದ್ರ ಐಟಿ ಸಚಿವಾಲಯ ನಿಷೇಧಿಸಿದೆ. ಇಡಿ ಮನವಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಐಟಿ ಸಚಿವಾಲಯ ಮಾಹಿತಿ ನೀಡಿದೆ. ಇಡಿ ತನಿಖೆಯಲ್ಲಿ ಆ್ಯಪ್ ನ ಅಕ್ರಮ ಕಾರ್ಯಾಚರಣೆ ಪತ್ತೆಯಾಗಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹದೇವ್ ಆ್ಯಪ್ ಮಾಲೀಕರ ವಿರುದ್ಧ ಇಡಿ ತನಿಖೆ ಪ್ರಗತಿಯಲ್ಲಿದೆ.
ಛತ್ತೀಸ್ ಗಢ ಚುನಾವಣೆಯಲ್ಲಿ ಭಾರೀ ಸಂಚಲನ ಮೂಡಿಸಿದ ವಿಷಯಗಳಲ್ಲಿ ಮಹದೇವ ಬೆಟ್ಟಿಂಗ್ ಆಪ್ ಪ್ರಕರಣವೂ ಒಂದು. ಆ್ಯಪ್ ಪ್ರವರ್ತಕರು ಮುಖ್ಯಮಂತ್ರಿ ಭೂಪೇಶ್ ಬಾಗಲ್ ಅವರಿಗೆ 508 ಕೋಟಿ ರೂಪಾಯಿ ಪಾವತಿಸಿದ್ದಾರೆ ಎಂದು ಇಡಿ ಹೇಳಿಕೊಂಡಿದೆ. ಮಹದೇವ್ ಸೇರಿದಂತೆ 22 ಆಪ್‌ಗಳನ್ನು ಕೇಂದ್ರ ನಿಷೇಧಿಸಿದೆ.
ಇಂತಹ ಪ್ಲಾಟ್ ಫಾರ್ಮ್ ಗಳನ್ನು ನಿರ್ಬಂಧಿಸುವಂತೆ ನಿರ್ದೇಶಿಸುವ ಎಲ್ಲಾ ಅಧಿಕಾರವನ್ನು ಹೊಂದಿದ್ದರೂ ಛತ್ತೀಸ್ ಗಢ ಸರ್ಕಾರವು ಆ್ಯಪ್ ಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ. reddiannaprestopro ಸೇರಿದಂತೆ 22 ಅಪ್ಲಿಕೇಶನ್ ಗಳನ್ನು ಪ್ರಸ್ತುತ ನಿಷೇಧಿಸಲಾಗಿದೆ.


