ಚಲನಚಿತ್ರದ ಮುಹೂರ್ತ ಸಮಾರಂಭ ನಗರದ ರೇಣುಕಾಂಬ ಸ್ಟುಡಿಯೋ ದಲ್ಲಿ ನೆರೆವೇರಿತು. ತಂಡಕ್ಕೆ ಆಶೀರ್ವದಿಸಲು ನಿರೀಕ್ಷೆಗಿಂತ ಜನ ಸೇರಿದ್ದು ಚಿತ್ರತಂಡಕ್ಕೆ ಸಂತಸ ತಂದು ಕೊಟ್ಟಿದೆ. ಎಲ್ಲಾ ಮಾಧ್ಯಮ ಮಿತ್ರರು ಶುಭಕೋರಿದರು
ತಮ್ಮ ಚಿತ್ರದ ಪೋಸ್ಟರ್ ಗಳಿಂದ ಗಾಂಧಿ ನಗರದಲ್ಲಿ ಭಾರಿ ಸದ್ದು ಮಾಡುತ್ತಿದ್ದು ಹಿಂದೆಂದೂ ಕಾಣ ಸಿಗದ ಸಸ್ಪೆನ್ಸ್ ಕ್ರೈಂ ಥ್ರಿಲರ್ ಕಥೆ ಇದಾಗಿದೆ. ಸಿನಿಮಾ ನೋಡುವ ಪ್ರೇಕ್ಷಕ ಪ್ರಭುವಿಗೆ ಮನೋರಂಜನೆ ಕಟ್ಟಿಟ್ಟ ಬುತ್ತಿ ಜೊತೆಗೆ ಪ್ರತಿಯೊಂದು ದೃಶ್ಯದಲ್ಲೂ ಟ್ವಿಸ್ಟ್ ಇರುತ್ತೆ ಎಂಬುದು ಚಾರ್ಜ್ ಶೀಟ್ ನಿರ್ದೇಶಕರಾದ ಗುರುರಾಜ್ ಕುಲಕರ್ಣಿಯವರ ಅನಿಸಿಕೆ.
ಅಂದಹಾಗೆ ಚಾರ್ಜ್ ಶೀಟ್ ಚಿತ್ರವನ್ನು ಡಾ.ಸುನೀಲ್ ಕುಂಬಾರ್ ಮತ್ತು ಚೆನ್ನೈನ S R ರಾಜನ್ ನಿರ್ಮಿಸುತ್ತಿದ್ದು ಪಶ್ಚಿಮ ಬಂಗಾಳದ ಉಮಾ ಚಕ್ರಬೋರ್ತಿ ಸಹ ನಿರ್ಮಾಪಕರಾಗಿದ್ದಾರೆ. ಕಥೆ ಸ್ವತಃ ನಿರ್ಮಾಪಕರಾದ ಡಾ. ಸುನೀಲ್ ಕುಂಬಾರ್ ಬರೆದಿದ್ದು ಚಿತ್ರಕತೆ ಸಂಭಾಷಣೆ ಸಾಹಿತ್ಯ ನಿರ್ದೇಶನ ಗುರುರಾಜ್ ಕುಲಕರ್ಣಿ ಮಾಡುತ್ತಿದ್ದಾರೆ. ರಂಗಸ್ವಾಮಿ ಛಾಯಾಗ್ರಾಹಣ, M ತಿರ್ಥ್ತೋ ಸಂಗೀತ, ಥ್ರಿಲರ್ ಮಂಜು ಸಾಹಸ ಚಿತ್ರಕ್ಕಿದ್ದು ಪ್ರಮುಖ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರ್, ಬಾಲಾಜಿ ಶರ್ಮ, ಸಾಗರ್, ನಾಗೇಂದ್ರ ಅರಸ್, ಬಾಲ ರಾಜವಾಡಿ, ಗುರುರಾಜ್ ಹೊಸಕೋಟೆ ಮತ್ತು ಅತಿಥಿ ಪಾತ್ರವೊಂದರಲ್ಲಿ ಸಂಜನಾ ನಾಯ್ಡು ಬಣ್ಣ ಹಚ್ಚಿದ್ದಾರೆ.
ಇನ್ನೂ ಕಥೆಯ ವಿಷಯಕ್ಕೆ ಬರುವುದಾದರೆ ಒಂದು ಶಾಲಾ ಬಾಲಕಿಯ ಸಾವಿನ ಸುತ್ತ ಸುತ್ತುವ ಕಥೆ ಇದಾಗಿದ್ದು ರೋಚಕ ತನಿಖೆಯೊಂದಿಗೆ ಶುರುವಾಗಿ ಅಷ್ಟೇ ರೋಚಕವಾಗಿ ತಿರುವು ಪಡೆದುಕೊಂಡು ಸಾಗುತ್ತೆ. ಪ್ರೇಕ್ಷಕ ಕೊಟ್ಟ ದುಡ್ಡಿಗೆ ಡಬ್ಬಲ್ ಮನೋರಂಜನೆ ನೀಡುವ ಭರವಸೆ ಚಿತ್ರತಂಡದ್ದು. ಕಥೆ ಮತ್ತು ವಿಭಿನ್ನ ಚಿತ್ರಕಥೆಯೆ ಚಿತ್ರದ ಜೀವಾಳ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB