ಬೆಂಗಳೂರು: ಅಸ್ಪೃಷ್ಯತೆಯ ನಿವಾರಣೆಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸರ್ಕಾರಿ ಟಿ.ವಿ.ಚಾನೆಲ್ ಚಂದನವಾಹಿನಿಯಲ್ಲಿ ಡಿಸೆಂಬರ್ 19ರಂದು ‘ಸಮಾನತೆಯ ಕಡೆಗೆ’ ಎಂಬ ಚಲನ ಚಿತ್ರ ಪ್ರಸಾರವಾಗಲಿದೆ.
ಅಸ್ಪೃಶ್ಯತೆ ಎನ್ನುವುದು ಒಂದು ಸಾಮಾಜಿಕ ಪಿಡುಗಾಗಿದ್ದು, ಮಾನವರ ಮೆದುಳಿನಲ್ಲಿ ಕುಳಿತಿರುವ ಕೊಳೆಯಾಗಿದೆ. ಇದನ್ನು ತೆಗೆದು ಹಾಕಬೇಕಾದರೆ, ಜಾಗೃತಿಯೊಂದೇ ಮದ್ದಾಗಿದೆ. ಮುಂದಿನ ಪೀಳಿಗೆ ಅಸ್ಪೃಶ್ಯತೆಯ ಆಚರಣೆಯಿಂದ ಮುಕ್ತವಾಗಿ ಬದುಕುವಂತಾಗಬೇಕು. ಈ ನಿಟ್ಟಿನಲ್ಲಿ ಇಂತಹ ಅನಿಷ್ಠ ಆಚರಣೆಗಳ ವಿರುದ್ಧ ಜನರು ಜಾಗೃತಿ ಹೊಂದಬೇಕಾಗಿದೆ.
ನಮ್ಮ ದೇಹದ ಭಾಗಗಳಿಂದಲೇ ಬೇಧ ಭಾವಗಳು ಆರಂಭಗೊಂಡಿದೆ. ಎಡ ಭಾಗ ಅಶುಭ, ಬಲ ಭಾಗ ಶುಭ ಎಂದು ಆರಂಭವಾಗುವ ಈ ಬೇಧ ಭಾವಗಳು ಮುಂದುವರಿದು, ಜಾತಿ, ಧರ್ಮ, ಕೋಮು, ಬಣ್ಣ, ಬಡವ, ಶ್ರೀಮಂತ ಹೀಗೆ ಪ್ರತಿಯೊಂದರಲ್ಲಿಯೂ ಶ್ರೇಷ್ಠ ಕನಿಷ್ಠವಾಗಿ ಮಾರ್ಪಟ್ಟಿದೆ.
ಇತರ ದೇಶಗಳು ಇಂದು ಸಾಮಾಜಿಕ ಸಮಾನತೆಯಿಂದ ಸರ್ವತೋಮುಖ ಬೆಳವಣಿಗೆ ಹೊಂದುತ್ತಿದ್ದರೆ, ಭಾರತದಲ್ಲಿ ಅಸ್ಪೃಶ್ಯತೆ, ಧರ್ಮಗಳ ನಡುವಿನ ಸಂಘರ್ಷಗಳು ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ದೇಶ ಅಭಿವೃದ್ಧಿಯಾಗಬೇಕಾದರೆ, ಎಲ್ಲರೂ ಸಮಾನರು ಎನ್ನುವ ಭಾವನೆ ಬರಬೇಕು. ಹೀಗಾಗಿ ಮೊದಲು ಅಸ್ಪೃಶ್ಯತೆಯ ನಿವಾರಣೆಗಾಗಿ ನಾವೆಲ್ಲರೂ ಒಂದಾಗಲೇ ಬೇಕಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700