nammatumakuru

    Subscribe to Updates

    Get the latest creative news from FooBar about art, design and business.

    What's Hot

    ಒಳ ಮೀಸಲಾತಿ ವಿಚಾರದಲ್ಲಿ ಸಣ್ಣ ವ್ಯತ್ಯಾಸಕ್ಕೆ ಜಗಳ ಅನಾವಶ್ಯಕ: ಡಿ.ಕೆ.ಶಿವಕುಮಾರ್

    April 15, 2026

    ‘ಮಾನವೀಯತೆ ಇಲ್ಲದ ಶಿಕ್ಷಣ ಕೇವಲ ಬದುಕುವ ದಾರಿ ಮಾತ್ರ’: ಸಿಎಂ ಸಿದ್ದರಾಮಯ್ಯ

    April 15, 2026

    ಜಾತಿ ವ್ಯವಸ್ಥೆ ತೊಲಗಿದರಷ್ಟೇ ಹಿಂದೂ ಧರ್ಮ ಉಳಿಯಲು ಸಾಧ್ಯ: ಸಚಿವ ಡಾ.ಜಿ.ಪರಮೇಶ್ವರ್

    April 15, 2026
    Facebook Twitter Instagram
    ಟ್ರೆಂಡಿಂಗ್
    • ಒಳ ಮೀಸಲಾತಿ ವಿಚಾರದಲ್ಲಿ ಸಣ್ಣ ವ್ಯತ್ಯಾಸಕ್ಕೆ ಜಗಳ ಅನಾವಶ್ಯಕ: ಡಿ.ಕೆ.ಶಿವಕುಮಾರ್
    • ‘ಮಾನವೀಯತೆ ಇಲ್ಲದ ಶಿಕ್ಷಣ ಕೇವಲ ಬದುಕುವ ದಾರಿ ಮಾತ್ರ’: ಸಿಎಂ ಸಿದ್ದರಾಮಯ್ಯ
    • ಜಾತಿ ವ್ಯವಸ್ಥೆ ತೊಲಗಿದರಷ್ಟೇ ಹಿಂದೂ ಧರ್ಮ ಉಳಿಯಲು ಸಾಧ್ಯ: ಸಚಿವ ಡಾ.ಜಿ.ಪರಮೇಶ್ವರ್
    • ಡಾ.ಅಂಬೇಡ್ಕರ್ ಸಂವಿಧಾನ ದೇಶದ ಸಮಾನತೆ ಮತ್ತು ನ್ಯಾಯ ವ್ಯವಸ್ಥೆಗೆ ಬಲವಾದ ಅಡಿಪಾಯ: ಸಚಿವ ಸಂತೋಷ ಎಸ್.ಲಾಡ್
    • ಕೃಷಿ ಪ್ರಾಯೋಗಿಕ ಪರೀಕ್ಷೆ: ರೈತರ ಮಕ್ಕಳಿಗೆ ತುಮಕೂರಿನಲ್ಲಿ ಏಪ್ರಿಲ್ 19ರಂದು ಉಚಿತ ತರಬೇತಿ ಕಾರ್ಯಾಗಾರ
    • ತುಮಕೂರು: ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಜಯಂತಿ ಪ್ರಯುಕ್ತ ಅಮಾನಿಕೆರೆಯಲ್ಲಿ ಕಣ್ಮನ ಸೆಳೆದ ಭವ್ಯ ‘ಬೋಟ್ ಪರೇಡ್’
    • ಪರಿಶಿಷ್ಟರಿಗೆ ಬುದ್ಧ ಬಸವ ಅಂಬೇಡ್ಕರ್ ನಿವೇಶನ ಹಂಚಿಕೆ: ಖಾಸಗಿ ಮಾದರಿಯಲ್ಲಿ ಬಡಾವಣೆ ನಿರ್ಮಾಣ ಯೋಜನೆ: ಸಚಿವ ಸತೀಶ್ ಜಾರಕಿಹೊಳಿ
    • ಬಳ್ಳಾರಿಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಗ್ರಂಥಾಲಯ ನಿರ್ಮಿಸಲು ನಿರ್ಧಾರ: ಶಾಸಕ ನಾರಾ ಭರತ್ ರೆಡ್ಡಿ ಹೇಳಿಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತುರುವೇಕೆರೆ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಗೆ ವೈದ್ಯಾಧಿಕಾರಿ ಉತ್ತರಿಸಬೇಕಾಗಿದೆ: ಕುಣಿಕೇನಹಳ್ಳಿ ಜಗದೀಶ್ ಆಗ್ರಹ
    ತುರುವೇಕೆರೆ June 16, 2023

    ತುರುವೇಕೆರೆ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಗೆ ವೈದ್ಯಾಧಿಕಾರಿ ಉತ್ತರಿಸಬೇಕಾಗಿದೆ: ಕುಣಿಕೇನಹಳ್ಳಿ ಜಗದೀಶ್ ಆಗ್ರಹ

    By adminJune 16, 2023No Comments2 Mins Read
    chalavadi

    ತುರುವೇಕೆರೆ: ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳಿಂದ ಸಾರ್ವಜನಿಕರಿಗೆ ಹಾಗೂ ರೋಗಿಗಳಿಗೆ ತುಂಬಾ ತೊಂದರೆ ಆಗುತ್ತಿದ್ದು , ಇದಕ್ಕೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಉತ್ತರಿಸಬೇಕಾಗಿದೆ ಎಂದು ತಾಲ್ಲೂಕು ಛಲವಾದಿ ಮಹಾಸಭಾ ಮುಖಂಡ ಕುಣಿಕೇನಹಳ್ಳಿ ಜಗದೀಶ್ ಆಗ್ರಹಿಸಿದರು.

    ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,   ಸರ್ಕಾರಿ  ಸಾರ್ವಜನಿಕ  ಆಸ್ಪತ್ರೆಯಲ್ಲಿನ  ಅವ್ಯವಸ್ಥೆ ಮತ್ತು ನಿರ್ಲಕ್ಷ  ಹಾಗೂ ಅವ್ಯವಹಾರಗಳ ಬಗ್ಗೆ   ಬೆಳಕು ಚಲ್ಲುವ ಪ್ರಕರಣಗಳು ನಡೆಯುತ್ತಿದ್ದು, ಸರ್ಕಾರಿ ಆಸ್ಪತ್ರೆ ಇರುವುದು ಬಡವರಿಗೆ ಅನುಕೂಲವಾಗಲೆಂದು, ಆದರೆ ಇಲ್ಲಿ ನಿರ್ಲಕ್ಷ್ಯ ಮತ್ತು ಅವ್ಯವಹಾರ ಬಗ್ಗೆ  ದಲಿತರು ದ್ವನಿ ಎತ್ತಲೇ ಬೇಕಾಗಿದೆ ಎಂದು ಕರೆ ನೀಡಿದರು.


    Provided by
    Provided by

    ಕಾರಣ ಆಸ್ಪತ್ರೆಯಲ್ಲಿ ವೈದ್ಯರಾಗಿರುವ  ಡಾ.ಮುರುಳಿಯವರ ಮೇಲಿನ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೇಲಿನದು ಆರೋಪವಾ ಅಥವಾ ಷಡ್ಯಂತ್ರವ ಎನ್ನುವ ಬಗ್ಗೆ ನಾವು ವಿಚಾರ ಮಾಡಬೇಕಾಗಿದೆ. ಕೇವಲ ಇವರನ್ನು ಈ ವಿಚಾರದಲ್ಲಿ ಸಿಕ್ಕಿಸಿ ಅವರನ್ನು ತೇಜೋವಧೆ ಮಾಡಬೇಕೆನ್ನುವುದು, ಷಡ್ಯಂತ್ರ ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ , ಇಲ್ಲಿ ಧ್ವನಿ ಎತ್ತುತ್ತಿರುವುದು ಕೇವಲ ಛಲವಾದಿ ಮಹಾಸಭಾ ಮಾತ್ರ. ನಮ್ಮ ವಿನಂತಿ ಏನೆಂದರೆ ಈ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ವೈದ್ಯರುಗಳು ಖಾಸಗಿ ಆಸ್ಪತ್ರೆಯನ್ನು ನಡೆಸುತಿದ್ದು, ಎಲ್ಲ ವೈದ್ಯರುಗಳು ಅಕ್ರಮ ನಡೆಸುತ್ತಿದ್ದಾರೆ. ಇದಕ್ಕೆ ನಮ್ಮ ಬಳಿ ಆಧಾರಗಳಿವೆ ಎಂದು  ಆರೋಪಿಸಿದರು.

    ಇನ್ನು ಆಸ್ಪತ್ರೆಯಲ್ಲಿನ ಹಗರಣಗಳನ್ನು ಪ್ರಸ್ತಾಪಿಸಿ,  5 ರೂ. ನೋಂದಣಿ ಶುಲ್ಕವನ್ನು ತೆಗೆದುಕೊಳ್ಳುತ್ತಾರೆ. ಆದರೆ ಅದರ ಖರ್ಚು ವೆಚ್ಚವನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಬಹಿರಂಗಪಡಿಸುತ್ತಿಲ್ಲ. ಬಾಣಂತಿಯರಿಗೆ ಉಚಿತ  ಊಟವನ್ನು ಸರ್ಕಾರ ಕೊಡುತ್ತಿದೆ. ಆದರೆ, ಇಲ್ಲಿ ಕೊಡುತ್ತಿಲ್ಲ. ಇದರ  ಬಗ್ಗೆ ಸ್ಪಷ್ಟನೆಯನ್ನು ಅವರು ಕೊಡಬೇಕಾಗುತ್ತದೆ ಹಾಗೂ ಹೊಣೆಯನ್ನು ಹೊರಬೇಕಾಗುತ್ತದೆ. ಇದಕ್ಕೆ ಸರ್ಕಾರದಿಂದ ಅನುದಾನ ಬರುತ್ತಿದ್ದು, ಅದೂ ಕೂಡಾ ಹಗರಣವಾಗಿದೆ ಮತ್ತೆ ರಕ್ತ ಪರೀಕ್ಷೆಗಳನ್ನು  ಆಸ್ಪತ್ರೆಯಲ್ಲಿ ಸೌಲಭ್ಯವಿದ್ದರೂ ಸಹ ಸರ್ಕಾರ ಲಕ್ಷಾಂತರ ರೂ.ಗಳ ಯಂತ್ರೋಪಕರಣಗಳನ್ನು ಒದಗಿಸಿದ್ದರೂ ಸಹ  ಖಾಸಗಿಯವರ ಜೊತೆ ಕೈಜೋಡಿಸಿ  ಪರೀಕ್ಷೆಗಳನ್ನು ಹೊರಗೆ ಮಾಡಿಸಲು ಹೇಳುತ್ತಿರುವುದು ಇವರ ಅಕ್ರಮಗಳಿಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

    ಪರೀಕ್ಷೆ ಮಾಡಲು ಪ್ರಯೋಗ ಶಾಲೆಗೆ ಕಚ್ಚಾ ವಸ್ತುಗಳನ್ನು ಖರೀದಿ ಮಾಡದೆ ಅಕ್ರಮವೆಸಗಿದ್ದಾರೆ. ಇದರಲ್ಲಿ ಆಡಳಿತ ವೈದ್ಯಾಧಿಕಾರಿಗಳ ನೇರ ಕೈವಾಡವಿದೆ. ಅಲ್ಲದೇ ಆಕ್ಸಿಜನ್ ಪ್ಲಾಂಟ್ ಸೂಕ್ತ  ನಿರ್ವಹಣೆ ಇಲ್ಲದೆ ಹಾಳಾಗಿದ್ದು, ಇದರ ಹೊಣೆಯನ್ನು ಆಡಳಿತ ವೈದ್ಯಾಧಿಕಾರಿಗಳೆ ಹೊರಬೇಕಾಗಿದೆ ಎಂದು ಹೇಳಿ, ಇವೆಲ್ಲ ಅಕ್ರಮಗಳ ರೂವಾರಿ ಇವರೇ ಆಗಿರುವುದರಿಂದ ಇವರನ್ನು ಲೋಕಾಯುಕ್ತ ಅಥವಾ ಸಿಬಿಐನಿಂದ  ಸೂಕ್ತ ತನಿಖೆಮಾಡಬೇಕೆಂದು  ಛಲವಾದಿ ಮಹಾಸಭಾ ಆಗ್ರಹಪಡಿಸುತ್ತದೆ ಎಂದರು.

    ದಲಿತ ವೈದ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ನಿಲ್ಲಿಸಬೇಕು, ಇಲ್ಲವಾದಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದ ಅವರು, ಇಂತಹ ಘಟನೆಗಳನ್ನು ನೋಡಿದಾಗ ಆಡಳಿತ ವೈದ್ಯಾಧಿಕಾರಿಗೆ ಆಸ್ಪತ್ರೆಯ ಮೇಲೆ ಹಿಡಿತ ವಿಲ್ಲದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆಸ್ಪತ್ರೆಯಲ್ಲಿ ವೈದ್ಯರುಗಳ ಕೊರತೆ ಎದ್ದು ಕಾಣುತಿದ್ದು, ಮುಖ್ಯವಾಗಿ  ಕಣ್ಣಿನ ವೈದ್ಯರು ಲಭ್ಯವಿಲ್ಲ ಇವರು ಕೆಲಸಕ್ಕೆ ಹಾಜರಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಶಂಕಿಸಿದರು.

    ಡಾ.ಮುರುಳಿಯವರನ್ನು ಇಲಾಖಾ ತನಿಖೆಯನ್ನು ನಡೆಸಿ ಅವರನ್ನು ತಪ್ಪಿತಸ್ಥರನ್ನಾಗಿಸುವುದು ಇವರ ಹುನ್ನಾರವಾಗಿದೆ, ಇದನ್ನು ತಾಲ್ಲೂಕು ಛಲವಾದಿ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ ಹಾಗೂ ಅವರಿಗೆ ಅನ್ಯಾಯವಾದಲ್ಲಿ ತೀವ್ರವಾದ ಹೋರಾಟಕ್ಕೂ ಸಿದ್ಧವಿದೆ ಎಂದರು.

    ಈ ಸಂದರ್ಭದಲ್ಲಿ  ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ  ಡೊಂಕಿಹಳ್ಳಿ ರಾಮಣ್ಣ, ಪುರ ರಾಮಚಂದ್ರ , ಹೆಗ್ಗೆರೆ ನರಸಿಂಹಯ್ಯ,ಮಹದೇವಣ್ಣ. ಲೋಕೇಶ್ ಕುಣಿಕೇನಹಳ್ಳಿ. ಶ್ರೀನಿವಾಸ್ ,ಸುರೇಶ ಕುಣಿಕೇನಹಳ್ಳಿ . ಕೃಷ್ಣಮೂರ್ತಿ. ಪುಟ್ಟರಾಜು, ಪ್ರಸನ್ನ ಕಲ್ಲಬೊರನಹಳ್ಳಿ ತಿಮ್ಮಣ್ಣ ,ಬಾಳೆಕಾಯಿ ಶೇಕರ್, ಶ್ರೀನಿವಾಸ್ ಲೋಕೇಶ್, ಕುಣಕೇನಹಳ್ಳಿ ಲೋಕೇಶ್ ಮತ್ತಿತರರಿದ್ದರು.

    ವರದಿ: ಸುರೇಶ್ ಬಾಬು ಎಂ. ತುರುವೇಕೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h

    ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ಒಳ ಮೀಸಲಾತಿ ಜಾರಿ ಮಾಡದ ಸರ್ಕಾರಕ್ಕೆ ಅಂಬೇಡ್ಕರ್, ಜಗಜೀವನ್ ರಾಂ ಜಯಂತಿ ಆಚರಿಸುವ ಅರ್ಹತೆ ಇಲ್ಲ: ದಲಿತ ಸಂಘರ್ಷ ಸಮಿತಿ ಆಕ್ರೋಶ

    April 6, 2026

    ಮಾ. 24 ರಂದು ತುರುವೇಕೆರೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ: ಕುಂದು ಕೊರತೆ ಸಭೆ

    March 22, 2026

    ಒಳಮೀಸಲಾತಿ ಜಾರಿಗೆ ಆಗ್ರಹ: ತುರುವೇಕೆರೆಯಲ್ಲಿ ಮಾದಿಗ ಸಮುದಾಯದಿಂದ ಬೃಹತ್ ಪ್ರತಿಭಟನೆ

    March 11, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಒಳ ಮೀಸಲಾತಿ ವಿಚಾರದಲ್ಲಿ ಸಣ್ಣ ವ್ಯತ್ಯಾಸಕ್ಕೆ ಜಗಳ ಅನಾವಶ್ಯಕ: ಡಿ.ಕೆ.ಶಿವಕುಮಾರ್

    April 15, 2026

    ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಒಳ ಮೀಸಲಾತಿ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.…

    ‘ಮಾನವೀಯತೆ ಇಲ್ಲದ ಶಿಕ್ಷಣ ಕೇವಲ ಬದುಕುವ ದಾರಿ ಮಾತ್ರ’: ಸಿಎಂ ಸಿದ್ದರಾಮಯ್ಯ

    April 15, 2026

    ಜಾತಿ ವ್ಯವಸ್ಥೆ ತೊಲಗಿದರಷ್ಟೇ ಹಿಂದೂ ಧರ್ಮ ಉಳಿಯಲು ಸಾಧ್ಯ: ಸಚಿವ ಡಾ.ಜಿ.ಪರಮೇಶ್ವರ್

    April 15, 2026

    ಡಾ.ಅಂಬೇಡ್ಕರ್ ಸಂವಿಧಾನ ದೇಶದ ಸಮಾನತೆ ಮತ್ತು ನ್ಯಾಯ ವ್ಯವಸ್ಥೆಗೆ ಬಲವಾದ ಅಡಿಪಾಯ: ಸಚಿವ ಸಂತೋಷ ಎಸ್.ಲಾಡ್

    April 15, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.