ಚಳಿಗಾಲದಲ್ಲಿ ದೇಹದಲ್ಲಿ ಶಾಖವನ್ನು ಉತ್ಪಾದಿಸುವ ಮಸಾಲೆಗಳನ್ನು ಸೇವಿಸುವ ಅಗತ್ಯವಿದೆ, ಅಂಥ ಮಸಾಲೆ ಪದಾರ್ಥಗಳಲ್ಲಿ ಬೆಳ್ಳುಳ್ಳಿಯೂ ಒಂದು.
ಚಳಿಗಾಲದಲ್ಲಿ ನೆಗಡಿ, ಜ್ವರ ಮತ್ತು ಸೋಂಖುಗಳು ಕಾಡುವುದು ಸಾಮಾನ್ಯ. ಇವನ್ನೆಲ್ಲ ಎದುರಿಸಲು ರೋಗನಿರೋಧಕ ಶಕ್ತಿ ಅವಶ್ಯ. ಋತುಮಾನಕ್ಕೆ ಅನುಸಾರ ಆಹಾರ ತೆಗೆದುಕೊಳ್ಳಬೇಕು. ಚಳಿಗಾಲದಲ್ಲಿ ಊಟದಲ್ಲಿ ಕಾಳು ಸೊಪ್ಪು-ತರಕಾರಿಗಳು ಮತ್ತು ಆರೋಗ್ಯಕರ ಮಸಾಲೆ ಇರಬೇಕು. ಬೆಳ್ಳುಳ್ಳಿ ವ್ಯಾಪಕವಾಗಿ ಬಳಕೆಯಾಗುವ ಮಸಾಲೆ ಪದಾರ್ಥ. ಇದರಲ್ಲಿ ವಿಟಮಿನ್‌ಗಳು, ಖನಿಜಗಳು, ಕ್ಯಾಲ್ಸಿಯಂ ಮತ್ತು ಕಬ್ಬಿಣದಲ್ಲಿ ಹೇರಳವಾಗಿವೆ.
ಬೆಳ್ಳುಳ್ಳಿ ಶೀತ ಮತ್ತು ಕೆಮ್ಮನ್ನು ತಡೆಯುತ್ತದೆ. ಸೈನಸೈಟಿಸ್, ಶೀತ ಮತ್ತು ಜ್ವರದ ವಿರುದ್ಧ ಹೋರಾಡಲು ಬಿಸಿ ಸಾರು ಮತ್ತು ಸೂಪ್‌ಗಳಿಗೆ ಬೆಳ್ಳುಳ್ಳಿ ಸೇರಿಸಿದರೆ ಶಮನ ಕಾಣುವುದು. ಬೆಳ್ಳುಳ್ಳಿ ಸೇವನೆ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ದೇಹವನ್ನು ನಿರ್ವಿಷಗೊಳಿಸಲು ಮತ್ತು ಚಯಾಪಚಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಉಸಿರಾಟ ಮತ್ತು ಶ್ವಾಸಕೋಶದ ಆರೋಗ್ಯಕ್ಕೆ ಬೆಳ್ಳುಳ್ಲೀ ಉತ್ತಮ. ಇದು ಚಳಿಗಾಲದಲ್ಲಿ ಜ್ವರ ಮತ್ತು ನೋಯುತ್ತಿರುವ ಗಂಟಲಿನ ಸಮಸ್ಯೆಯನ್ನು ಬಗೆಹರಿಸುತ್ತದೆ.
ಚಳಿಗಾಲದಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚಾಗಿರುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ಕಾಡುತ್ತವೆ. ಬೆಳ್ಳುಳ್ಳಿ ಸೇವನೆ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ. ಬೆಳ್ಳುಳ್ಳಿಯಲ್ಲಿರುವ ಶಾಖದ ಅಂಶ ಹೃದಯವನ್ನು ಆರೋಗ್ಯಕರವಾಗಿಡುತ್ತದೆ. ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ರಕ್ಷಿಸುವಲ್ಲಿ ಬೆಳ್ಳುಳ್ಳಿ ಉತ್ತಮ ಎಂದು ತಜ್ಞರು ಹೇಳುತ್ತಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


