ಅಮರಾವತಿ: ಆಂಧ್ರಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು ವಿರುದ್ಧ ಮಾಜಿ ಸಿಎಂ ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್. ಜಗನ್ ಮೋಹನ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಂದ್ರಬಾಬು ನಾಯ್ಡು ಜನರನ್ನು ವಂಚಿಸಲು ಹಲವು ಅವತಾರಗಳನ್ನು ಎತ್ತಿದ್ದಾರೆ ಎಂದು ಜಗನ್ ಮೋಹನ್ ರೆಡ್ಡಿ ಆರೋಪಿಸಿದ್ದಾರೆ. ಮೊಬೈಲ್ ಫೋನ್‌ಗಳು ಮತ್ತು ಕಂಪ್ಯೂಟರ್ ಗಳನ್ನು ತಾವೇ ಆವಿಷ್ಕರಿಸಿದ್ದಾಗಿ ನಾಯ್ಡು ಅವರು ಎರಡು ದಶಕಗಳಿಂದ ಹೇಳಿಕೊಳ್ಳುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಎಕ್ಸ್/ಟ್ವಿಟರ್ ನಲ್ಲಿ ಬರೆದುಕೊಂಡಿರುವ ಜಗನ್, ಚಂದ್ರಬಾಬು ನಾಯ್ಡು ಅವರು ಜನರನ್ನು ವಂಚಿಸುವುದಕ್ಕಾಗಿ ಕಣ್ಣಿಗೆ ಕಟ್ಟುವಂತೆ ತಂತ್ರಗಳನ್ನು ಮಾಡಲಿದ್ದಾರೆ. ಆ ನಿಟ್ಟಿನಲ್ಲಿ ಹಲವು ಅವತಾರಗಳನ್ನು ಧರಿಸಲಿದ್ದಾರೆ. ಇತ್ತೀಚೆಗಿನ ಶ್ರೀಶೈಲಂ ಸೀ–ಪ್ಲೇನ್ ಭೇಟಿಯೂ ಅಂತಹದೇ ತಂತ್ರವಾಗಿತ್ತು ಎಂದು ಅವರು ಹೇಳಿದರು.
114 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿರುವ ಸೀ–ಪ್ಲೇನ್ ಯೋಜನೆಯಲ್ಲಿ ಹೊಸದೇನೂ ಇಲ್ಲ. ಭಾರತದಲ್ಲಿ ಕೇರಳವು ಮೊದಲ ಬಾರಿಗೆ ಸೀ–ಪ್ಲೇನ್ ಕಾರ್ಯಾಚರಣೆಯನ್ನು 2013ರಲ್ಲಿ ಆರಂಭಿಸಿತ್ತು. ಆದರೆ, ನಂತರ ಸ್ಥಗಿತಗೊಳಿಸಿತು. ಅದೇ ರೀತಿ, ಗುಜರಾತ್ ಸಹ 2020ರಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಿ ಹಿಂಪಡೆದಿತ್ತು ಎಂದು ಅವರು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q