ಶಿವಮೊಗ್ಗ: ಭಾರತೀಯ ಸಂಸ್ಕೃತಿಯ ಪುರಾತನವಾದ ಜಿನ ಭಜನೆಯಿಂದ ಹೊಸ ಕ್ರಾಂತಿಯಾಗಿದ್ದು ಜಿನ ಭಜನೆಯಿಂದ ಸಮಾಜ ಹೊಸ ಹೊಸ ಬದಲಾವಣೆ ಕಂಡಿದೆ ಎಂದು ಜಿನ ಭಜನಾ ಕೇಂದ್ರ ಸಮಿತಿಯ ಸಂಯೋಜಕ ಪಿ. ಅಜಿತ್ ಕುಮಾರ್ ಅಭಿಪ್ರಾಯಪಟ್ಟರು.
ಅವರಿಂದು ಇಲ್ಲಿನ ಹೊಂಬುಜ ಶ್ರೀ ಪದ್ಮಾವತಿ ಜೈನ ಸಮುದಾಯ ಭವನದಲ್ಲಿ ನಡೆದ ಭಾರತೀಯ ಜೈನ್ ಮಿಲನ್ ವಲಯ — 8 ರ ಮಲೆನಾಡು ವಿಭಾಗ ಮಟ್ಟದ ಜಿನ ಭಜನೆ ಸ್ಪರ್ಧೆ 2024 ರ ಸೀಜನ್ 8ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದು ಅನಿತಾ ಸುರೇಂದ್ರ ಕುಮಾರ್ ಅವರು ಸಮಾಜಕ್ಕೆ ನೀಡಿದ ಮಹತ್ವದ ಕೊಡುಗೆ, ಇಂದು ಎಲ್ಲರ ಸಹಕಾರದಿಂದ ಮುನ್ನಡೆಯುತ್ತಿದೆ, ಇದು ಕೇವಲ ದೊಡ್ಡವರಿಗಾಗಿ ಸೀಮಿತವಾಗಿಲ್ಲ ಎಂದ ಅವರು, ಕಿರಿಯರು ಹೆಚ್ಚು ಹೆಚ್ಚು ಪಾಲ್ಗೊಳ್ಳುತ್ತಿರುವುದರಿಂದ ಬಹಳಷ್ಟು ಬದಲಾವಣೆ ಕಂಡಿದೆ, ಈಗ ವಯಸ್ಸಾದವರಿಗೆ ಸುವರ್ಣ ತಂಡ ರೂಪಿಸಲಾಗಿದೆ ಎಂದರು.
ಭಾರತೀಯ ಜೈನ್ ಮಿಲನ್ ವಲಯ — 8ರ ದಾವಣಗೆರೆ ವಿಭಾಗದ ಉಪಾಧ್ಯಕ್ಷ ಹೊಸದುರ್ಗ ಸುಮತಿ ಕುಮಾರ್ ಮಾತನಾಡಿ, ಅನಿತಾ ಸುರೇಂದ್ರ ಕುಮಾರರವರ ಕನಸಿನ ಕೂಸಾಗಿದ್ದು, ಜಿನಭಜನೆ ಹೊಸ ಕ್ರಾಂತಿಯನ್ನು ಎಬ್ಬಿಸಿದೆ, ಜಿನಭಜನೆ ಹಬ್ಬ ಸಂಭ್ರಮದಿಂದ ಕೂಡಿದ್ದು, ಮನೆಮನೆಗಳಲ್ಲಿ ಹರ್ಷೋಲ್ಲಾಸ ತಂದಿದೆ, ಈ ಜಿನ ಭಜನೆಯಿಂದ ಜನ ತಲ್ಲಿನರಾಗಿ ಭಗವಂತನಲ್ಲಿ ಲೀನವಾದಂತೆ ಅನುಭವವಾಗುತ್ತದೆ ಎಂದರು .
ಜಿನ ಭಜನೆಯ ಏಳು ವಿಭಾಗಗಳಿದ್ದು ,ಸಂಘಟನೆ ಸಮಾಜಕ್ಕೆ ಸಂದೇಶವಾಗಿದೆ, ಭಿನ್ನಭಿಪ್ರಾಯ ಮರೆತು ಜಿನಭಜನೆ ತೇರು ಎಳೆಯಬೇಕೆಂದರು. ಭಾರತೀಯ ಜೈನ್ ಮಿಲನ್ ವಲಯ ಎಂಟರ ಮಲೆನಾಡ ವಿಭಾಗದ ಉಪಾಧ್ಯಕ್ಷ ಕೆ. ಯಶೋಧರ ಹೆಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಭಾರತೀಯ ಜೈನ್ ಮಿಲನ್ ವಲಯ –8 ರ ಮಂಗಳೂರು ವಿಭಾಗದ ಸೋಮಶೇಖರ ಶೆಟ್ಟಿ, ಶಿವಮೊಗ್ಗ ಜೈನ್ ಮಿಲನ್ ನ ಪದ್ಮ ಕುಮಾರ್, ಎ.ಪಿ. ಅಪ್ಪಣ್ಣಜ್ಜ, ಮಹಾವೀರ ಹೆಗಡೆ, ಪ್ರಶಾಂತ್ ಹಾರನಹಳ್ಳಿ, ಜ್ಯೋತಿ ನೇಮಿರಾಜು ಲಿಂಗನಮಕ್ಕಿ, ಎಸ.ಪ್ರಕಾಶ್ ,ದಕ್ಷಿಣಂಕ ,ಆರ್ .ಸಂಪತ್ ಕುಮಾರ್ ಪ್ರಕಾಶ್ . ಪಿ.ಗೋಗಿ, ನಿರ್ದೇಶಕರಾದ ಅಲ್ಪನಾ ರೇವಡಿ, ವೀಣಾ ವಿಜಯಕುಮಾರ್, ಜಯಶ್ರೀ ಅಪ್ಪಣ್ಣಜ್ಜ ,ರೋಹಿಣಿ ಪ್ರಶಾಂತ್ ,ಮಾಲತಿ ಕುಬೇರಪ್ಪ, ಸುಜಾತ ಪ್ರಶಾಂತ ಹೊರನಾಡು ಮಹಾವೀರ್ ಪ್ರಸಾದ್ ,ಜಯಶ್ರೀ ಹೊರನಾಡು ,ಸೇರಿದಂತೆ ಶಿವಮೊಗ್ಗ ದಿಗಂಬರ ಜೈನ ಸಮಾಜ ಹಾಗೂ ಪ್ರಿಯಕಾರಿಣಿ ಮಹಿಳಾ ಸಮಾಜದ ಸದಸ್ಯರುಗಳು ಭಾಗವಹಿಸಿದ್ದರು.
ಪ್ರಿಯ ಕಾರಣಿ ಮಹಿಳಾ ಸಮಾಜದ ಅಧ್ಯಕ್ಷೇ ಯಶಸ್ಪತಿ ಹೆಗಡೆ, ಡಾ. ಜೀವoದರ ಜೈನ್, ಕೆ ಜೆ.ಎ.ನಿರ್ದೇಶಕ ರತ್ನಕುಮಾರ್ , ಶಿವಮೊಗ್ಗ ದಿಗಂಬರ ಜೈನ ಸಮಾಜದ ಅಧ್ಯಕ್ಷ ಜಯರಾಜು ಬಿ. ಪಾಂಡೆ, ಭಾರತೀಯ ಜೈನ್ ಮಿಲನ್ ವಲಯ — 8 ರ ಮಲೆನಾಡ ವಿಭಾಗದ ಉಪಾಧ್ಯಕ್ಷ ಯಶೋಧರ ಹೆಗಡೆ, ಕಾರ್ಯದರ್ಶಿ ಡಿ.ಪೂರ್ಣಿಮ ಅಶೋಕ್ ಕುಮಾರ್ , ನಿರ್ದೇಶಕರಾದ ಬಿ.ಡಿ. ಧರ್ಮಪಾಲ್ ಜೈನ್, ದೇವರಾಜು ಜೈನ್ ಕುಪ್ಪಾಡಿ– ವಗಕರೆ, ಸೇರಿದಂತೆ ಜೈನ್ ಮಿಲನ್ ಶಿವಮೊಗ್ಗ , ವಳಗೆರೆ -ಮಾದ್ಲುಗೋಡು, ಕಾನೂರು- -ಹೇರೂರು ,ಹಾರಿಗೆ , ವಗಕೆರೆ, ವಡನ ಬೈಲು– ಹೆನ್ನಿ ಕಳಸ ಸೇರಿದಂತೆ ಮಲೆನಾಡ ಜೈನ ಮಿಲನ್ ಶೃಂಗೇರಿ, ಸೃಷ್ಟಿ ಜೈನ್ ಮಿಲನ್ ಹಾರೇಕೊಪ್ಪ ಜೈನ್ ಮಿಲನ್ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ವಿವಿಧ ಜೈನ ಸಂಘಟನೆಗಳ ಪದಾಧಿಕಾರಿಗಳು, ಶ್ರಾವಕ — ಶ್ರಾವಕಿಯರು ಭಾಗವಹಿಸಿದ್ದರು.
ವೀಣಾ ವಿಜಯ್ ಕುಮಾರ್ ಪ್ರಾರ್ಥಿಸಿದರು. ದೇವರಾಜು ಜೈನ್ ಕುಪ್ಪಡಿ ಸ್ವಾಗತಿಸಿದರು. ಮಾಲತಿ ಕುಬೇರಪ್ಪ ಕಾರ್ಯಕ್ರಮ ನಿರೂಪಿಸಿದರು.
ವರದಿ: ಜೆ. ರಂಗನಾಥ- ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296